Advertisement
ಉಡುಪಿ : ಸ್ವತಃ ಉಡುಪಿ ನಗರದಲ್ಲೂ ಸಮರ್ಪಕವಾದ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇರದಿರುವುದು ಸುತ್ತಲಿನ ಪ್ರದೇಶ ಹಾಗೂ ಜಲಮೂಲ ಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ.
ನಗರಸಭೆ ವ್ಯಾಪ್ತಿಯ ಶೇ. 17ರಷ್ಟು ಪ್ರದೇಶದಲ್ಲಿ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಒಳ ಚರಂಡಿ ವ್ಯವಸ್ಥೆ ಇದ್ದರೂ, ಅದರ ಆರೋಗ್ಯ ಕೆಟ್ಟಿದೆ. ಆಗಿನ ಜನಸಂಖ್ಯೆಯನುಸಾರ ನಿರ್ಮಿಸಲಾಗಿದ್ದ ಒಳ ಚರಂಡಿಗಳು, ನಗರ ಬೆಳೆದಂತೆ ಒತ್ತಡ ಹೆಚ್ಚಾಗಿ ಪ್ರಯೋಜನಕ್ಕೆ ಬಾರದಾಗಿವೆ.
Related Articles
Advertisement
ಹೊಸ ಪ್ರಸ್ತಾವನೆಹೊಸ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸಲಾಗಿದೆ. ಪ್ರತೀ 30 ಮೀಟರ್‌ಗೆ ಒಂದರಂತೆ 5,600 ಮ್ಯಾನ್ ಹೋಲ್, 5 ವೆಟ್‌ವೆಲ್‌ಗಳು ನಿರ್ಮಾಣವಾಗಲಿವೆ. ಈಗ ರಾಜ್ಯ ಸರಕಾರ ಒಳ ಚರಂಡಿ ಪ್ರಸ್ತಾವನೆಗೆ ಅನುಮೋದನೆ ಕೊಟ್ಟು ಅನುದಾನ ನೀಡಬೇಕಿದೆ.
ನಗರದ ಎಲ್ಲ ತ್ಯಾಜ್ಯವು ಇಂದ್ರಾಣಿ ನದಿಯ ಒಡಲು ಸೇರಿ ಕಲುಷಿತವಾಗಿದ್ದು, ಇಂದ್ರಾಣಿ ನದಿಯನ್ನು ಪುನಶ್ಚೇತನಗೊಳಿಸಬೇಕಿದೆ. ಇಂದ್ರಾಳಿಯಿಂದ ಕಲ್ಮಾಡಿವರೆಗೂ ನಗರದ ಒಳ ಚರಂಡಿಯ ತ್ಯಾಜ್ಯ ನೀರು ಮಳೆ ನೀರಿನ ಚರಂಡಿ ಮೂಲಕ ಇಂದ್ರಾಳಿಯನ್ನು ಸೇರುತ್ತಿದೆ. ಇಲ್ಲಿನ ನೀರು ಬಣ್ಣ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ನಿಟ್ಟೂರು ಎಸ್‌ಟಿಪಿ ಘಟಕದಿಂದಲೂ ಕೊಳಚೆ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡಲಾಗುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ : ಉಕ್ರೇನ್: ಛತ್ತೀಸ್‌ಗಢದ ವಿದ್ಯಾರ್ಥಿಗಳ ವಾಪಸಾತಿಯ ವೆಚ್ಚ ಭರಿಸುವ ಸರಕಾರ ಎಲ್ಲೆಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ?
ನಗರದಲ್ಲಿ ಕೆಲವೆಡೆ ತುರ್ತಾಗಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಿಟ್ಟೂರು-ಬನ್ನಂಜೆ ಸಂಪರ್ಕಿಸುವ ಗರಡಿ ರಸ್ತೆಯಲ್ಲಿ ಉಕ್ಕಿ ಹರಿಯುತ್ತಿದ್ದ ಒಳಚರಂಡಿ ಮ್ಯಾನ್‌ಹೋಲ್ ಅನ್ನು ಕೊನೆಗೂ ಸರಿಪಡಿಸಲಾಗಿದೆ. ಒಳಚರಂಡಿಯಿಂದ ಕೊಳಚೆ ನೀರು ಸೋರಿಕೆಯಾಗಿ ಸುತ್ತಲಿನ ಪರಿಸರದಲ್ಲಿ ಕೊಳಚೆ ನೀರಿನ ಕೆರೆ ಸೃಷ್ಟಿಯಾಗಿತ್ತು. ನಿಟ್ಟೂರು, ಬನ್ನಂಜೆ ಮಾರ್ಗವಾಗಿ ಸಾಕಷ್ಟು ಮಂದಿ ನಿತ್ಯ ಪ್ರಯಾಣಿಸುತ್ತಿದ್ದು, ಕಿರಿಕಿರಿ ಅನುಭವಿಸುತ್ತಿದ್ದರು. ನಿಟ್ಟೂರು- ಮೂಡ ನಿಡಂಬೂರು ಬಬ್ಬುಸ್ವಾಮಿ ಗರೋಡಿವರೆಗೆ ರೂಪಿಸಿದ್ದ ವ್ಯವಸ್ಥಿತ ಒಳ ಚರಂಡಿ ಯೋಜನೆ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಜಾರಿಯಾಗಿರಲಿಲ್ಲ. ಈಗ 56 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲದೆ ಕಲ್ಸಂಕ, ಅಂಕದಕಟ್ಟೆ, ಗುಂಡಿಬೈಲು ಅಂಬಾಗಿಲು ಮೂಲಕ ಎಸ್‌ಟಿಪಿ ತಲುಪುವ ಯುಜಿಡಿ ಮುಖ್ಯ ಪೈಪ್‌ಲೈನ್ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಸಮಸ್ಯೆಗಳ ಬಗ್ಗೆ “ಉದಯವಾಣಿ’ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು ವಿಶೇಷ ಅನುದಾನದ ಮೂಲಕ ಯುಜಿಡಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದ್ದಾರೆ.