Advertisement
ನಗರ ಹೊರವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ, ನಗರ ಭಾಗದ ಸಂಘಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿದೇಶಗಳಲ್ಲಿ ಹೋಗಿ ಭಾರತದ ಮಾನ ಹರಾಜು ಹಾಕಿರುವ ರಾಹುಲ್ ಗಾಂಧಿಯಿಂದ ಜೈಭಾರತ್ ಸಮಾವೇಶ ನಡೆಸುತ್ತಿರುವ ಕುರಿತು ವ್ಯಂಗ್ಯವಾಡಿದ ಅವರು, ರಾಹುಲ್‌ಗಾಂಧಿ ಒಂದೆರೆಡು ಬಾರಿಯಲ್ಲ, ಕರ್ನಾಟಕಕ್ಕೆ 50 ಬಾರಿ ಬರಬೇಕು. ಅವರು ಬಂದು ಪ್ರಚಾರ ಮಾಡಿದ ಕಡೆಗಳೆಲ್ಲೆಲ್ಲಾ ಕಾಂಗ್ರೆಸ್‌ಗೆ ಸೋಲಾಗುತ್ತದೆ ಎಂದರು.
Related Articles
Advertisement
ಮತ್ತೂಮ್ಮೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚುನಾವಣೆಗಾಗಿ ಜನರು ಕಾಯು ತ್ತಿದ್ದು, ಹೈಕಮಾಂಡ್ ಅಳೆದು ತೂಗಿ ಏ.8ರಂದು ಟಿಕೆಟ್ ಘೋಷಣೆ ಮಾಡಲಿದೆ. ಆ ಬಳಿಕ ಇನ್ನಷ್ಟು ಉತ್ಸುಕರಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.
ನಾನು ಪಕ್ಷದ ಸಿಪಾಯಿ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೋಲಾರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನನ್ನನ್ನು ನೇಮಿಸಲಾಗಿದ್ದು. ಪ್ರತಿ ಹೋಬಳಿ, ಗ್ರಾಪಂ, ಹಳ್ಳಿಗೂ ಹೋಗುತ್ತೇನೆ. ಆದರೆ, ನಾನು ಕೋಲಾರ ಜಿಲ್ಲೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಪಕ್ಷವು ಅವಕಾಶ ಕೊಟ್ಟರೆ ಹೆಬ್ಟಾಳದಲ್ಲಿ ನಿಲ್ಲುವೆ ನಾನು ಎಂದಿಗೂ ಪಕ್ಷದ ಸಿಪಾಯಿ ಎಂದು ತಿಳಿಸಿದರು.
ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ವಿಜಯ್ ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮ ರಾಯಪ್ಪ, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ನಿರ್ಮಲಾ, ಅಲ್ಪಸಂಖ್ಯಾತರ ಘಟಕದ ಬೆಗ್ಲಿ ಸಿರಾಜ್, ರಾಜೇಶ್‌ಸಿಂಗ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ವಿರುದ್ಧ ವೈಎಎನ್ ಲೇವಡಿ : ರಾಜ್ಯದಲ್ಲಿ 5 ವರ್ಷ ಮುಖ್ಯಮಂತ್ರಿಯಾಗಿ ಮತ್ತೈದು ವರ್ಷ ವಿಪಕ್ಷ ನಾಯಕರಾಗಿದ್ದವರು, ಜನರಿಗೆ ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಬೊಗಳೆ ಬಿಡುವ ನಾಯಕರು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಗೆಲ್ಲುತ್ತೇನೆ, ಅಲ್ಲಿ ನಿಲ್ಲುತ್ತೇನೆ ಎಂದು ಓಡಾಡುತ್ತಿರುವುದು ದುರಂತದ ಸಂಗತಿ ಎಂದು ಸಿದ್ದರಾಮಯ್ಯ ವಿರುದ್ಧ ಡಾ.ವೈ.ಎ.ಎನ್. ಲೇವಡಿ ಮಾಡಿದರು.
ಗೆಲ್ಲುವ ಅಪನಂಬಿಕೆಯಿಂದಾಗಿ 2 ಕಡೆ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ, ಒಂದು ಪಕ್ಷದ ರಾಜ್ಯ ನಾಯಕರೆಂದು ಹೇಳಿ ಕೊಳ್ಳುವವರಿಗೆ ಗೆಲುವು ಸಾಧಿಸಲು ಒಂದು ಕ್ಷೇತ್ರವೂ ಸಿಗುತ್ತಿಲ್ಲ. ಹಿಂದೆ ಗೆದ್ದ ಕಡೆ ಈಗ ನಿಲ್ಲಲು ಧೈರ್ಯವಿಲ್ಲ ಏಕೆಂದರೆ ಅಲ್ಲಿನ ಜನರಿಗೆ ಏನೂ ಮಾಡಿಲ್ಲ ಎಂಬುದು ಗೊತ್ತಿರುವುದರಿಂದ ಅಲ್ಲಿ ಮನೆಗೆ ಕಳುಹಿಸುವ ಖಾತ್ರಿ ಭಯ ತರಿಸಿದೆ ಎಂದು ಛೇಡಿಸಿದರು.
ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಭಿಕ್ಷೆ ಬೇಡುವಂತಹ ಸ್ಥಿತಿಗೆ ತಲುಪಿದ್ದಾರೆ ಎಂದು ಛೇಡಿಸಿದ ಅವರು, ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅ ಕಾರಕ್ಕೆ ಬರುವ ಗ್ಯಾರಂಟಿಯೂ ಇಲ್ಲ. ಅದಕ್ಕಾಗಿಯೇ ಜನರಿಗೆ ಗ್ಯಾರಂಟಿ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು, ಜನರಿಗೂ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯೇ ಇಲ್ಲವೆಂದು ಟೀಕಿಸಿದರು.