Advertisement

ಕೋವಿಡ್‍ ನಿಂದ ತೊಂದರೆಗೊಳಗಾದ 3500 ಕ್ರೀಡಾಪಟುಗಳಿಗೆ ಡ್ರೀಮ್‍ ಸ್ಪೋರ್ಟ್ಸ್ ನೆರವು

08:29 PM Jun 24, 2021 | Team Udayavani |

ಬೆಂಗಳೂರು: ಡ್ರೀಮ್‍ ಸ್ಪೋರ್ಟ್ಸ್ ಫೌಂಡೇಶನ್‌ ಸಂಸ್ಥೆಯು ‘ಬ್ಯಾಕ್ ಆನ್ ಟ್ರ್ಯಾಕ್’ ಕಾರ್ಯಕ್ರಮದಡಿ ಕೋವಿಡ್ ನಿಂದ ತೊಂದರೆಗೀಡಾದ 3500 ಕ್ಕೂ ಹೆಚ್ಚು ಭಾರತೀಯ ಕ್ರೀಡಾ ವೃತ್ತಿಪರರಿಗೆ ನೆರವು ನೀಡುತ್ತಿದೆ. ಇದರಲ್ಲಿ ಕರ್ನಾಟಕದ ಕ್ರೀಡಾಳುಗಳು ಸಹ ಸೇರಿದ್ದಾರೆ.

Advertisement

ಈ ಸಾಂಕ್ರಾಮಿಕ ಸಮಯದಲ್ಲಿ 29 ಕ್ರೀಡೆಗಳ 3,500 ಕ್ಕೂ ಹೆಚ್ಚು ಕ್ರೀಡಾ ವೃತ್ತಿಪರರಿಗೆ ಸಹಾಯ ಮಾಡಿದೆ. ಈ 3,500 ಫಲಾನುಭವಿಗಳಲ್ಲಿ 3,300 ಪ್ರಸ್ತುತ ಮತ್ತು ನಿವೃತ್ತ ಕ್ರೀಡಾಪಟುಗಳು, 100 ಕ್ಕೂ ಹೆಚ್ಚು ತರಬೇತುದಾರರು, ಮತ್ತು 70 ಕ್ಕೂ ಹೆಚ್ಚು ಕ್ರೀಡಾ ಬೆಂಬಲ ಸಿಬ್ಬಂದಿ ಮತ್ತು ಪತ್ರಕರ್ತರು ಇದ್ದಾರೆ. ಈ ಫಲಾನುಭವಿಗಳು ಭಾರತದ 24 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ, ತುರ್ತು ಸಹಾಯದ ಅಗತ್ಯವಿರುವ 30 ಕ್ಕೂ ಹೆಚ್ಚು ಕ್ರೀಡಾ ವೃತ್ತಿಪರರು ಈ ಉಪಕ್ರಮದ ಮೂಲಕ ಗಮನಾರ್ಹ ನೆರವು ಪಡೆದಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವು ಅನೇಕ ಹಂತಗಳಲ್ಲಿ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ಕೈಗಾರಿಕೆ,ಕ್ರೀಡಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಆದಾಯದ ನಷ್ಟಕ್ಕೆ ಕಾರಣವಾಗಿದೆ. 2020 ರಲ್ಲಿ ಪ್ರಾರಂಭವಾದ ‘ಬ್ಯಾಕ್ ಆನ್ ಟ್ರ್ಯಾಕ್’ ಯೋಜನೆಯು ಕ್ರೀಡಾ ಉದ್ಯಮದ ಅಗತ್ಯವಿರುವ ಜನರಿಗೆ ಆರ್ಥಿಕ ನೆರವು, ತರಬೇತಿ ಮತ್ತು ಕ್ರೀಡಾ ಸಲಕರಣೆಗಳ ಬೆಂಬಲ, ತರಬೇತಿ, ಸರಿಯಾದ ಆಹಾರ ಮತ್ತು ಪೋಷಣೆ, ಮಾಸಿಕ ಸ್ಟೈಫಂಡ್ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದೆ.

ಈ ನೆರವು ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯ ಹೆಚ್ಚು ಪೀಡಿತ ಸದಸ್ಯರಿಗೆ ತಲುಪಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಡಿಎಸ್ಎಫ್ ದೇಶಾದ್ಯಂತ 16 ಎನ್ ಜಿ ಓ ಗಳಿಗೆ ಸಹಾಯ ಮಾಡಿದೆ, ಇದರಲ್ಲಿ ನವ ಸಹ್ಯೋಗ್ ಫೌಂಡೇಶನ್, ಡ್ರಿಬಲ್ ಅಕಾಡೆಮಿ, ನಾಗಾಲ್ಯಾಂಡ್ ಫುಟ್ಬಾಲ್ ಫೌಂಡೇಶನ್, ದಿ ರೈಟ್ ಪಿಚ್, ದಿ ಬಾಲ್ ಪ್ರಾಜೆಕ್ಟ್ ಮತ್ತು ಇನ್ನೂ ಅನೇಕವು ಸೇರಿವೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡಿದ್ದ ಕ್ರೀಡಾ ಪತ್ರಕರ್ತರಿಗೂ ಡಿಎಸ್ಎಫ್ ನೆರವು ನೀಡಿದೆ.

