Advertisement

ಜಮೀನಿಗೆ ಚರಂಡಿ ನೀರು: ಆತ್ಮ ಹತ್ಯೆ ಬೆದರಿಕೆ

05:48 PM Aug 20, 2018 | Team Udayavani |

ಕುಷ್ಟಗಿ: ಜಮೀನಿಗೆ ಕೊಳಚೆ ನೀರು ಹರಿಸಲು ಮುಂದಾದ ಪುರಸಭೆ ಕ್ರಮಕ್ಕೆ ಬೇಸತ್ತ ಜಮೀನು ಮಾಲೀಕ ವಿಷ ಸೇವಿಸಲು ಯತ್ನಿಸಿದ ಘಟನೆ ರವಿವಾರ ಪಟ್ಟಣದ 13ನೇ ವಾರ್ಡ್‌ನಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಹಳೆ ನಿಡಶೇಷಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 201ರ 2 ಎಕರೆ ಪಟ್ಟಣದ ಮಹಮ್ಮದ್‌ ಅಫ್ತಾಬ್‌ ಅವರಿಗೆ ಸೇರಿದ್ದು, ಈ ಜಮೀನಿನಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ತ್ಯಾಜ್ಯದ ನೀರು ಸೇರುತ್ತಿದೆ.

Advertisement

ಈ ಹಿಂದೆ ಪುರಸಭೆ ಅವರು ಇವರ ಜಮೀನು ಒತ್ತುವರಿ ಮಾಡಿ ರಾಜಕಾಲುವೆ ನಿರ್ಮಿಸಿದ್ದಾರೆ. ಆದರೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಾಲುವೆ ನೀರು ಇವರ ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಪಟ್ಟಣದ ಕೊಳಚೆ ನೀರು ಪ್ಲಾಸ್ಟಿಕ್‌ ತ್ಯಾಜ್ಯ ಸಮೇತ ಜಮೀನು ಸೇರದಂತೆ ರೈತ ಮಹ್ಮದ್‌ ಅಫ್ತಾಬ್‌ ಅವರು ಚರಂಡಿಗೆ ಮಣ್ಣಿನ ತಡೆಗೋಡೆ (ಒಡ್ಡು) ಹಾಕಿಕೊಂಡಿದ್ದರು. ಇದರಿಂದ ಚರಂಡಿ ನೀರು ಮುಂದೆ ಹರಿಯದೇ ಭರ್ತಿಯಾಗಿತ್ತು. ಮಳೆಯಾದರೆ ನೀರು ಮನೆ ನುಗ್ಗುವ ಅಪಾಯದ ಹಿನ್ನೆಲೆಯಲ್ಲಿ ಸ್ಥಳೀಯರು ಜಮೀನು ಮಾಲೀಕ ಹಾಕಿರುವ ಒಡ್ಡನ್ನು ತೆರವುಗೊಳಿಸುವಂತೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪುರಸಭೆಯವರು ಜೆಸಿಬಿಯೊಂದಿಗೆ ಒಡ್ಡು ತೆರವುಗೊಳಿಸಿ, ಅವರ ಜಮೀನಿಗೆ ಕೊಳಚೆ ನೀರು ಹರಿಸಲು ಬಂದಿದ್ದರು. ಇದರಿಂದ ಆಕ್ರೋಶಗೊಂಡ ಮಹ್ಮದ್‌ ಅಫ್ತಾಬ್‌ ಒಡ್ಡು ತೆರವುಗೊಳಿಸಿದರೆ ವಿಷ ಸೇವಿಸುವುದಾಗಿ ಬೆದರಿಕೆಯೊಡ್ಡಿದ್ದರು. ಇದರಿಂದ ವಿಚಲಿತರಾದ ಪುರಸಭೆ ಸಿಬ್ಬಂದಿ ಜೆಸಿಬಿಯೊಂದಿಗೆ ವಾಪಸ್ಸಾದರು.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ವಿಷದ ಬಾಟಲಿ ವಶಕ್ಕೆ ತೆಗೆದುಕೊಂಡರು. ನಂತರ ಮಹ್ಮದ್‌ ಅಫ್ತಾಬ್‌ ಅವರನ್ನು ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ಠಾಣೆಗೆ ಕರೆಯಿಸಿಕೊಂಡು, ಸಮಾಧಾನಿಸಿ, ಸೊಮವಾರ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next