ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿದ್ದ ರಾಹುಲ್ ದ್ರಾವಿಡ್ ಪಾತ್ರವೇನು ಎಂಬ ಅನುಮಾನಗಳಿಗೆ ತೆರೆ ಬಿದ್ದಿದೆ. ಈ ಹಿಂದೆ ಹೇಳಿದಂತೆ ದ್ರಾವಿಡ್ ಅವರು ಭಾರತ ತಂಡದ ವಿದೇಶ ಪ್ರವಾಸಗಳ ವೇಳೆ ಜೊತೆಗೆ ತೆರಳುವುದಿಲ್ಲ ಎಂದು ಸ್ವತಃ ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.
ಅಲ್ಲಿಗೆ ದ್ರಾವಿಡ್ ಬ್ಯಾಟಿಂಗ್ ಸಲಹೆಗಾರನಾಗಿರುವುದಿಲ್ಲವೆನ್ನುವುದು ಖಚಿತವಾಗಿದೆ. ಆದರೂ ಬೌಲಿಂಗ್ ಸಲಹೆಗಾರರಾಗಿ ಆಯ್ಕೆಯಾಗಿದ್ದ ಜಹೀರ್ ಖಾನ್ ಪಾತ್ರವೇನು ಎಂಬ ಬಗ್ಗೆ ಗೊಂದಲ ಹಾಗೆಯೇ ಮುಂದುವರಿದಿದೆ.
ಭಾರತ ಎ ಮತ್ತು 19 ವಯೋಮಿತಿಯೊಳಗಿನ ತಂಡದ ಕೋಚ್ ಆಗಿರುವುದರಿಂದ ಹಿರಿಯರ ತಂಡದೊಂದಿಗೆ ಪ್ರವಾಸ ಮಾಡುವುದು ಕಷ್ಟ ಎಂದು ಸ್ವತಃ ದ್ರಾವಿಡ್ ಹೇಳಿದ್ದಾರೆನ್ನುವುದು ರೈ ಹೇಳಿಕೆ. ಆದರೆ ದ್ರಾವಿಡ್ ಕುರಿತು ಮುಖ್ಯ ಕೋಚ್ ರವಿಶಾಸಿŒಗೆ ಆಸಕ್ತಿಯಿಲ್ಲವೆನ್ನುವುದು ಮೂಲಗಳ ವಿಶ್ಲೇಷಣೆ.
ಆದರೆ ಜಹೀರ್ ಖಾನ್ ಅವರ ವೇತನವೇನು? ಅವರು ಯಾವಾಗ ತಂಡ ಕೂಡಿಕೊಳ್ಳುತ್ತಾರೆಂಬ ಬಗ್ಗೆ ಇನ್ನೂ ಗೊಂದಲವಿದೆ. ಆಫ್ರಿಕಾ ಪ್ರವಾಸಕ್ಕೆ ಅವರು ಲಭ್ಯವಾಗಬಹುದೆನ್ನುವ ನಿರೀಕ್ಷೆಯಿದೆ. ಜಹೀರ್ ಅವರು ಐಪಿಎಲ್ ತಂಡದೊಂದಿಗೆ ಬಾಂಧವ್ಯ ಹೊಂದಿರುವುದರಿಂದ ಸ್ವಹಿತಾಸಕ್ತಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ಹೇಗೆನ್ನುವುದು ಬಿಸಿಸಿಐಗೆ ಪ್ರಶ್ನೆಯಾಗಿದೆ.
ದ್ರಾವಿಡ್, ಜಹೀರ್‌ಗೆ ಅವಮಾನಿಸಿಲ್ಲ: ಕೋಚ್ ಆಯ್ಕೆ ವೇಳೆ ದ್ರಾವಿಡ್, ಜಹೀರ್ ಖಾನ್‌ಗೆ ಅವಮಾನಿಸಲಾಗಿದೆ ಎಂಬ ಅಭಿಪ್ರಾಯವನ್ನು ರೈ ತಿರಸ್ಕರಿಸಿದರು. ಕೋಚ್ ಆಯ್ಕೆ ಮಾತ್ರ ಬಿಸಿಸಿಐ ಸಲಹಾ ಸಮಿತಿಯ ಜವಾಬ್ದಾರಿಯಾಗಿತ್ತು. ಜಹೀರ್, ದ್ರಾವಿಡ್ ಹೆಸರು ಶಿಫಾರಸು ಮಾತ್ರ. ಇದನ್ನು ನೇಮಕ ಎಂದು ಮಾಡಿಕೊಂಡಿದ್ದರಿಂದಲೇ ರವಿಶಾಸಿŒ ಹೆಸರು ಘೋಷಿಸುವಾಗ ಭಾರೀ ಗೊಂದಲವುಂಟಾಯಿತು ಎಂದು ರೈÊ ಹೇಳಿಕೆಯಾಗಿದೆ.