Advertisement

ಹೈನುಗಾರರಿಗೆ ಸ್ವಾತಂತ್ರ್ಯ ತಂದುಕೊಟ್ಟ ಡಾ.ವರ್ಗಿಸ್‌ ಕುರಿಯನ್‌

09:04 PM Nov 26, 2019 | Lakshmi GovindaRaj |

ಭೇರ್ಯ: ದೇಶಕ್ಕೆ ಗಾಂಧೀಜಿ ಸ್ವಾತಂತ್ರ್ಯ ತಂದುಕೊಟ್ಟರೆ ಹಾಲು ಉತ್ಪಾದಕರಿಗೆ ಡಾ.ವರ್ಗಿಸ್‌ ಕುರಿಯನ್‌ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌ ಹೇಳಿದರು. ಸಮೀಪದ ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಮತ್ತು ತಾಲೂಕು ಸಹಕಾರ ಸಂಘಗಳ ಸಹಯೋಗದಲ್ಲಿ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ ಡಾ.ವರ್ಗಿಸ್‌ಕುರಿಯನ್‌ ಅವರ 98ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಸಾವಿರಾರೂ ಮಂದಿಗೆ ಸ್ಪೂರ್ತಿ: ಡಾ.ಕುರಿಯನ್‌ ರೈತರ ಬಗ್ಗೆ ಕಾಳಜಿ ಹೊಂದಿ ರೈತರಿಗೆ ಸ್ವಾತಂತ್ರ್ಯ ತಂದುಕೊಡುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು. ಕ್ಷೀರ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಶ್ರದ್ಧೆಯಿಂದ ದುಡಿದ ಕುರಿಯನ್‌: ಡಾ.ಕುರಿಯನ್‌ರ ಪ್ರಾಮಾಣಿಕತೆ ಶ್ರದ್ಧೆ ಹಾಗೂ ದುಡಿಮೆಯಿಂದ ಇಂದು ಹಾಲು ಉತ್ಪಾದನೆಯಲ್ಲಿ ಭಾರತ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಥಾನಕ್ಕೆ ತಲುಪಲು ಕಾರಣವಾಗಿದೆ. ಇಂಥ ಮಹಾನ್‌ ವ್ಯಕ್ತಿಯ ಜನ್ಮದಿನ ಆಚರಣೆ ನಿಜಕ್ಕೂ ಸ್ಮರಣೀಯ ಕೆಲಸವಾಗಿದೆ ಎಂದು ಹೇಳಿದರು.

ಮಹನೀಯರ ಜಯಂತಿ ಆಚರಿಸಬೇಕು: ಒಬ್ಬೊಬ್ಬ ಮಹಾನ್‌ ವ್ಯಕ್ತಿಗಳ ಜಯಂತಿ ನಮ್ಮಲ್ಲಿ ನಡೆಸುವ ಮೂಲಕ ಗಾಂಧಿ, ವಾಲ್ಮೀಕಿ, ಸಂಗೊಳ್ಳಿರಾಯಣ್ಣ, ಅಂಬೇಡ್ಕರ್‌, ಟಿಪ್ಪು, ಬಸವಣ್ಣ ಇಂಥ ಹತ್ತು ಹಲವು ಮಹನೀಯರನ್ನು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಿರುವುದು ವಿಷಾದದ ಸಂಗತಿಯಾಗಿದ್ದರೂ ಇಂಥ ಜಯಂತಿಗಳ ನಡುವೆ ಎಲ್ಲಾ ಸಮಾಜದವರು ಒಂದೆಡೆ ಸೇರಿ ಡಾ.ವರ್ಗಿಸ್‌ಕುರಿಯನ್‌ ಜನ್ಮದಿನ ಆಚರಣೆ ಮಾಡುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಸಾಧನೆಯಿಂದ ತ್ಯಾಗವಿರುತ್ತೆ: ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಾಂಧಿಶಿವಣ್ಣ ಮಾತನಾಡಿ, ಯಾವುದೇ ವ್ಯಕ್ತಿ ಸಾಧನೆಯ ಸುಖದ ಸುಪ್ಪತ್ತಿಗೆಯಂದೆ ಸಾಕಷ್ಟು ತ್ಯಾಗ ಬಲಿದಾನ ನೋವಿರುತ್ತದೆ ಅಂಥ ನೋವುಗಳನ್ನು ಕಂಡು ಉಂಡು ಹೈನುಗಾರಿಕೆ ಬೆಳೆಯಲು ಡಾ.ಕುರಿಯನ್‌ ಮಾಡಿರುವ ಸಾಧನೆ ಇಡೀ ವಿಶ್ವವೇ ತಿರುಗಿನೋಡುವಂತೆ ಮಾಡಿದೆ ಎಂದು ತಿಳಿಸಿದರು.

