Advertisement

ಭರ್ಜರಿ ಬೇಟೆ; 110 ಕೆಜಿ ಚಿನ್ನ ವಶ, ಸ್ಮಗ್ಲಿಂಗ್ ಜಾಲದ ಕಿಂಗ್ ಪಿನ್ ಸೆರೆ

02:44 PM Mar 31, 2019 | Nagendra Trasi |

ಮುಂಬೈ: ಡೈರೆಕ್ಟೋರೇಟ್ ರೆವಿನ್ಯೂ ಆಫ್ ಇಂಟೆಲಿಜೆನ್ಸ್ (ಡಿಆರ್ ಐ) ಭರ್ಜರಿ ಬೇಟೆಯಾಡಿದ್ದು, ಬರೋಬ್ಬರಿ 110 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳುವ ಮೂಲಕ ಚಿನ್ನ ಕಳ್ಳಸಾಗಣೆಯ ದೊಡ್ಡ ಜಾಲವನ್ನು ಬೇಧಿಸಿದೆ.

Advertisement

ಚಿನ್ನ ಕಳ್ಳಸಾಗಣೆಯ ಜಾಲವನ್ನು ಬೇಧಿಸಿರುವ ಡಿಆರ್ ಐ, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದೆ. ಹೀಗೆ ಕಳ್ಳಸಾಗಣೆಯಲ್ಲಿ ತಂದ ಚಿನ್ನವನ್ನು ಸರಗಳನ್ನಾಗಿ ಮಾಡಿ ಝವೇರಿ ಬಜಾರ್ ನ ಜ್ಯುವೆಲ್ಲರ್ಸ್ ಗೆ ಮಾರಾಟ ಮಾಡಿ, ಹಣವನ್ನು ಹವಾಲಾ ಜಾಲದ ಮೂಲಕ ದುಬೈಗೆ ಕಳುಹಿಸುವುದಾಗಿ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಪ್ರಕರಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕಿಂಗ್ ಪಿನ್, ಅಮೆರಿಕ, ಕೇರಳದಲ್ಲಿ ಹಲವಾರು ಕಂಪನಿಗಳ ಒಡೆಯನಾಗಿರುವ, ಕೋಟ್ಯಧೀಶ ಉದ್ಯಮಿ ನಿಸಾರ್ ಅಲಿಯಾರ್ (43ವರ್ಷ) ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.

ಇತರೆ ಬಂಧಿತ ಆರೋಪಿಗಳು ಶೋಯೆಬ್ ಮೆಹಮೂದ್ ಝೋರಾದಾರ್ ವಾಲಾ(47ವರ್ಷ), ಆತನ ಮಗ ಅಬ್ದುಲ್ ಝೋರಾದಾರ್ ವಾಲಾ(26ವರ್ಷ), ಝವೇರಿ ಬಜಾರ್ ಜ್ಯುವೆಲ್ಲರ್ಸ್ ನ ಮನೋಜ್ ಗಿರಿಧರ್ ಲಾಲ್ ಜೈನ್(32), ಹ್ಯಾಪಿ ಅರವಿಂದ್ ಕುಮಾರ್ ಧಾಕಾಡ್(34), ಹವಾಲಾ ಆಪರೇಟರ್ ಅಕ್ವಿಲ್ ಫ್ರೂಟ್ ವಾಲಾ(39) ಮತ್ತು ಝೋರಾದಾರ್ ವಾಲಾ ಸಿಬ್ಬಂದಿ ಶೇಕ್ ಅಬ್ದುಲ್ ಅಹದ್(32).

ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು 110 ಕೆಜಿ ಚಿನ್ನ ಹಾಗೂ ಝೋರಾದಾರ್ ವಾಲಾ ಮತ್ತು ಹ್ಯಾಪಿ ಧಾಕಾಡ್ ಮನೆ, ಕಚೇರಿ ಮೇಲೆ ದಾಳಿ ನಡೆಸಿ 1.81 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಚಿನ್ನ ಡಿಸ್ಕ್, ವಯರ್, ರಾಡ್ ಹಾಗೂ ರೋಪ್ ಮಾದರಿಯಲ್ಲಿ ತಯಾರಿಸಿಟ್ಟಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next