Advertisement

“ಸಡನ್ನಾಗ್‌ ಸತ್ಹೋದ್ರೆ..?’ಕತೆ ಏನು?

12:09 PM May 05, 2018 | |

ಒಂದು ಸಾವನ್ನು ತಮಾಷೆಯಾಗಿ ನೋಡುವುದು ತುಸು ಕಷ್ಟ. ಆದರೆ, ಶೈಲೇಶ್‌ ಕುಮಾರ್‌ ಎಂ.ಎಂ. ಆ ಕೆಲಸವನ್ನು ಬಹಳ ನಾಜೂಕಿನಿಂದ ಮಾಡಿದ್ದಾರೆ. “ಸಡನ್ನಾಗ್‌ ಸತೊØàದ್ರೆ..?’ ಎಂಬ ಅವರ ನಾಟಕವೇ ಇದಕ್ಕೆ ಉದಾಹರಣೆ. ಈ ನಾಟಕ ಇದೀಗ ಪ್ರದರ್ಶನ ಕಾಣುತ್ತಿದ್ದು, ಜೀವನವನ್ನು ನಾವು ಹೇಗೆ ಸಂತೋಷದಿಂದ ಸ್ವೀಕರಿಸಬೇಕು ಎಂಬ ಸಂದೇಶವೂ ಈ ನಾಟಕದ ಅಂತ್ಯದಲ್ಲಿ ಚಿಮ್ಮುತ್ತದೆ. ಸೈಡ್‌ವಿಂಗ್‌ ತಂಡದ ಈ ಶೋವನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.
ಯಾವಾಗ?: ಮೇ 12, ಶನಿವಾರ, ರಾ.7.30
ಎಲ್ಲಿ?: ಪ್ರಭಾತ್‌ ಕಲಾಪೂರ್ಣಿಮಾ, ಎನ್‌.ಆರ್‌. ಕಾಲೋನಿ
ಸಂಪರ್ಕ: 98450 87901
ಪ್ರವೇಶ: 100

Advertisement

“ಬೆಗ್‌ ಬಾರೋ’ ಅಳಿಯ…
ಕಚಗುಳಿಯ ಸಂಭಾಷಣೆಕಾರ ಎಂ.ಎಸ್‌. ನರಸಿಂಹಮೂರ್ತಿ ಅವರ ಹಾಸ್ಯಕ್ಕೆ ಮತ್ತೆ ಮಾರುಹೋಗುವ ಹೊತ್ತು ಇದು. “ಬೆಗ್‌ ಬಾರೋ ಅಳಿಯ’ ಎಂಬ ನಾಟಕವನ್ನು ಎಮ್ಮೆಸ್ಸೆನ್‌ ರಚಿಸಿ, ಹನು ರಾಮ್‌ ಸಂಜೀವ ನಿರ್ದೇಶಿಸಿದ್ದು, ಇದು “ವಸುದೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ  ರಚಿತಗೊಂಡಿದೆ. ಹುಡುಗನಿಗೆ ಅಪ್ಪ- ಅಮ್ಮ ಇಲ್ಲದೇ ಇದ್ರೆ ಮಾತ್ರ ಅವನನ್ನು ಮದ್ವೆ ಆಗೋದು ಎನ್ನುವ ಈಗಿನ ಹುಡುಗಿಯರ ಧ್ವನಿಯನ್ನೇ ಇಲ್ಲಿ ಲೈಲಾ ಎನ್ನುವ ಪಾತ್ರದಲ್ಲಿ ಪ್ರತಿಧ್ವನಿಸಲಾಗಿದೆ. ವಿಶ್ವ, ವಿಶಾಲು ಎನ್ನುವ ಎರಡು ಪಾತ್ರಗಳ ಸಂಭಾಷಣೆಯೂ ಅಷ್ಟೇ ಆಪ್ತ.
ಯಾವಾಗ?: ಮೇ 5, ಶನಿವಾರ, ಸಂ.4.30
ಎಲ್ಲಿ?: ಕೆ.ಎಚ್‌. ಕಲಾಸೌಧ, ಹನುಮಂತ ನಗರ
ಪ್ರವೇಶ: 100

