Advertisement
ಸಾರ್ವಜನಿಕರು ತಮ್ಮ ಮನೆ ಆವರಣದ ಕಸ ಕಡ್ಡಿಗಳನ್ನು ಪಕ್ಕದ ಚರಂಡಿಗೆ ಎಸೆಯುತ್ತಿರು ವುದರಿಂದಾಗಿ ನೀರು ಸರಾಗವಾಗಿ ಹೋಗಲಾರದೆ ಚರಂಡಿಯೊಳಗೆ ಹೂಳು ಮತ್ತು ಕಸ ತುಂಬಿಕೊಳ್ಳಲು ಮುಖ್ಯ ಕಾರಣವಾಗಿದೆ ಎಂದು ಪೌರಕಾರ್ಮಿಕರ ವಾದವಾಗಿದೆ.
Related Articles
Advertisement
ಮುಖ್ಯವಾಗಿ ಮೂಲ್ಕಿ ನಗರ ಪಂಚಾಯತ್‌ನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಬಹಳ ವೇಗವಾಗಿ ಮೂಲ್ಕಿ ಒಳಪ್ರದೇಶದಲ್ಲೂ ವಸತಿ ಸಂಕೀರ್ಣ ತಲೆ ಎತ್ತಿ ನಿಂತಿದೆ. ಆದರೆ ಮಳೆ ನೀರು ಮತ್ತು ಕಟ್ಟಡದ ತ್ಯಾಜ್ಯಗಳನ್ನು ಹೇಗೆ ನಿಭಾಯಿಸುವುದು ಎಂಬುವುದರ ಪೂರ್ಣ ಯೋಜನೆಗಳು ಒಳಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲರಿಗೂ ತಲೆ ನೋವು ತಂದಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಬೇಕು. ಪ್ರತಿಯೊಬ್ಬರ ಮನೆ, ವಸತಿ ಸಂಕೀರ್ಣದ ಕಸ ಹಾಗೂ ತ್ಯಾಜ್ಯಗಳನ್ನು ರಸ್ತೆಗೆ ಎಸೆಯದೆ ನಗರ ಪಂಚಾಯತ್‌ನ ಕಸ ವಿಲೇವಾರಿ ವ್ಯವಸ್ಥೆಗೆ ನೀಡಿ ಸಹಕರಿಸಿದರೆ ಅರ್ಧ ಸಮಸ್ಯೆ ನೀಗಿಸಬಹುದು.
ನಿಭಾಯಿಸಲು ಸಿದ್ಧವಾಗಿದೆ
ಮೂಲ್ಕಿ ನಗರ ಪಂಚಾಯತ್‌ನ ಮೂರು ಬದಿಗಳಲ್ಲೂ ಶಾಂಭವಿ ನದಿ ಪ್ರದೇಶ ಆವರಿಸಿಕೊಂಡಿರುವ ಕಾರಣ ನಗರದ ಚರಂಡಿಗಳು ಅದರಲ್ಲೂ ರಾಜಕಾಲುವೆಗಳ ಮೂಲಕ ಹರಿದು ಹೋಗುವ ನೀರು ನದಿ ಸೇರುತ್ತದೆ. ಮಾತ್ರ ವಲ್ಲ ನದಿಯಿಂದ ಸಮುದ್ರ ಸೇರುತ್ತದೆ. ಆದರೆ ನೀರು ಹರಿದು ಹೋಗುವಾಗ ಸಮಸ್ಯೆ ಯಾಗದಂತೆ ನ.ಪಂ. ಕ್ರಮ ಕೈಗೊಂಡಿದೆ. ಬಹುತೇಕ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಮುಗಿದಿದೆ. ಮುಂದೆ ಹೆಚ್ಚುವರಿ ಸಿಬಂದಿಯನ್ನು ಚರಂಡಿ ಸಮತಟ್ಟಿನ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ. ಎಷ್ಟೇ ಜೋರಾಗಿ ಮಳೆ ಸುರಿದರೂ ಮೂಲ್ಕಿ ನಗರ ಪಂಚಾಯತ್ ನಿಭಾಯಿಸಲು ಸಿದ್ಧವಾಗಿದೆ. –ಪಿ. ಚಂದ್ರಪೂಜಾರಿ, ಮುಖ್ಯಾಧಿಕಾರಿ ನ.ಪಂ. ಮೂಲ್ಕಿ