Advertisement

ಸಂಘಗಳು ಬೆಳೆದರೆ ನಾವೆಲ್ಲರೂ ಬೆಳೆದಂತೆ ಎಂಬ ಆಲೋಚನೆಯೊಂದಿಗೆ ಜಿಲ್ಲೆಯಲ್ಲಿ ಅದರಲ್ಲೂ ತಾಲೂಕಿನಲ್ಲಿ ಹತ್ತು ಹಲವಾರು ಸಂಘಗಳ ಹುಟ್ಟಿಗೆ ಕಾರಣವಾಗಿ ಎಲ್ಲಾ ಸಂಘಗಳು ಉತ್ತಮವಾಗಿ ನಡೆಯಲು ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌ ಪ್ರಮುಖ ಕಾರಣರಾಗಿದ್ದಾರೆ ಎಂದರು.

ಎ.ಟಿ.ಸೋಮಶೇಖರ್‌ ಮೊದಲು ಮೈಮುಲ್‌ ನಿರ್ದೇಶಕರಾಗಿದ್ದಾಗ ತಾಲೂಕಿನಲ್ಲಿ ಕೇವಲ 35 ರಿಂದ 40 ಹಾಲು ಉತ್ಪಾಧಕರ ಸಂಘಗಳು ಇದ್ದವು ಆದರೆ ಅವರ ಶ್ರಮದಿಂದ 145 ಸಂಘಗಳು ಸ್ಥಾಪನೆ ಮಾಡಿ ತಾಲೂಕಿನ ರೈತರನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದ್ದಾರೆ. ಕ್ಷೀರಕ್ಷೇತ್ರದಲ್ಲಿ ಎ.ಟಿ.ಸೋಮಶೇಖರ್‌ ಸೇವೆ ಶ್ಲಾಘನೀಯವಾದದು ಎಂದು ತಿಳಿಸಿದರು.

ಮೈಮುಲ್‌ ವ್ಯವಸ್ಥಾಪಕ ಎನ್‌.ಕುಮಾರ್‌, ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಗುಣಮಟ್ಟ ಭಾಗದ ಸಂತೋಷ್‌, ಸಹಕಾರ ಅಭಿವೃದ್ಧಿ ಅಧಿಕಾರಿ ಮಂಜುನಾಥ್‌, ನಿವೃತ್ತ ಅಧಿಕಾರಿ ವಸಂತಕುಮಾರ್‌, ಗ್ರಾಪಂ ಉಪಾಧ್ಯಕ್ಷೆ ಲಲಿತಾ, ಸದಸ್ಯ ರಾಮು, ಮಹದೇವ, ಭಾಗ್ಯಮ್ಮ, ಹಂಪಾಪುರ ಸಂಘದ ಅಧ್ಯಕ್ಷೆ ಕಮಲಮ್ಮ ಹಾಗೂ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕ ಚೇತನ್‌, ಜಯರಾಮಜೋಗಿ,

ಜಿ.ಎನ್‌.ಜಯರಾಮೇಗೌಡ, ಗೋವಿಂದೇಗೌಡ, ಮಹೇಶ್‌, ಸಣ್ಣಸ್ವಾಮಿ, ಶಿವಣ್ಣ, ಜಯಂತಿ, ನಾಗಮ್ಮ, ಮಾಲೇಗೌಡ, ನೀಲಮ್ಮ, ಗ್ರಾಮದ ಯಜಮಾನ ಜಿ.ಎನ್‌.ರಘು, ಡೇರಿ ಕಾರ್ಯದರ್ಶಿ ಮಹದೇವ, ಮೈಮುಲ್‌ ವಿಸ್ತರಣಾಧಿಕಾರಿಗಳಾದ ಯೋಗೇಶ್‌, ಜಯಂತ್‌ಕುಮಾರ್‌, ದುಷ್ಯಂತ್‌, ಅಭಿ, ನಂದಿನಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಆಗಮಿಸಿದ್ದ ಅಧ್ಯಕ್ಷ-ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next