Advertisement

ವಾಯುದಾಳಿ ಬೆನ್ನಲ್ಲೇ ಅತ್ಯಾಧುನಿಕ ಕ್ಷಿಪಣಿಗಳ ಪರೀಕ್ಷೆ ನಡೆಸಿದ DRDO

12:18 PM Feb 26, 2019 | Team Udayavani |

ಭುವನೇಶ್ವರ : ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ ಇಂದು ಮಂಗಳವಾರ ಪಾಕಿಸ್ಥಾನದ ಬಾಲಕೋಟ್‌ ನಲ್ಲಿನ ಜೈಶ್‌ ತರಬೇತಿ ಶಿಬಿರಗಳ ಮೇಲೆ ಮಾರಕ ವೈಮಾನಿಕ ದಾಳಿ ನಡೆಸಿ 300 ಕ್ಕೂ ಹೆಚ್ಚು ಉಗ್ರರನ್ನು ನಾಶಗೈದ ಬೆನ್ನಲ್ಲೇ  ಡಿಆರ್‌ಡಿಓ 2 ಕ್ಷಿಪಣಿಗಳ ಪರೀಕ್ಷಾರ್ಥ ಯಶಸ್ವಿ  ಹಾರಟ ನಡೆಸಿದೆ. 

Advertisement

ಒಡಿಶಾದ ಬಾಲ್‌ಸೋರ್‌ನ  ಕಡಲ ತೀರದಲ್ಲಿ  ಡಿಆರ್‌ಡಿಓ ವೇಗವಾಗಿ ಸಾಗಿ ಗಾಳಿಯಲ್ಲೇ ವೈರಿ ಪಡೆಯನ್ನು ಧ್ವಂಸಗೈಯುವ ಸಾಮರ್ಥ್ಯ ಉಳ್ಳ 2 ಅತ್ಯಾಧುನಿಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ   ನಡೆಸಿದೆ ಎಂದು ಎಎನ್‌ಐ ವರದಿ ಮಾಡಿದೆ. 

ಭಾರೀ ದಾಳಿ ಬಳಿಕ 2 ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪಾಕ್‌ ಪ್ರತಿಕ್ರಿಯೆ ನೀಡುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಸೇನಾ ಪಡೆಗಳು ಈಗಾಗಲೇ ಸರ್ವ ಸನ್ನದ್ಧವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next