Advertisement
ಹೌದು. ಸದ್ಯ ಆಸ್ಟ್ರೇಲಿಯಾದ ಅಡಿಲೇಡ್ ನಗರದ ಬ್ರಾಯಿಟನ್ ಸೆಕೆಂಡರಿ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಪ್ರೀತಿಕಾ ವೆಂಕಟೇಶ ಗಾಣಗೇರ(14) ಎಂಬ ಕುವರಿಯ ಪೈಲೆಟ್ ಆಗುವ ಕನಸು ನನಸು ಮಾಡಲು ಆಸ್ಟ್ರೇಲಿಯಾ ಸರ್ಕಾರ ಸಹಕಾರ ನೀಡಿದೆ. ಆಕೆಯ ಜಾಣ್ಮೆ, ಚಾಣಾಕ್ಷತನಕ್ಕೆ ಕೈ ಜೋಡಿಸಿದೆ. ಸರ್ಕಾರದ ಶಿಷ್ಯವೇತನದಡಿ ಆಸ್ಟ್ರೇಲಿಯನ್ ಏರ್ ಲೀಗ್‌ನ ಪ್ರಾಮರಿ ಸ್ಕೂಲ್ ಆಫ್ ಎಲಿಯೇಶನ್‌ನಲ್ಲಿ ಆರು ವರ್ಷಗಳಿಂದ ಪೈಲೆಟ್ ತರಬೇತಿ ಪಡೆಯುತ್ತಿದ್ದಾಳೆ.
Related Articles
Advertisement
ದೊಡ್ಡ ದೊಡ್ಡ ನಗರಗಳಲ್ಲಿರುವವರು, ಶ್ರೀಮಂತರು ಮಾತ್ರ ಪೈಲೆಟ್ ಆಗುತ್ತಾರೆ ಎಂಬ ಮಾತು ಸುಳ್ಳು. ಉತ್ತಮ ಗುರಿ, ಸದೃಢ ಮನಸ್ಸಿನೊಂದಿಗೆ ಕಲಿತರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುತ್ತಾಳೆ ಪ್ರೀತಿಕಾ.
ನಾನು ಪೈಲೆಟ್ ಆಗಬೇಕೆಂಬ ಆಸೆ ಬಂದಿದ್ದು 8ನೇ ವಯಸ್ಸಿಗೆ. ಆಗ ತಾಯಿಗೆ ಏರ್ಪಾಡು ಮಾಡಿದರು. ಶಿಷ್ಯವೇತನದಲ್ಲೇ ತರಬೇತಿ ಪಡೆ ಯುತ್ತಿದ್ದೇನೆ. ತರಬೇತಿ ಬಳಿಕ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೈಲೆಟ್ ತರಬೇತಿ ಕೊಡಬೇಕೆಂಬ ಗುರಿ ಇದೆ. ಭಾರತೀಯ ಮಹಿಳೆಯರೂ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಆಸೆ.ಪ್ರೀತಿಕಾ ಗಾಣಗೇರ ಎಷ್ಟೋ ಜನರು ನಮ್ಮಲ್ಲಿ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡುತ್ತಾರೆ. ಆದರೆ ಪ್ರೀತಿಕಾ ವಿದೇಶದಲ್ಲಿ ಶಿಕ್ಷಣ, ತರಬೇತಿ ಪಡೆದು ಭಾರತದಲ್ಲಿ ಪೈಲೆಟ್ ತರಬೇತಿ ಕೊಡುವ ಗುರಿ ಹಾಕಿಕೊಂಡಿದ್ದು ಹೆಮ್ಮೆಯ ವಿಷಯ.
ಡ್ಯಾನಿಯಲ್ ನ್ಯೂಟನ್,
ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಕೆ. ಬಿರಾದಾರ