“ಕುರುಕ್ಷೇತ್ರ’ ನೋಡ ಬನ್ನಿ…
ಮೂವರು ಕತೆಗಾರರ ಕತೆಯನ್ನು ಒಂದೇ ವೇದಿಕೆ ಮೇಲೆ ದೃಶಿÂàಕರಿಸುವ ಪ್ರಯತ್ನ ಬಲು ಅಪರೂಪ. ಡಾ. ಎಂ. ಗಣೇಶ್‌ “ಕುರುಕ್ಷೇತ್ರ’ ನಾಟಕವನ್ನು ಅಂಥ ಹೊಸತನದಲ್ಲಿ ಕಟ್ಟಿಕೊಡಲಿದ್ದಾರೆ. ಬಿ. ಪುಟ್ಟಸ್ವಾಮಯ್ಯ, ಕುವೆಂಪು, ಕಲ್ಲೂರು ಶ್ರೀನಿವಾಸ್‌ ಅವರ ಕೃತಿಗಳನ್ನು ಆಧರಿಸಿ, ಈ ಸಂಗೀತ ನಾಟಕ ರಚಿತಗೊಂಡಿದೆ. ಈಗಾಗಲೇ ಕೆಲವೆಡೇ ಪ್ರದರ್ಶನ ಕಂಡಿರುವ “ಕುರುಕ್ಷೇತ್ರ’, ಕಂಪನಿ ನಾಟಕದ ಫೀಲ್‌ ಕೊಡುತ್ತದೆಯಾದರೂ, ಅದರ ಹರಿವು ಭಿನ್ನವಾಗಿದೆ.

ಯಾವಾಗ?: ಮೇ 5, ಶನಿವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.

ಪ್ರೀತಿಯಿಂದ, ಪ್ರೀತಿಯ ಬಗ್ಗೆ
“ಲವ್‌ ಎ ಲಿಟಲ್‌ ಸ್ಟ್ರಾಂಗರ್‌’ ಬಿಡುಗಡೆ

ಇಂಗ್ಲಿಷ್‌ ಕಾದಂಬರಿಗಳನ್ನು ಇಷ್ಟ ಪಡುವವರಿಗೆ ಪ್ರೀತಿ ಶೆಣೈ ಹೆಸರು ಚಿರ ಪರಿಚಿತ. ಇವರ 34 ಬಬಲ್‌ ಗಮ್ಸ್‌ ಆ್ಯಂಡ್‌ ಕ್ಯಾಂಡೀಸ್‌, ಲೈಫ್ ಈಸ್‌ ವಾಟ್‌ ಯು ಮೇಕ್‌ ಇಟ್‌, ಟೀ ಫಾರ್‌ ಟು ಆ್ಯಂಡ್‌ ಎ ಪೀಸ್‌ ಆಫ್ ಕೇಕ್‌, ದಿ ಸೀಕ್ರೆಟ್‌ ವಿಶ್‌ ಲಿಸ್ಟ್‌, ಇಟ್‌ ಹ್ಯಾಪನ್ಸ್‌ ಫಾರ್‌ ಎ ರೀಸನ್‌ ಮುಂತಾದ ಪುಸ್ತಕಗಳು ಬೆಸ್ಟ್‌ಸೆಲ್ಲರ್‌ಗಳಾಗಿವೆ. ಪ್ರೀತಿಯ ಬಗ್ಗೆ ವಿಶೇಷ ಪ್ರೀತಿಯಿಂದ ಬರೆಯುವ ಇವರ “ಲವ್‌ ಎ ಲಿಟಲ್‌ ಸ್ಟ್ರಾಂಗರ್‌’ ಹೊಸ ಪುಸ್ತಕ ಬಿಡುಗಡೆಯಾಗುತ್ತಿದ್ದು, ಆ ಸಂಭ್ರಮದಲ್ಲಿ ನೀವೂ ಸಾಕ್ಷಿಯಾಗಿ. 

Advertisement

ಎಲ್ಲಿ?: ಸಪ್ನ ಬುಕ್‌ ಹೌಸ್‌, 80 ಅಡಿ ರಸ್ತೆ, 7 ಬ್ಲಾಕ್‌, ಕೋರಮಂಗಲ
ಯಾವಾಗ? ಮೇ 5, ಶನಿವಾರ ಸಂಜೆ 6

Advertisement

Udayavani is now on Telegram. Click here to join our channel and stay updated with the latest news.

Next