Advertisement

ಮೇ 6ರ ನೀಟ್‌ಗೆ ವಸ್ತ್ರ ಸಂಹಿತೆ ಪ್ರಕಟ

09:30 AM Apr 20, 2018 | Team Udayavani |

ಹೊಸದಿಲ್ಲಿ: ಮೆಡಿಕಲ್‌, ಡೆಂಟಲ್‌ ಕೋರ್ಸ್‌ ಗಳಿಗಾಗಿ CBSE ಮೇ 6ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ನಡೆಸಲಿದ್ದು, ಅದಕ್ಕಾಗಿ ವಸ್ತ್ರಸಂಹಿತೆಯ ವಿವರಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆಯುವವರು ಅರ್ಧ ತೋಳಿನ ಕಡು ಬಣ್ಣವಲ್ಲದ ದಿರಿಸುಗಳನ್ನು ಧರಿಸಬೇಕು. ಶೂ ಹಾಕಬಾರದು ಎಂದು ಸೂಚಿಸಿದೆ. ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಸ್ತ್ರ ಧರಿಸಿ ಬಂದಿದ್ದರೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಒಂದು ಗಂಟೆ ಮೊದಲು ಹಾಜರಿದ್ದು, ಮಂಡಳಿ ಸೂಚಿಸಿದ ವಸ್ತ್ರವನ್ನೇ ಧರಿಸಬೇಕು ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ ಕಳೆದ ವರ್ಷ ಜಾರಿಗೊಳಿಸಿದ ನಿಯಮವೇ ಜಾರಿಯಲ್ಲಿರುತ್ತದೆ ಎಂದು ಮಂಡಳಿ ಹೇಳಿದೆ. ಅದರ ಪ್ರಕಾರ ಬ್ರೂಚ್‌, ಷರ್ಟ್‌ಗಳಲ್ಲಿ ದೊಡ್ಡ ಗಾತ್ರದ ಬಟನ್‌ಗಳನ್ನು ಧರಿಸಬಾರದು ಎಂದು ಹೇಳಿದೆ.

Advertisement

ಕಳೆದ ವರ್ಷ ನಡೆದ ಪ್ರವೇಶ ಪರೀಕ್ಷೆ ವೇಳೆ ಶೂ, ಚಿನ್ನಾಭರಣ, ಶಿರವಸ್ತ್ರಗಳನ್ನು ತೆಗೆಯಬೇಕು ಎಂದು ಹೇಳಿದ್ದಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಹೆತ್ತವರಿಂದ ಕಟು ಟೀಕೆಯನ್ನು ಎದುರಿಸಬೇಕಾಗಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next