Advertisement

Thirthahalli: ಹೊಸ ತುಂಗಾ ಸೇತುವೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ; ಮೂವರ ವಿರುದ್ಧ ಕೇಸ್

03:09 PM Feb 28, 2024 | Kavyashree |

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169ರ ಕುರುವಳ್ಳಿಯಿಂದ 169 (ಎ) ಬಾಳೆಬೈಲುವಿಗೆ ಸಂಪರ್ಕ ಕಲ್ಪಿಸುವ ನೂತನ ತುಂಗಾ ಸೇತುವೆಯನ್ನು ನಿರ್ಮಿಸಲಾಗಿದ್ದು, ಸೇತುವೆ ನೋಡಲು ಪ್ರವಾಸಿಗರು ಮತ್ತು ವಾಯುವಿಹಾರ ಮಾಡುವ ಸ್ಥಳೀಯರು ಕುಟುಂಬ ಸಮೇತರಾಗಿ ಈ ಸೇತುವೆ ಬಳಿ ಬರುತ್ತಾರೆ.

Advertisement

ಆದರೆ ಈ ಸ್ಥಳದಲ್ಲಿ ಕೆಲ ಪುಂಡರ ಹಾವಳಿ ಜೋರಾಗಿದ್ದು ಬೈಕ್ ವೇಗವಾಗಿ ಚಲಾಯಿಸುವುದು, ಪಾರ್ಟಿ ಮಾಡುವುದು, ಫೋಟೋ ತೆಗೆಯುವ ದೃಷ್ಟಿಯಿಂದ ಇತರರಿಗೆ ತೊಂದರೆ ಕೊಡುವುದು, ಹೀಗೆ ಹಲವು ವಿಷಯಗಳನ್ನು ಸ್ಥಳೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು.

ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರು ಕೆಲ ದಿನಗಳ ಹಿಂದೆ ದಿಡೀರ್ ಕಾರ್ಯಾಚರಣೆ ನಡೆಸಿ ಕೆಲ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದರು.

ಆದರೆ ಇದೀಗ ಮತ್ತೆ ಸೇತುವೆಯ ಮೇಲೆ ಮಧ್ಯಪಾನ ಸೇವಿಸಿ ಬೈಕ್ ಚಲಾವಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೂರು ಜನರ ಮೇಲೆ ಕೇಸ್ ದಾಖಲು ಮಾಡಿ ಎರಡು ಬೈಕುಗಳನ್ನು ವಶಪಡಿಸಿಕೊಂಡಿದ್ದು ಡಿವೈಎಸ್ಪಿ  ಅವರ ಈ ದಿಡೀರ್ ಕಾರ್ಯಾಚರಣೆಗೆ ಪಟ್ಟಣದ ಸಾರ್ವಜನಿಕರು  ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next