Advertisement

ಉತ್ತಮ ಆರೋಗ್ಯಕ್ಕಾಗಿ ಡ್ರ್ಯಾಗನ್‌ ಹಣ್ಣು

11:34 PM Feb 24, 2020 | mahesh |

ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌ ಹಣ್ಣು ಎಷ್ಟು ಉಪಯುಕ್ತ ಎಂದು ತಿಳಿಯೋಣ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಎಲ್ಲರ ಗಮನ ಸೆಳೆದಿರುವ ಡ್ರ್ಯಾಗನ್‌ ಹಣ್ಣು ಹೆಚ್ಚಾಗಿ ಮರುಭೂಮಿಯಂಥ ಪ್ರದೇಶಲ್ಲಿ ಬೆಳೆಯುತ್ತದೆ. ನೋಡಲು ಮುಳ್ಳಿನಂತೆ ಕಾಣುವ ಈ ಹಣ್ಣು ಗುಲಾಬಿ ಬಣ್ಣ ಹಾಗೂ ಒಳಗಡೆ ಬಿಳಿ ಕಪ್ಪು ಚುಕ್ಕಿಯಂತ ಬೀಜಗಳಿರುತ್ತದೆ. ಇದನ್ನು ತಿನ್ನುವುದರಿಂದಾಗುವ ಆರೋಗ್ಯ ದೃಷ್ಟಿಯಲ್ಲಿ ಹಲವು ಲಾಭ ಪಡೆಯಬಹುದು.

Advertisement

ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್‌ ಮಾಡುವವರಿಗೆ ತುಂಬಾ ಉಪಯುಕ್ತಕರ.

ಡ್ರ್ಯಾಗನ್‌ ಹಣ್ಣಿನಲ್ಲಿ ಫೈಬರ್‌ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ.

ಮುಖ ಸುಕ್ಕುಗಟ್ಟುವಿಕೆಯನ್ನು ತಡೆಗಟ್ಟಲು ಡ್ರ್ಯಾಗನ್‌ ಹಣ್ಣು ಸಹಾಯ. ಜತೆಗೆ ಸೌಂದರ್ಯ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಹಣ್ಣಿನಿಂದ ಚರ್ಮ ಕಾಂತಿಯುತವಾಗುತ್ತದೆ. ಇದರಿಂದ ವೃದ್ಧಾಪ್ಯ ಛಾಯೆ ಶೀಘ್ರವಾಗಿ ಕಂಡುಬರುವುದಿಲ್ಲ.

ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆಗೆ ರಾಮಬಾಣ
ಈ ಹಣ್ಣಿನಲ್ಲಿ ಇರುವ ಒಮೆಗಾ ತ್ರಿ ಪ್ಯಾಟಿ ಆ್ಯಸಿಡ್‌ ಗಳು ಮತ್ತು ಪೊಟ್ಯಾಸಿಯಂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆದು ಉತ್ತಮ ಆರೋಗ್ಯವನ್ನು ರೂಪಿಸುತ್ತದೆ.

Advertisement

ಈ ಹಣ್ಣಿನಲ್ಲಿರುವ ಆ್ಯಂಟಿ ಅಕ್ಸಿರಿನ್‌ಗಳು ಸಹ ಸಮೃದ್ಧವಾಗಿರುರುವುದರಿಂದ ಮತ್ತು ವಿಟಮಿನ್‌ ಸಿ ಹೆಚ್ಚಾಗಿರುವುದರಿಂದ ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡುತ್ತದೆ. ಸೋಂಕುಗಳಿಂದ ರಕ್ಷಿಸುತ್ತದೆ.

ಕ್ಯಾನ್ಸರ್‌ ಕಣ ನಾಶ ಪಡಿಸುತ್ತದೆ
ಡ್ರ್ಯಾಗನ್‌ ಹಣ್ಣು ಸೇವಿಸುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕ್ಯಾನ್ಸರ್‌ ಕಣಗಳನ್ನು ನಾಶ ಮಾಡುವುದರೊಂದಿಗೆ ಕ್ಯಾನ್ಸರ್‌ ರೋಗಕ್ಕೆ ತುತ್ತಾಗದಂತೆ ಮಾಡುತ್ತದೆ.

ರಕ್ತ ಹೀನತೆ ದೂರ ಮಾಡುತ್ತದೆ
ಪ್ರತಿ ದಿನ ಈ ಹಣ್ಣು ಸೇವನೆಯಿಂದ ರಕ್ತ ಹೀನತೆ ದೂರವಾಗುವುದರ ಜತೆಗೆ ರಕ್ತಗಳ ಸಂಚಾರ ಸುಗಮವಾಗುತ್ತದೆ.

ಉಸಿರಾಟದ ತೊಂದರೆ ನಿವಾರಣೆ, ಮೂಳೆ, ಮತ್ತು ಹಲ್ಲುಗಳನ್ನು ಬಲಿಷ್ಟ ಗೊಳಿಸುತ್ತದೆ.

ಬಿಳಿಯ ರಕ್ತ ಕಣಗಳನ್ನು ಹೆಚ್ಚಿಸುತ್ತದೆ

ಈ ಹಣ್ಣನ್ನು ಸೇವಿಸುವುದರಿಂದ ಬಿಳಿಯ ರಕ್ತ ಕಣಗಳು ಹೆಚ್ಚುತ್ತದೆ, ಮತ್ತು ಇದು ಡೆಂಗ್ಯೂ ಜ್ವರಕ್ಕೆ ಸಿಷಧ. ಮಧುಮೇಹ ನಿಯಂತ್ರಣದ ಜತೆಗೆ ಗರ್ಭಿಣಿಯರಿಗೆ ಉತ್ತಮ ಪೌ‌ಷ್ಟಿಕಾಂಶವನ್ನು ಒದಗಿಸುತ್ತದೆ.

ಈ ಹಣ್ಣಿನಲ್ಲಿ ಹೆಚ್ಚಿನ ನಾರಿನಾಂಶ, ಪ್ರೊಟಿನ್ಸ್‌ , ಲಿಯೊ ಕ್ಯಾಪಸ್‌, ವಿಟಮಿನ್‌ ಸಿ, ಕಾರ್ಟಿನ್‌ ಸಹಿತ ಖನಿಜಾಂಶಗಳಾದ ಕ್ಯಾಲ್ಸಿಯಂ, ಫಾಸ್ಪರಸ್‌, ಕಬ್ಬಿನಾಂಶ, ಪೋಟೊ ನ್ಯೂಟ್ರಿಯೆಂಟ್ಸ್‌ , ಒಮೆಗಾ 3 ಮತ್ತು ಒಮೆಗಾ 6 ಫೇತ್‌ ಆಸಿಡ್ಸ್‌ ಅಂಶವನ್ನು ಒಳಗೊಂಡಿದೆ.

ರಕ್ತ ಸಂಚಲನೆಗೆ ಸಹಕಾರಿ
ದೇಹದಲ್ಲಿ ಸುಗಮ ರಕ್ತ ಸಂಚಲನಕ್ಕೆ ಈ ಹಣ್ಣು ಸೇವನೆ ತುಂಬಾ ಸಹಕಾರಿಯಾಗಿದೆ. ರಕ್ತದೊತ್ತಡ ನಿಂತ್ರಣದಲ್ಲಿಡಲು ಇದು ಸಹಕರಿಸುತ್ತದೆ. ವಸಡು ಮತ್ತು ಹಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನಕ್ಕೆ ಡ್ರ್ಯಾಗನ್‌ ಹಣ್ಣು ಸಹಾಯಕವಾಗಿದೆ.

 ವಿಜಿತಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next