Advertisement

ವಿಟ್ಲ: ಆಡಳಿತಕ್ಕೆ ಮರೆತೇ ಹೋದ ಚರಂಡಿ : ಸದ್ಯ ಹೂಳೆತ್ತುವ ಯೋಜನೆ ಕಾಣುವುದಿಲ್ಲ

09:12 PM Apr 02, 2022 | Team Udayavani |

ವಿಟ್ಲ: ಸಾಮಾನ್ಯವಾಗಿ ವಿಟ್ಲ ಹೋಬಳಿಯಲ್ಲಿ ಮಳೆಗಾಲಕ್ಕೂ ಮುನ್ನ ಚರಂಡಿ ಹೂಳೆತ್ತುವ ಯೋಜನೆ ಜಾರಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆ ಕೊರೊನಾ ರೋಗದ ಭೀತಿ ಆರಂಭವಾಗುವ ಮುನ್ನ ಒಂದೆರಡು ವರ್ಷ ಕಲ್ಲಡ್ಕ ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯ ಚರಂಡಿಗಳ ಹೂಳೆತ್ತಿ ರಸ್ತೆಯನ್ನು ಸುರಕ್ಷಿತಗೊಳಿಸಲು ಕ್ರಮ ಕೈಗೊಂಡಿತ್ತು. ಪ್ರಸ್ತುತ ಈ ರಸ್ತೆಯಲ್ಲಿ ಎರ್ಮೆನಿಲೆಯಿಂದ ಒಕ್ಕೆತ್ತೂರುವರೆಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿ ಪೂರ್ತಿಯಾಗುವುದರೊಳಗೆ ಸುಸಜ್ಜಿತ ಚರಂಡಿಗಳನ್ನು ನಿರೀಕ್ಷಿಸಬಹುದು. ಆದರೆ ವಿಟ್ಲ ಪೇಟೆಯಲ್ಲಿ ಚರಂಡಿ ಹೂಳೆತ್ತುವ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.

Advertisement

ಎಲ್ಲ ಚರಂಡಿಗಳಲ್ಲೂ ಹೂಳು, ಕಸಕಡ್ಡಿಗಳು, ಪೊದರು, ಕೆಸರು, ಪ್ಲಾಸ್ಟಿಕ್‌ ತುಂಬಿಕೊಂಡಿದೆ. ಈ ಬಗ್ಗೆ ಕ್ರಮಕೊಳ್ಳದೆ ಇದ್ದರೆ ಮಳೆಗಾಲದಲ್ಲಿ ವಿಟ್ಲ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದ ಚರಂಡಿಯಲ್ಲಿ ಹೂಳು ಹಾಗೂ ಪೊದೆ ತುಂಬಿ ನೀರಿನ ಹರಿವಿಗೆ ಅಡ್ಡಿಯಾಗಲಿದೆ.

ಇದನ್ನೂ ಓದಿ : ಬಟ್ಲರ್ ಆರ್ಭಟಕ್ಕೆ ಬೆಚ್ಚಿಬಿದ್ದ ಮುಂಬೈ : ರಾಜಸ್ಥಾನಕ್ಕೆ ಭರ್ಜರಿ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next