Advertisement

ಬತ್ತಿದ ತುಂಗಭದ್ರೆ: ಅನ್ನದಾತನಿಗೆ ಹೆಚ್ಚಿದ ಆತಂಕ

03:17 PM Jul 13, 2020 | Suhan S |

ಕುರುಗೋಡು: ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನದಿ ದಂಡೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನದಿ ದಂಡೆಯ ಮಣ್ಣೂರು, ಸೂಗೂರು, ರುದ್ರಪಾದ, ನಡಿವಿ, ಮಣ್ಣೂರು ಕ್ಯಾಂಪ್‌, ಮುದ್ದಟನೂರು, ದೊಡ್ಡರಾಜ್‌ ಕ್ಯಾಂಪ್‌, ಸಿರಿಗೇರಿ, ಗುಂಡಿಗನೂರು, ಹಾವಿನಾಳ ಸೇರಿದಂತೆ ಬಹುತೇಕ ಗ್ರಾಮದ ರೈತರು ಈಗಾಗಲೇ ಅಲ್ಪ ಸ್ವಲ್ಪ ಭತ್ತ ನಾಟಿ ಮಾಡಿದ್ದಾರೆ. ಬೆಳೆಗಳಿಗೆ ಕಾಲುವೆಗಳಲ್ಲಿ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೆ ಬೆಳೆಗಳು ಒಣಗಲು ಆರಂಭಿಸಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಇದರ ಸಮಸ್ಯೆ ಅರಿತಿರುವ ಕೆಲ ರೈತರು ನದಿಯಲ್ಲಿ ಹರಿ ಮಾಡಿ ಬಸಿ ನೀರನ್ನು ಸಸಿ ಮಡಿಗಳಿಗೆ ಮತ್ತು ನಾಟಿ ಮಾಡಿದ ಭತ್ತದ ಬೆಳೆಗಳಿಗೆ ಹರಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ನದಿಯಲ್ಲಿ ದೋಬಿಘಾಟ್‌ ಮೂಲಕ ನಿತ್ಯ ಜನರನ್ನು ನದಿ ದಡ ಸೇರಿಸಲು ಲಕ್ಷಾನುಗಟ್ಟಲೇ ವೆಚ್ಚ ನೀಡಿ ವರ್ಷ ಪೂರ್ತಿಯಂತೆ ರೈತ ಒಪ್ಪಂದ ಮಾಡಿಕೊಂಡು ಟೆಂಡರ್‌ ಪಡೆದಿದ್ದು ಸದ್ಯ ನದಿಯಲ್ಲಿ ನೀರು ಇಲ್ಲದ ಕಾರಣ ದೋಬಿಘಾಟ್‌ ಸಹಾಯವಿಲ್ಲದೆ ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ನದಿ ದಡ ಸೇರುತ್ತಿದ್ದು, ಟೆಂಡರ್‌ ಪಡೆದ ರೈತ ನಷ್ಟಕ್ಕೆ ಸಿಲುಕಿದ್ದಾನೆ. ಘಿ ಸಿರುಗುಪ್ಪ, ಬಳ್ಳಾರಿ, ಕುಡುತಿನಿ, ಕುರುಗೋಡು ಭಾಗದ ಸುತ್ತಮುತ್ತ ಜನರು ಸಿಂಧನೂರು, ಕಾರಟಗಿ, ರಾಯಚೂರು, ಕನಕಗಿರಿ ಭಾಗಕ್ಕೆ ತೆರಳಬೇಕಾದರೆಕಂಪ್ಲಿ ಕೋಟೆಯ ಸೇತುವೆ ದಾಟಿಕೊಂಡು ಗಂಗಾವತಿ ಮೂಲಕ ತೆರಳಬೇಕಾಗಿದೆ. ಸದ್ಯ ನದಿಯಲ್ಲಿ ನೀರು ಬತ್ತಿರುವುದರಿಂದ ಮಣ್ಣೂರು ಮತ್ತು ಉಳೆನೂರು ತುಂಗಭದ್ರಾ ನದಿಯ ಮಧ್ಯದಲ್ಲಿ ಹೋಗುವುದಕ್ಕೆ ತುಂಬ ಅನುಕೂಲವಾಗಿದ್ದು, ಈ ಮಾರ್ಗದ ಮೂಲಕ ಪ್ರಯಾಣ ಬೆಳಸುತ್ತಿದ್ದಾರೆ.

ತುಂಗಭದ್ರಾ ಡ್ಯಾಂನಲ್ಲಿ 12 ಟಿಎಂಸಿ ನೀರು ಸಂಗ್ರಹಣೆ ಇದ್ದು ತುಂಗಾ ಜಲಾಶಯದಿಂದ 25 ಸಾವಿರ ಕ್ಯೂಸೆಕ್‌ ನೀರು ಬರುತ್ತಿದೆ. ಒಟ್ಟಾರೆ ಈ ತಿಂಗಳಲ್ಲಿ 40 ಟಿಎಂಸಿ ನೀರು ಸಂಗ್ರಹಣೆ ಅಗುವ ಸಾಧ್ಯತೆ ಇದೆ. ಆದ್ದರಿಂದ ಕಾಲುವೆಗಳಿಗೆ ನೀರು ಬಿಡುವಂತೆ ತಿಳಿಸಲಾಗಿದೆ. ನದಿ ಭಾಗದಲ್ಲಿ ಆಗಾಗೆ ಮಳೆಯಾಗುತ್ತಿದ್ದು ನೀರಿನ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಸಚಿವರ ಮತ್ತು ಟಿಬಿ ಬೋರ್ಡ್‌ ಅಧಿ ಕಾರಿಗಳ ಗಮನಕ್ಕೆ ತಂದು ನೀರು ಬಿಡಿಸುವ ಕೆಲಸ ಮಾಡುತ್ತೇನೆ. ದರೂರು ಪುರುಷೋತ್ತಮಗೌಡ, ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ

 

-ಸುಧಾಕರ್‌ ಮಣ್ಣೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next