Advertisement
ಕಡಬ ಪೇಟೆಯ ಹೊಟೇಲ್ ಗಳು ಹಾಗೂ ರೆಸ್ಟೋರೆಂಟ್‌ಗಳ ದ್ರವತ್ಯಾಜ್ಯವನ್ನು ದ್ರವತ್ಯಾಜ್ಯ ವಿಲೇವಾರಿ ಘಟಕಕ್ಕೆ ಹರಿಸಲು ಅಳವಡಿಸಲಾಗಿರುವ ಪೈಪ್ ಒಡೆದ ಪರಿಣಾಮ ಒಂದೂವರೆ ತಿಂಗಳಿನಿಂದ ದುರ್ಗಂಧಪೂರಿತ ಹೊಲಸು ನೀರು ರಸ್ತೆಯ ಪಕ್ಕದಲ್ಲಿಯೇ ಹರಿಯುತ್ತಿದೆ. ವಾಸನೆಯಿಂದಾಗಿ ಅಂಗಡಿಗಳಲ್ಲಿ ಕುಳಿತು ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಪಂಚಾಯತ್‌ನವರು ಪೈಪ್ ಒಳಗಿನ ತಡೆಯನ್ನು ತೆಗೆಯಲು ವಿಫಲರಾಗಿ ಕೈಚೆಲ್ಲಿ ಕುಳಿತಿದ್ದಾರೆ.
Related Articles
ದುರ್ವಾಸನೆಯಿಂದಾಗಿ ನಮಗೆ ಮೂಗು ಬಿಡಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಾಹಕರೂ ಸಮಸ್ಯೆ ಎದುರಿಸುತ್ತಿದ್ದಾರೆ. ಪಂಚಾಯತ್ ನವರು ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದ್ರವತ್ಯಾಜ್ಯ ಬಿಡುವ ಅಂಗಡಿ ಹಾಗೂ ಹೊಟೇಲ್ ನವರು ಅದಕ್ಕೆ ಸಹಕರಿಸಬೇಕು.
- ಮಹ್ಮದ್ ಅಶ್ರಫ್,
ಫ್ಯಾನ್ಸಿ ಅಂಗಡಿ ಮಾಲಕ
Advertisement
ರಸ್ತೆ ಅಗೆಯಲು ಪತ್ರನಾವು ಹೊಟೇಲ್ ಹಾಗೂ ಅಂಗಡಿಯವರಿಗೆ ತ್ಯಾಜ್ಯ ಬಿಡದಂತೆ ನೋಟಿಸ್ ನೀಡಿದ್ದೇವೆ. ಆದರೂ ದ್ರವತ್ಯಾಜ್ಯ ಬಿಡುತ್ತಲೇ ಇದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕಾಮಗಾರಿಗೆ ಕ್ರಿಯಾ ಯೋಜನೆ ಮಾಡಲು
ಸಾಧ್ಯವಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಸಾಧ್ಯವಾಗಿಲ್ಲ. ಈ ದ್ರವ ತ್ಯಾಜ್ಯ ಪೈಪ್ ಮುಖ್ಯ ರಸ್ತೆಯಲ್ಲಿ ಹಾದು ಹೋಗಿದ್ದು, ಅಲ್ಲಿ ಬ್ಲಾಕ್ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಖ್ಯ ರಸ್ತೆಯನ್ನು ಅಗೆಯಲು ಲೋಕೋಪಯೋಗಿ ಇಲಾಖೆಗೆ ಬರೆದುಕೊಳ್ಳಲಾಗಿದೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ ನಾಗರಾಜ್ ಎನ್.ಕೆ.