Advertisement

ಚರಂಡಿ ನೀರು ರಸ್ತೆಗೆ : 9ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ!

01:28 PM Jan 09, 2021 | Team Udayavani |

ಕೂಡ್ಲಿಗಿ: ಆಂಜನೇಯ ದೇವಸ್ಥಾನದ ಪಕ್ಕದ ಶಾಲಾ ಆವರಣದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರಸ್ತೆ ಮೇಲೆ ಕೊಳಚೆ ನೀರು ಹರಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.

Advertisement

ತಿಂಗಳಿನಿಂದ ರಸ್ತೆ ಬದಿಯ ಚರಂಡಿಯಲ್ಲಿ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿಯಲ್ಲಿ ನೀರು ನಿಂತಲ್ಲೇ ನಿಂತಿರುವುದರಿಂದ ಕಸವು ಸೇರಿ ಕೊಳೆಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಸುತ್ತಮುತ್ತಲಿನ ಮನೆಗಳ ವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ
ನಿರ್ಮಾಣವಾಗುವಂತಿದೆ. ಇದಕ್ಕೆ ಪಂಚಾಯಿತಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರ ಬೇಜವಾಬ್ದಾರಿತನವೇ ಕಾರಣ ಎಂದು 9ನೇ ವಾರ್ಡಿನ ಕೆಕೆಹಟ್ಟಿಯ ಗ್ರಾಮದವರು ದೂರಿದ್ದಾರೆ. ಸ್ವತ್ಛತೆಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಸಾಂಕ್ರಾಮಿಕ ರೋಗ ಭೀತಿ: ನಿತ್ಯ ಇದೇ ರಸ್ತೆ ಮೇಲೆ ಪಟ್ಟಣದ ಸದಸ್ಯರು ಓಡಾಡುತ್ತಾರೆ. ಆದರೆ ಅವರಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಮನಸ್ಸಿಲ್ಲದಾಗಿದೆ. ನೂತನವಾಗಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದರೂ ಸಹ ಸರಿಯಾದ ನಿರ್ವಹಣೆ ಇಲ್ಲದೇ ಚರಂಡಿಯಲ್ಲಿ ಕಲುಷಿತ ನೀರು ಸೇರಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಸಿದೆ. ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವತ್ಛತಾ ಕಾರ್ಯ ಮಾಡಿಲ್ಲ. ಔಷಧ ಸಿಂಪಡಿಸಿಲ್ಲ. ಚರಂಡಿ
ಕೊಳಚೆನೀರಿನಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ.

ಪಪಂನಿಂದ ಸ್ವತ್ಛತೆ ಮಾಡುತ್ತಿಲ್ಲ: ತೆರೆದ ಚರಂಡಿಗಳು ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳು ತೊಂದರೆಪಡುವಂತಾಗಿದೆ. ತಿಂಗಳು ಕಳೆದರೂ ಸ್ವತ್ಛಗೊಳ್ಳದ ಚರಂಡಿಗಳಿಂದ ರೋಗ ಭೀತಿ ಎದುರಾಗಿದೆ. ಇದರಿಂದಾಗಿ ನಿವಾಸಿಗಳು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ನಿವಾಸಿಗಳ ಸಂಕಷ್ಟಕ್ಕೆ ಪಟ್ಟಣ ಪಂಚಾತಿ ಆರೋಗ್ಯ ನಿರೀಕ್ಷಕಿ ಗೀತಾ ಅವರು ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ಗುಡ್ಡದ ರಾಜು, ಎಂ. ಮೂರ್ತಿ, ಮಾರೇಶ, ಓಬಳೇಶ, ಬಿ. ತಿರುಪತಿ, ನಾಗರಾಜ್‌, ಅಜ್ಜಯ್ಯ ಆರೋಪಿಸಿದ್ದಾರೆ.

Advertisement

ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ಸ್ವತ್ಛತೆಗೆ ಮುಂದಾಗುತ್ತೇನೆ. ಸಾರ್ವಜನಿಕರು ಚರಂಡಿಯಲ್ಲಿ ಕಸವನ್ನು ಹಾಕುವುದನ್ನು ಕಡಿಮೆ ಮಾಡಿ, ಚರಂಡಿ ಮೇಲ್ಭಾಗದಲ್ಲಿ ಒತ್ತುವರಿ ಮಾಡಿದಾಗ ಚರಂಡಿ ಸ್ವತ್ಛತೆ ಹೇಗೆ ಮಾಡಲು ಸಾಧ್ಯ. ನಮ್ಮ ಪೌರ ಕಾರ್ಮಿಕರನ್ನು ಮನುಷ್ಯರಂತೆ ಕಾಣಿರಿ, ಸಾರ್ವಜನಿಕರು ಸಹಕರಿಸಿ.

– ಸಿ. ಪಕೃದ್ದೀನ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಕೆ. ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next