Advertisement
ಕಾಲ ಬದಲಾಗಬಹುದು. ಆದರೆ ನಂಬಿಕೆ, ಶ್ರದ್ಧೆ, ಭಕ್ತಿ ಬದಲಾಗದು. ಯುವಪೀಳಿಗೆ ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತಹ ಯುವಸಮೂಹವನ್ನು ಇಂದು ಹಿರಿಯಡಕದಲ್ಲಿ ಕಾಣುತ್ತಿದ್ದೇವೆ. ಆಕರ್ಷಕ ಕೆತ್ತನೆಗಳಿಂದ ದಾರುಶಿಲ್ಪ ಹಾಗೂ ಶಿಲ್ಪಕಲೆ ಇಲ್ಲಿ ಅದ್ಭುತವಾಗಿ ಮೂಡಿಬಂದಿದ್ದು ಇದರ ಹಿಂದಿರುವ ಶ್ರಮ ಪ್ರಶಂಸನೀಯ. ಪ್ರತಿಯೊಬ್ಬರೂ ಕ್ಷೇತ್ರದ ದರ್ಶನ ಮಾಡಲೇಬೇಕು ಎಂದರು.
ದೇವಸ್ಥಾನ ನಿರ್ಮಾಣದ ಶಿಲ್ಪಿ ರಾಜು ಎಚ್. ನಾಯ್ಕ, ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರಸಾದ್ ಶೆಟ್ಟಿ, ದಾರುಶಿಲ್ಪಿ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ, ಹರೀಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಧರ್ಮಸ್ಥಳ ಗ್ರಾ. ಯೋಜನೆಯ ಹಿರಿಯಡಕ ಘಟಕದ ವತಿಯಿಂದ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಗೋವರ್ಧನದಾಸ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಆರ್. ಶೆಟ್ಟಿ, ಅರ್ಚಕ ರಂಗನಾಥ ಭಟ್ ಮೊದಲಾದವರಿದ್ದರು. ಪ್ರಸಾದ್ ಶೆಟ್ಟಿ ಕುತ್ಯಾರು ಸ್ವಾಗತಿಸಿ, ನರ್ಜೆ ವಾಸು ಪ್ರಭು ವಂದಿಸಿದರು. ಸಂತೋಷ ಅವರು ಕಾರ್ಯಕ್ರಮ ನಿರೂಪಿಸಿದರು.