Advertisement

ಕಾಶ್ಮೀರದಲ್ಲಿ ಪಾಕ್‌ ಹೆರಾಯಿನ್‌ ವಶ, ಮೂವರು ಅರೆಸ್ಟ್‌

04:29 PM Aug 10, 2018 | Team Udayavani |

ಹೊಸದಿಲ್ಲಿ : ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮೂವರು ಸ್ಮಗ್ಲರ್‌ ಗಳನ್ನು ಶ್ರೀನಗರದಲ್ಲಿ ಬಂಧಿಸಿ, ಅವರಿಂದ ಪಾಕ್‌ನಿಂದ ಕಳ್ಳಸಾಗಣೆಯಾಗಿ ಬಂದಿದ್ದ 627 ಗ್ರಾಂ ಹೆರಾಯಿನ್‌ ವಶಪಡಿಸಿಕೊಂಡರು. 

Advertisement

ಈ ಮಾದಕ ದ್ರವ್ಯ ಕಾಶ್ಮೀರದಿಂದ ಪಂಜಾಬ್‌ ಗೆ ರವಾನೆಯಾಗುವುದಿತ್ತು ಎಂದು ಗೊತ್ತಾಗಿದೆ.

ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಶ್ರೀನಗರದ ಬಟ್ವಾರಾ ಪ್ರದೇಶದಲ್ಲಿ ಶಂಕಿತ ವಾಹನವೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹೆರಾಯಿನ್‌ ಪತ್ತೆಯಾಯಿತು. ಅಂತೆಯೇ ಮೂವರು ಸ್ಮಗ್ಲರ್‌ ಗಳನ್ನು ಬಂಧಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next