Advertisement

ಚರಂಡಿ ನೀರು ರಸ್ತೆ ಮೇಲೆ: ಸಂಚಾರಕ್ಕೆ ಪರದಾಟ

11:14 AM May 22, 2018 | |

ಶಹಾಬಾದ: ನಗರದ ಬಸ್‌ ನಿಲ್ದಾಣದ ಮುಂಭಾಗದ ಚರಂಡಿಯಲ್ಲಿ ಕಸ ತುಂಬಿದ್ದರಿಂದ ರಸ್ತೆ ಮೇಲೆ ಚರಂಡಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲ ಉಂಟಾಗಿತ್ತು. ಇದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಈ ರಸ್ತೆಯ ಮೂಲಕ ಹೋಗುವಾಗ ಕೊಳಚೆ ನೀರಿನಲ್ಲಿ ಕಾಲಿಟ್ಟುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದೊದಗಿತ್ತು.

Advertisement

ಸೋಮವಾರ ಬೆಳಗ್ಗೆಯಿಂದ ಚರಂಡಿಯಲ್ಲಿ ಕಸ ತುಂಬಿಕೊಂಡು ಗಬ್ಬೆದ್ದು ನಾರುತ್ತಿತ್ತು. ಅಲ್ಲದೇ ಚರಂಡಿ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆಲ್ಲಾ ಹರಿದು ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪಕ್ಕದಲ್ಲಿಯೇ ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದ್ರಾಬಾದ ಬ್ಯಾಂಕ್‌ ಇದೆ. ಅದರ ಮುಂಭಾಗದಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಬ್ಯಾಂಕಿಗೆ ಬಂದ ನೂರಾರು ಜನರು ಕೊಳಚೆಯಲ್ಲಿ ಕಾಲಿಟ್ಟು ಹೋಗುವಂಥ ಪರಿಸ್ಥಿತಿ ಬಂದೊದಗಿತ್ತು.

ಅಲ್ಲದೇ ಸ್ಥಳೀಯ ಬಡಾವಣೆಗಳ ಜನರಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೆಮ್ಮದಿ ಜೀವನಕ್ಕೆ ಕತ್ತರಿ ಬಿದ್ದಿದೆ. ನಿತ್ಯ ಇದೇ ರಸ್ತೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಹೋಗುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ಮಾತ್ರ ದುರಂತ.

ಮೂತ್ರ ವಿಸರ್ಜನೆಗೆ ಪರದಾಟ: ನಗರದಲ್ಲಿ ಸಾರ್ವಜನಿಕ ಮೂತ್ರಾಲಯ ಇಲ್ಲದ ಕಾರಣ ಮೂತ್ರ ವಿಸರ್ಜನೆ ಮಾಡಬೇಕಾದರೆ ಮುಜುಗರ ಪಡುವಂತಾಗಿದೆ. ಮುಖ್ಯ ರಸ್ತೆಗಳೇ ಸಾರ್ವಜನಿಕರ ಮೂತ್ರ ವಿಸರ್ಜನೆಯ ಕೇಂದ್ರ ತಾಣಗಳಾಗಿವೆ. ಈ ಕುರಿತು ನೂತನ ಶಾಸಕ ಬಸವರಾಜ ಮತ್ತಿಮೂಡ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಬಿಜೆಪಿ ಮುಖಂಡ ನಿಂಗಣ್ಣ ಹುಳಗೋಳಕರ್‌ ಮನವಿ ಮಾಡಿದ್ದಾರೆ.

ಜನರ ಆಶೀರ್ವಾದದಿಂದ ಆಯ್ಕೆಯಾಗಿ ನೂತನ ಶಾಸಕನಾಗಿರುವೆ. ಸ್ಥಳೀಯ ಜನರು ಈಗಾಗಲೇ ಅನೇಕ
ಸಮಸ್ಯೆಗಳನ್ನು ತಿಳಿಸಿದ್ದಾರೆ. ಜನರ ಸಮಸ್ಯೆಯನ್ನು ಬಗೆಹರಿಸುವುದು ನನ್ನ ಆದ್ಯ ಕರ್ತವ್ಯ. ತಕ್ಷಣವೇ ಚರಂಡಿಯ ಸಮಸ್ಯೆಯನ್ನು ನಿವಾರಿಸಲು ನಗರಸಭೆ ಆಯುಕ್ತರಿಗೆ ತಾಕೀತು ಮಾಡುತ್ತೆನೆ.
 ಬಸವರಾಜ ಮತ್ತಿಮೂಡ, ಶಾಸಕ, ಕಲಬುರಗಿ ಗ್ರಾಮೀಣ ಮತಕ್ಷೇತ್ರ

Advertisement

ನಗರದ ಚರಂಡಿಗಳ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಸಾಕಷ್ಟು ಸಲ ಅಧಿಕಾರಿಗಳಿಗೆ ಹಾಗೂ
ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸೌಜನ್ಯಕ್ಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ. 
 ನಿಂಗಣ್ಣ ಹುಳಗೋಳಕರ್‌, ಬಿಜೆಪಿ ಮುಖಂಡ

ಬಸ್‌ ನಿಲ್ದಾಣದ ಮುಂಭಾಗದ ಚರಂಡಿ ತುಂಬಿ ರಸ್ತೆಯ ಮೇಲೆಲ್ಲಾ ಕೊಳಚೆ ನೀರು ಹರಿದಾಡುತ್ತಿದೆ. ಗಬ್ಬೆದ್ದು
ನಾರುತ್ತಿರುವ ನೀರಿನಲ್ಲೇ ಎಸ್‌ ಬಿಹೆಚ್‌ ಬ್ಯಾಂಕಿಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ನಗರದಲ್ಲಿ ಚರಂಡಿ ಸ್ವತ್ಛತೆ
ಮರಿಚೀಕೆಯಾಗಿದೆ. 
 ಸುಭಾಷ ಸಾಕ್ರೆ, ನಗರ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next