Advertisement
ವಿದ್ಯಾದೇಗುಲದ ಎದುರೇ ಕೊಳಚೆ ನೀರು …. ಸುತ್ತಲಿನ ಪರಿಸರ ಗಬ್ಬು ವಾಸನೆ ಎಂಬ ಬಗ್ಗೆ “ಉದಯವಾಣಿ ಸುದಿನ’ದಲ್ಲಿ ಕೆಲ ದಿನಗಳ ಹಿಂದೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಮರು ದಿನವೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ರೀತಿ ಗಲೀಜು ನೀರು ರಸ್ತೆಗೆ ಬಿಡುವ ವಸತಿ ಸಮುಚ್ಚಯ, ಮನೆಗಳಿಗೆ ಸೂಚನೆ ನೀಡಿದ್ದರು. ಬಳಿಕ ಈ ಪ್ರದೇಶದಲ್ಲಿ ಸ್ವತ್ಛತೆ ಕೆಲಸ ನಿರ್ವಹಿಸಿದ್ದರು. ಇದೀಗ ಇನ್ನೂ ಆ ಭಾಗದಲ್ಲಿ ಸಮಸ್ಯೆ ಪೂರ್ಣ ಪ್ರಮಾಣದ ಪರಿಹಾರವಾಗಿಲ್ಲ. ಪಾಲಿಕೆ ಅಧಿಕಾರಿಗಳು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಈ ಭಾಗದಲ್ಲಿ ವಸತಿ ಸಮುಚ್ಚಯ ಸಹಿತ ಕೆಲವೊಂದು ಮನೆಗಳಿಂದ ಗಲೀಜು ನೀರು ರಸ್ತೆಗೆ ಬಿಡುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಆ ಮನೆಯವರಿಗೆ ಸೂಚನೆ ನೀಡಲಾಗಿದೆ. ಶಾಲೆಯ ಎದುರು ಗಲೀಜು ನೀರು ಹರಿಯುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
Advertisement
ಇನ್ನೂ ದೊರಕಿಲ್ಲ ಸಮಸ್ಯೆಗೆ ಪರಿಹಾರ : ವಿದ್ಯಾದೇಗುಲದ ಎದುರೇ ಕೊಳಚೆ ನೀರು
04:24 PM Feb 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.