Advertisement

ವರ್ಗಾವಣೆ ನಿಯಮ ಸಡಿಲಿಕೆಗೆ ಕರಡು ಸಿದ್ಧ

10:57 PM Jan 29, 2020 | Team Udayavani |

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ನಿಯಮ ಸಡಿಲಿಸುವ ಸಂಬಂಧ ಸರ್ಕಾರ ಕರಡು ನಿಯಮ ಸಿದ್ಧಪಡಿಸಿದ್ದು, ವರ್ಗಾವಣೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿರುವ ವಿಶೇಷ ವಿನಾಯ್ತಿ ಹಿಂಪಡೆಯುವುದು, ಕಡ್ಡಾಯ ಬದಲಿಗೆ ವಲಯ ವರ್ಗಾವಣೆ, ಸಿ ವಲಯದಲ್ಲಿ 10 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದವರಿಗೆ ವಲಯ ವರ್ಗಾವಣೆಯಲ್ಲಿ ವಿನಾಯ್ತಿ ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

Advertisement

ಕರಡು ನಿಯಮಕ್ಕೆ ಸಂಬಂಧಿಸಿದಂತೆ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ವಲಯ ವರ್ಗಾವಣೆಯಿಂದ ವಿನಾಯ್ತಿ ಪಡೆಯುತ್ತಿದ್ದುದ್ದನ್ನು ಕರಡು ನಿಯಮದಲ್ಲಿ ಹಿಂದಕ್ಕೆ ಪಡೆಯಲಾಗಿದೆ. ದಂಪತಿ ವರ್ಗಾವಣೆ ಪ್ರಕರಣದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವವರಿಗೆ ಮಾತ್ರ ಅವಕಾಶ ಕಲ್ಪಿಸಲು ಉಲ್ಲೇಖೀಸಲಾಗಿದೆ.

ವಲಯ ವರ್ಗಾವಣೆ: ಕಡ್ಡಾಯ ವರ್ಗಾವಣೆ ಎಂಬ ಶೀರ್ಷಿಕೆಯನ್ನು ಬದಲಿಸಿ, ವಲಯ ವರ್ಗಾವಣೆ ಎಂದು ಮಾಡಲಾಗಿದೆ. ವಲಯ ವರ್ಗಾವಣೆಯಲ್ಲಿ ಯಾವುದೇ ಶಿಕ್ಷಕರು 10 ವರ್ಷಗಳಕಾಲ ಸಿ(ಗ್ರಾಮೀಣ ಪ್ರದೇಶ) ವಲಯದಲ್ಲಿ ಕಾರ್ಯನಿರ್ವಹಿಸಿದ್ದರೆ ಅವರಿಗೆ ವಲಯ ವರ್ಗಾವಣೆಯಿಂದ ವಿನಾಯ್ತಿ ನೀಡಲು ಪ್ರಸ್ತಾಪಿಸಲಾಗಿದೆ. ವಲಯ ವರ್ಗಾವಣೆಯಲ್ಲಿ 50 ವರ್ಷ ಮೀರಿದ ಶಿಕ್ಷಕಿಯರಿಗೆ ಹಾಗೂ 55 ವರ್ಷ ಮೀರಿದ ಶಿಕ್ಷಕರಿಗೆ ವಿನಾಯ್ತಿ ನೀಡಲಾಗುತ್ತದೆ.

ವಲಯವಾರು ವರ್ಗಾವಣೆಗಳಲ್ಲಿ ಮೊದಲು ತಾಲೂಕು, ನಂತರ ಜಿಲ್ಲಾ ಹಂತದಲ್ಲಿ ವರ್ಗಾವಣೆ ನಡೆಯಲಿದೆ. ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ), ಬ್ಲಾಕ್‌ ಸಂಪನ್ಮೂಲ ವ್ಯಕ್ತಿಗಳು (ಬಿಆರ್‌ಪಿ) ಕನಿಷ್ಠ ಅಥವಾ ಗರಿಷ್ಠ ಅವಧಿ ಪೂರ್ಣಗೊಳಿಸಿದ ನಂತರ ಶಾಲೆಗಳಿಗೆ ಮರು ಸ್ಥಳ ನಿಯುಕ್ತಿಗೊಳಿಸುವಾಗ ಶೇ.20ಕ್ಕಿಂತ ಹೆಚ್ಚು ಖಾಲಿ ಇರುವ ತಾಲೂಕುಗಳಿಗೆ ಆದ್ಯತೆಯ ಮೇರೆಗೆ ವರ್ಗಾಯಿಸಬೇಕೆಂಬ ನಿಯಮ ಸಡಿಲಿಸಿ, ತಾಲೂಕು ಅಥವಾ ಜಿಲ್ಲೆಯ ಯಾವುದೇ ಹು¨ªೆಗೆ ಕೌನ್ಸೆಲಿಂಗ್‌ ಮೂಲಕ ವರ್ಗಾಯಿಸಲಾಗುತ್ತದೆ ಎಂದು ಕರಡು ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ.

ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರುನಿಯುಕ್ತಿಗೊಳಿಸುವಾಗ ಮೊದಲು ತಾಲೂಕು ಹಾಗೂ ಬಳಿಕ ಜಿಲ್ಲಾ ಹಂತಕ್ಕೆ ಸೀಮಿತಗೊಳಿಸುವುದು. ವಿನಾಯಿತಿ, ಆದ್ಯತೆ ಪ್ರಕರಣಗಳಲ್ಲಿ ಏಕ ನೀತಿಯನ್ನು ತರಲು ಉದ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next