ಕರ್ನಾಟಕ ಮತ್ತು ತಮಿಳುನಾಡಿನ ಹಳ್ಳಿಗಳಲ್ಲಿನ ಕಷ್ಟಕರ ಹಿನ್ನೆಲೆಯಿಂದ ಬಂದ ಚಿಕ್ಕ ಮಕ್ಕಳಲ್ಲಿ ಪ್ರಮುಖ ಜೀವನ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಖೋ-ಖೋ, ಕಬಡ್ಡಿ, ಓಟ, ದೂರ ಜಿಗಿತ, ಎತ್ತರ ಜಿಗಿತ ಮುಂತಾದ ಅನುಭವದ ಕಲಿಕೆ ಮತ್ತು ಕ್ರೀಡೆಗಳ ಹಣಕಾಸಿನ ನೆರವು, ಕ್ರೀಡಾ ಸಲಕರಣೆಗಳು ಮತ್ತು ಪೌಷ್ಠಿಕಾಂಶದ ಮೂಲಕ ಡ್ರೀಮ್‍ ಸ್ಪೋರ್ಟ್‍ ಬೆಂಬಲ ನೀಡಿದೆ. ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ತೊಂದರೆಗಳನ್ನು ಎದುರಿಸಬೇಕಾದ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಬ್ಯಾಕ್ ಆನ್ ಟ್ರ್ಯಾಕ್’ ನ ಫಲಾನುಭವಿಗಳಲ್ಲಿ ಒಂದಾದ ನವ ಸಹಯೋಗ್‍ ಫೌಂಡೇಶನ್ ತಿಳಿಸಿದೆ.

Advertisement

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರದೊಂದಿಗೆ ಸೇರಿಕೊಂಡು, ಏಪ್ರಿಲ್ 2021 ರಲ್ಲಿ, ಡಿಎಸ್ಎಫ್ ಗಿವ್ ಇಂಡಿಯಾ ಮತ್ತು ಎಸಿಟಿಗೆ ರೂ 15 ಕೋಟಿ ದೇಣಿಗೆ ನೀಡಿದೆ. ಮತ್ತು ಭಾರತದಾದ್ಯಂತ ವೈದ್ಯಕೀಯ ಉಪಕರಣಗಳು, ಆಸ್ಪತ್ರೆ ಹಾಸಿಗೆಗಳು ಮತ್ತು ನೆರವು ವ್ಯಾಕ್ಸಿನೇಷನ್ ಡ್ರೈವ್‌ಗಳ ಮೂಲಕ ತಕ್ಷಣದ ವೈದ್ಯಕೀಯ ಪರಿಹಾರವನ್ನು ಒದಗಿಸಿದೆ.

ಭಾರತದಲ್ಲಿ ಕೋವಿಡ್-19 ಪರಿಹಾರ ಉಪಕ್ರಮಗಳನ್ನು ಇನ್ನೂ ಮತ್ತಷ್ಟು ಬೆಂಬಲಿಸಲು ಡಿಎಸ್ಎಫ್ ಈಗಾಗಲೇ 1.25 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವ ಕೆಟ್ಟೊ ಮೂಲಕ ಸಾರ್ವಜನಿಕ ನಿಧಿಸಂಗ್ರಹವನ್ನು ಪ್ರಾರಂಭಿಸಿತು. 2020 ರಲ್ಲಿ, ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಈ ಬಿಕ್ಕಟ್ಟಿನ ಸಮಯದಲ್ಲಿ 6 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸಹಾಯ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿಯ ಮುಂಚೂಣಿ ಕಾರ್ಮಿಕರಿಗೆ ಆರೋಗ್ಯಕರ ಆಹಾರ, ರೇಷನ್ ಮತ್ತು ನೈರ್ಮಲ್ಯದ ಕಿಟ್ ಗಳನ್ನು ನೀಡಿದೆ. ಕೋವಿಡ್-19 ನಿರ್ವಹಣೆಗಾಗಿ ಪಿ ಎಮ್ ಕೇರ್ಸ್ ಮತ್ತು ಸಿ ಎಮ್ ರಿಲೀಫ್ ನಿಧಿಗೆ ಡಿಎಸ್ಎಫ್ ಕೊಡುಗೆ ನೀಡಿದೆ ಎಂದು ಡ್ರೀಮ್‍ ಸ್ಪೋರ್ಟ್‍ ಸಿಇಒ, ಸಹ ಸಂಸ್ಥಾಪಕ ಭವಿತ್‍ ಸೇಠ್‍ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next