Advertisement

ಚರಂಡಿ ಹೂಳು ತೆಗೆಯುವ ಕಾರ್ಯ

12:25 PM Mar 22, 2022 | Team Udayavani |

ಕೈಕಂಬ: ಗುರುಪುರ ಕೈಕಂಬ ಪೇಟೆಯ ರಸ್ತೆ ಬದಿಯ ಎರಡು ಚರಂಡಿಗಳಲ್ಲಿ ತ್ಯಾಜ್ಯ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯ ಬಗ್ಗೆ ಸಾರ್ವಜನಿಕರ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೂರು ನೀಡಿದ್ದರು. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಗಮನಸೆಳೆಯಲಾಗಿತ್ತು.

Advertisement

ವರದಿಗೆ ಸ್ಪಂದಿಸಿದ ಗಂಜಿಮಠ ಗ್ರಾ.ಪಂ. ಸ್ಥಳೀಯಾಡಳಿವು ಶುಕ್ರವಾರದಿಂದ ರವಿವಾರದ ವರೆಗೆ ಜೇಸಿಬಿ ಮೂಲಕ ಚರಂಡಿ ಹೂಳು ತೆಗೆಯುವ ಕಾರ್ಯ ಕೈಗೊಳ್ಳಲಾಗಿದೆ.

ಇದರಿಂದಾಗಿ ಹೊಟೇಲ್‌, ಮೀನು ಮಾರುಕಟ್ಟೆ, ಅಂಗಡಿಗಳ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗುವಂತಾಗಿದೆ. ಹೊಟೇಲ್‌, ಮಾರುಕಟ್ಟೆಯಿಂದ ತ್ಯಾಜ್ಯ ನೀರು ಚರಂಡಿಗೆ ಬಿಡುವುದರಿಂದ ಕೆಲವೆಡೆ ಇನ್ನೂ ತ್ಯಾಜ್ಯ ನೀರು ನಿಂತಿದೆ. ತ್ಯಾಜ್ಯ ನೀರಿಗೆ ಸಮರ್ಪಕ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್‌ ಮಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಚರಂಡಿ ವ್ಯವಸ್ಥೆ ಇಲಾಖೆಯೇ ಮಾಡುವ ಕಾರಣ ಗುರುಪುರ ಕೈಕಂಬದ ಪೇಟೆಯ ತ್ಯಾಜ್ಯ ನೀರು ಚರಂಡಿಯನ್ನು ಗ್ರಾ.ಪಂ. ಮಾಡುವಂತಿಲ್ಲ ಎಂದು ಹೇಳಲಾಗಿದೆ. ನೀರು ನಿಲ್ಲದಂತೆ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next