Advertisement

ಚುನಾವಣ ಆಯೋಗದ ಕೃತಿಗೆ ನಾಟಕ ಆಯ್ಕೆ

01:29 PM May 04, 2018 | Team Udayavani |

ಪುತ್ತೂರು: ಕರ್ನಾಟಕ ಚುನಾವಣಾ ಆಯೋಗವು ಹೊರತಂದಿರುವ ಮತದಾರರ ಜಾಗೃತಿಯ ಬೀದಿ ನಾಟಕಗಳ ಸಂಕಲನ ‘ಓಟು ಹಾಕೋಣ ಬನ್ನಿ’ ಕೃತಿಗೆ ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರಚನೆಯ ‘ಮತ ಮಾರಾಟಕ್ಕಲ್ಲ’ ಬೀದಿ ನಾಟಕ ಆಯ್ಕೆಯಾಗಿದೆ.

Advertisement

ಬೆಂಗಳೂರಿನ ಸಿಆರ್‌ಟಿ ಹಾಗೂ ಅಪ್ಸಾ ಸಂಸ್ಥೆ ಜಂಟಿಯಾಗಿ ಬೀದಿನಾಟಕ ಸಂಕಲನವನ್ನು ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಆಯ್ದ ಲೇಖಕರಿಗೆ ಮತದಾರರ ಜಾಗೃತಿಯ ನಾಟಕ ಬರೆಯಲು ನಿರ್ದೇಶನ ನೀಡಲಾಗಿತ್ತು. 

ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಮೌನೇಶ ವಿಶ್ವಕರ್ಮ ಅವರು ‘ಮತ ಮಾರಾಟಕ್ಕಲ್ಲ’ ಅನ್ನುವ ಬೀದಿನಾಟಕ ಹಾಗೂ ‘ಮತದಾರ ಕೇಳಿಲ್ಲಿ’ ಎನ್ನುವ ಹಾಡನ್ನು ರಚಿಸಿದ್ದು, ಇವೆರಡೂ ಚುನಾವಣಾ ಆಯೋಗ ಹೊರತಂದಿರುವ ಕೃತಿಯಲ್ಲಿ ಪ್ರಕಟವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರು ಈ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ನೂರು ಪುಟಗಳ ಈ ಕೃತಿಯಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರು ರಚಿಸಿದ 15 ಬೀದಿನಾಟಕಗಳು ಪ್ರಕಟವಾಗಿವೆ.

ಪುತ್ತೂರಿನ ಸಂಪ್ಯ ನಿವಾಸಿ ಮೌನೇಶ್‌ ವಿಶ್ವಕರ್ಮ ಅವರು ಬಂಟ್ವಾಳದಲ್ಲಿ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ರಂಗನಾಟಕ, ಬೀದಿ ನಾಟಕಗಳ ಸಹಿತ ವಿವಿಧ ತರಬೇತಿ ನೀಡುತ್ತಿರುವ ಇವರು, 15ಕ್ಕೂ ಅಧಿ ಕ ನಾಟಕ ಬರೆದಿದ್ದಾರೆ. ಮಾಣಿಯಲ್ಲಿ ಸಂಸಾರ ಜೋಡುಮಾರ್ಗ ಕಲಾತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next