Advertisement
ಚಂಡೀಗಢದಲ್ಲಿ ನಡೆದ ಸೊಸೈಟಿ ಫಾರ್ ಪ್ರೊಮೋಶನ್ ಆಫ್ ಎತಿಕಲ್ ಆ್ಯಂಡ್ ಅಫೋರ್ಡೆಬಲ್ ಹೆಲ್ತ್‌ಕೇರ್ (ಸ್ಪೀಕ್) ಸಂಘಟನೆ ವಾರ್ಷಿಕ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾವವಾಗಿದೆ.
ಉತ್ತಮ ವೈದ್ಯ ಹೇಗೆ ಪ್ರಿಸ್‌ಕ್ರೈಬ್ ಮಾಡಬೇಕೆಂದು ತಿಳಿದಿರಬೇಕು. ಅದಕ್ಕೂ ಮೇಲ್ದರ್ಜೆ ವೈದ್ಯ ಯಾವಾಗ ಪ್ರಿಸ್‌ಕ್ರೈಬ್ ಮಾಡಬೇಕೆಂದು ತಿಳಿದಿರಬೇಕು. ಯಾವಾಗ ಪ್ರಿಸ್‌ಕ್ರೈಬ್ ಮಾಡಬಾರದೆಂದು ತಿಳಿದಿರುತ್ತಾನೋ ಆತ ಶ್ರೇಷ್ಠ ವೈದ್ಯ ಎಂದು ಡಾ| ಹೆಗ್ಡೆ ಹೇಳಿದರು. ಹೃದ್ರೋಗಕ್ಕೆ ಸಂಬಂಧಿಸಿದ ಸ್ಟಂಟ್ ವೆಚ್ಚ ಕಡಿತ, ಕೇವಲ ಅಂಕ ಗಳಿಕೆಯಲ್ಲದೆ, ಪ್ರೀತಿ, ಆರೋಗ್ಯಕರ ಜೀವನ ಶೈಲಿ, ಬೋಧನಾ ಪಠ್ಯಕ್ರಮ ಆಧರಿಸಿ ಎಂಬಿಬಿಎಸ್ ಪದವಿಗೆ ಪ್ರವೇಶ, ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಧಾನಿಗೆ ಸ್ಪೀಕ್ ಮನವಿ ಮಾಡಿದೆ ಎಂದು ಅಧ್ಯಕ್ಷ ಡಾ| ರಾಮ್‌ಕುಮಾರ್ ಹೇಳಿದರು. ದೇಶದ ನಾನಾ ಭಾಗಗಳಿಂದ ಹೆಸರಾಂತ ವೈದ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.