Advertisement

Bigg Boss OTT 3: ಈ ಬಾರಿ ಸಲ್ಮಾನ್‌ ಖಾನ್ ಅನುಮಾನ; ಬೇರೆ ನಿರೂಪಕರತ್ತ ಆಯೋಜಕರ ಚಿತ್ತ

12:54 PM May 13, 2024 | Team Udayavani |

ಮುಂಬಯಿ: ಹಿಂದಿ ಬಿಗ್‌ ಬಾಸ್‌ ಓಟಿಟಿಯ ಮೂರನೇ ಸೀಸನ್‌ ಬಗ್ಗೆ ದಿನಕಳೆದಂತೆ ಒಂದೊಂದೇ ಸುದ್ದಿಗಳು ಹರಿದಾಡುತ್ತಿದೆ. ಶೀಘ್ರದಲ್ಲಿ ಶೋ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಈ ಬಾರಿ ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವುದರ ಬಗ್ಗೆ ಗೊಂದಲ ಉಂಟಾಗಿದೆ.

Advertisement

ಹಿಂದಿ ಬಿಗ್ ಬಾಸ್‌ ಹಾಗೂ ಓಟಿಟಿ ಸೀಸನ್‌ ನ್ನು ಹೆಚ್ಚಾಗಿ ಇದುವರೆಗೆ ಸಲ್ಮಾನ್‌ ಖಾನ್‌ ಅವರೇ ನಡೆಸಿಕೊಟ್ಟಿದ್ದಾರೆ. ಈ ಬಾರಿ ಸಲ್ಮಾನ್‌ ಖಾನ್‌ ಕಾರ್ಯಕ್ರಮವನ್ನು ನಡೆಸಿಕೊಡುವುದು ಅನುಮಾನ ಎನ್ನಲಾಗುತ್ತಿದೆ.

ಸಲ್ಮಾನ್‌ ಖಾನ್‌ ಅವರ ಸಿನಿಮಾದ ಚಿತ್ರೀಕರಣದ ಶೆಡ್ಯೂಲ್‌ ಈಗಾಗಲೇ ನಿಗದಿಯಾಗಿದ್ದು, ಈ ನಡುವೆ ಬಿಗ್‌ ಬಾಸ್‌ ಗಾಗಿ ಡೇಟ್‌ ಹೊಂದಿಸುವುದು ಕಷ್ಟವೆಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಈ ಕಾರಣದಿಂದ ಕಾರ್ಯಕ್ರಮದ ನಿರ್ಮಾಪಕರು ಅನಿಲ್ ಕಪೂರ್, ಕರಣ್ ಜೋಹರ್ ಮತ್ತು ಸಂಜಯ್ ದತ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹೇಗಾದರೂ ಸಲ್ಮಾನ್‌ ಅವರನ್ನೇ ʼಬಿಗ್‌ ಬಾಸ್‌ ಓಟಿಟಿ-3ʼ ಗೆ ಕರೆತರುವ ಪ್ರಯತ್ನವನ್ನು ಆಯೋಜಕರು ಮಾಡುತ್ತಿದ್ದಾರೆ ಎನ್ನಲಾಗಿದೆ.

Advertisement

ಕರಣ್ ಅವರು ಬಹುಶಃ ಚಿತ್ರೀಕರಣದಲ್ಲಿ ನಿರತರಾಗಿರುವ ಕಾರಣದಿಂದ ಇದುವರೆಗೆ ಕಾರ್ಯಕ್ರಮದ ನಿರ್ಮಾಪಕರನ್ನು ಭೇಟಿ ಆಗಿಲ್ಲ ಎನ್ನಲಾಗಿದ್ದು, ಅನಿಲ್ ಅವರೊಂದಿಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಇನ್ನುಸಂಜಯ್ ದತ್‌ ಅವರನ್ನು ಶೀಘ್ರದಲ್ಲೇ ಭೇಟಿ ಆಗಲಿದ್ದಾರೆ ಎಂದು ವರದಿ ತಿಳಿಸಿದೆ.

ಬಿಗ್‌ ಬಾಸ್‌ ಓಟಿಟಿ ಸೀಸನ್‌ -1 ರಲ್ಲಿ ದಿವ್ಯಾ ಅಗರ್ವಾಲ್ ವಿಜೇತರಾಗಿದ್ದರು. ನಿಶಾಂತ್ ಭಟ್ ಎರಡನೇ ಸ್ಥಾನ ಪಡೆದಿದ್ದರು. ಎರಡನೇ ಸೀಸನ್‌ ನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಅಭಿಷೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next