Advertisement

ಕೆರೆಗಳು ಊರಿನಲ್ಲಿ ಆಸ್ತಿ. ಅವುಗಳ ಸಂರಕ್ಷಣೆ ಇಂದಿನ ಅಗತ್ಯ : ಹೆಗ್ಗಡೆ

11:27 AM Sep 15, 2022 | Team Udayavani |

ಬೆಳ್ತಂಗಡಿ : ಕೆರೆಗಳು ಊರಿನಲ್ಲಿ ಆಸ್ತಿ. ಅವುಗಳ ಸಂರಕ್ಷಣೆ ಇಂದಿನ ಅಗತ್ಯ. ಅಂತಹ ಕೆರೆಗಳನ್ನು ಜನರ ಸಹ‌ಭಾಗಿತ್ವ‌ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪುನಃಶ್ಚೇತನಗೊಳಿಸಲಾಗುತ್ತಿದ್ದು, ಹೂಳು ತುಂಬಿಕೊಂಡಿದ್ದ ಹಲವು ಕೆರೆಗಳು ಇದೀಗ ಶೇಖರಣೆ ಸಾಮರ್ಥ್ಯ ಹೆಚ್ಚಿಸಿಕೊಂಡು ತುಂಬಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯಿಂದ ಬಂದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿ ಗಳನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಭವಿಷ್ಯ, ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಸಾಧನೆ ಮಾಡಲು ಛಲ ಬೇಕು. ಆಲಸ್ಯ ಇರುವವರಿಂದ ಸಾಧನೆ ಅಸಾಧ್ಯ. ಪ್ರತಿಯೊಂದು ಕೆಲಸವನ್ನೂ ಸರಕಾರವೇ ಮಾಡಬೇಕೆಂದು ಕಾಯಬಾರದು. ಗ್ರಾಮದ ಮೂಲಭೂತ ಅಗತ್ಯಗಳನ್ನು ಗ್ರಾಮಸ್ಥರೇ ಪರಸ್ಪರ ಸಹಕಾರದಿಂದ ಪೂರೈಸಿಕೊಳ್ಳಲು ಸಾಧ್ಯ ಎಂದು ಮಾರ್ಗದರ್ಶನ ನೀಡಿದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ| ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಕೆರೆ ವಿಭಾಗದ ನಿರ್ದೇಶಕ ರಾದ ಶಿವಾನಂದ ಆಚಾರ್ಯ, ಯೋಜನಾಧಿಕಾರಿ ಯುವರಾಜ್‌ ಜೈನ್‌ ಹಾಗೂ ಕೆರೆ ಅಭಿಯಂತ ಭರತ್‌ ಉಪಸ್ಥಿತರಿದ್ದರು. ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಡಾ| ಹೆಗ್ಗಡೆ ಅವರನ್ನು ಅಭಿನಂದಿಸಿದರು.

ರೈತರ ಬದುಕು ಹಸನಾದ ಕಥೆ
ಕೆರೆ ಸಮಿತಿ ಸದಸ್ಯ ಅಜ್ಜಂಪುರ ತಾಲೂಕು ಗಡೀಹಳ್ಳಿ ಗ್ರಾಮದ ಜಿ.ಐ. ಮಂಜುನಾಥ್‌ ಮಾತನಾಡಿ, ಹಿಂದೆಲ್ಲ ಪವಿತ್ರ ಕಾರ್ಯಗಳಿಗೆ ಬಳಸಲಾಗುತ್ತಿದ್ದ ನಮ್ಮೂರ ಕೆರೆ ಪಾಳು ಬಿದ್ದು ಜಾಲಿ ಗಿಡಗಳು ಬೆಳೆದು ಬಳಕೆಗೆ ಯೋಗ್ಯವಾಗಿರಲಿಲ್ಲ. ಜೂಜು, ಕುಡಿತ ಮೊದಲಾದ ಅಕ್ರಮಗಳ ತಾಣವಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಹಮ್ಮಿಕೊಂಡ ಕೆರೆ ಅಭಿವೃದ್ಧಿ ಕಾಮಗಾರಿಯಿಂದ ಈಗ ಮರುಜೀವ ಪಡೆದಿದೆ. ಅಂತರ್ಜಲ ಮಟ್ಟ ಹೆಚ್ಚಿ ರೈತರ ಬದುಕು ಹಸನಾಗಿದೆ. ಊರಿಗೂ ನೀರಿನ ಬರ ನೀಗಿದೆ ಎಂದು ತಿಳಿಸಿದರು.

Advertisement

469 ಕೆರೆಗಳ ಪುನಃಶ್ಚೇತನ
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ರಾಜ್ಯಾದ್ಯಂತ 469 ಕೆರೆಗಳ ಪುನಃಶ್ಚೇತನ ನಡೆಸಲಾಗಿದೆ. ಈ ಕೆರೆಗಳು ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಿರಿ. ಕೆರೆಗಳ ಸ್ವತ್ಛತೆಗೆ ಆದ್ಯತೆ ನೀಡಿ. ಸುತ್ತ ಗಿಡಗಳನ್ನು ಬೆಳೆಸಿ ಅಭಿವೃದ್ಧಿ ಪಡಿಸಿರಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next