ಗಾಗಿ ಮೀಸಲಿಟ್ಟ ರಾಜ್ಯದ ಮೊದಲ ಉದಾಹರಣೆಯಾಗಿ ಮಣಿಪಾಲ ಮಾಹೆ ವಿ.ವಿ. ಅಧೀನದ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಿದೆ.
Advertisement
ನೂರು ಬೆಡ್‌ಗಳನ್ನು ಹೊಂದಿರುವ ಇಲ್ಲಿ 11 ತೀವ್ರ ನಿಗಾ ಘಟಕ, 15 ಹೈ ಡಿಪೆಂಡೆನ್ಸಿ ಯುನಿಟ್, 36 ಖಾಸಗಿ ಕೊಠಡಿಗಳಿವೆ. ಅವುಗಳನ್ನು ಐಸೊಲೇಶನ್‌ಗಾಗಿ ಬಳಸಬಹುದು. ಇದಲ್ಲದೆ 43 ಸಾಮಾನ್ಯ ಬೆಡ್‌ಗಳ ಸೌಲಭ್ಯವಿದೆ. ಇಲ್ಲಿರುವ ಎಲ್ಲ ಇತರ ರೋಗಿಗಳನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಸ್ಥಳಾಂತರಿಸಿ ಎ. 1ರಿಂದ ಕೋವಿಡ್ 19 ಪೀಡಿತರಿಗೆ ಮೀಸಲು ಇರಿಸಲಾಗಿದೆ. ಪ್ರಸ್ತುತ ಮೂವರು ಸೋಂಕುಪೀಡಿತರು ಇಲ್ಲಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಶಂಕಿತರಿಗೆ ಅವಕಾಶ ಇಲ್ಲವಾದರೆ ಅವರನ್ನೂ ದಾಖಲಿಸಿಕೊಳ್ಳಲಾಗುತ್ತಿದೆ.
ಕೋವಿಡ್ 19 ಪೀಡಿತರ ಚಿಕಿತ್ಸೆಗಾಗಿ ತುರ್ತು ಔಷಧ, ತುರ್ತು ನಿಗಾ, ಸೋಂಕು ರೋಗ ತಜ್ಞರ ತಂಡ ರಚಿಸಲಾಗಿದೆ. ಸುಮಾರು 80 ವೈದ್ಯರು, 80 ಶುಶ್ರೂಷಕಿಯರು, 60 ಸಹಾಯಕ ಸಿಬಂದಿ,ಕಚೇರಿ ನಿರ್ವಹಣೆ, ಲೆಕ್ಕಪತ್ರ ವಿಭಾಗ, ಪ್ರಯೋಗಾಲಯ ಮತ್ತು ಕ್ಷಕಿರಣ ತಂತ್ರಜ್ಞರು ಸುಮಾರು 20 ಮಂದಿ ಇದ್ದಾರೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು. ಸೋಂಕುಪೀಡಿತರಿಗೆ 14 ದಿನಗಳ ಕಾಲ ಚಿಕಿತ್ಸೆ ನೀಡಿದ ಅನಂತರ ಎರಡೆರಡು ಬಾರಿ ಗಂಟಲ ದ್ರವದ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ಫಲಿತಾಂಶ ನೆಗೆಟಿವ್ ಬಂದರೆ ಬಿಡುಗಡೆ ಮಾಡಲಾಗುತ್ತದೆ. ಬಳಿಕ ಮನೆಯಲ್ಲಿ ನಿಗಾದಲ್ಲಿರಲು ಸಲಹೆ ನೀಡುತ್ತೇವೆ ಎನ್ನುತ್ತಾರೆ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್.
Related Articles
– ಡಾ| ಎಚ್.ಎಸ್. ಬಲ್ಲಾಳ್, ಮಾಹೆ ವಿ.ವಿ. ಸಹಕುಲಾಧಿಪತಿಗಳು, ಮಣಿಪಾಲ
Advertisement
ಏಕಕಾಲದಲ್ಲಿ ಸಾವಿರಾರು ಜನರಿಗೆ ಸೋಂಕು ತಗುಲಿದರೆ ನಮ್ಮ ಆರೋಗ್ಯ ವ್ಯವಸ್ಥೆ ಸಾಕಾಗುವುದಿಲ್ಲ. ಸೋಂಕಿನ ಸರಪಣಿಯನ್ನು ಕತ್ತರಿಸಬೇಕಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ನಾವು ಮಾಡಬಹುದಾದ ಅತ್ಯುತ್ತಮ ಪ್ರಯತ್ನ.– ಡಾ| ಶಶಿಕಿರಣ್ ಉಮಾಕಾಂತ್,
ನೋಡಲ್ ಅಧಿಕಾರಿ ಮತ್ತು ಪ್ರಾಧ್ಯಾಪಕರು, ಡಾ| ಟಿಎಂಎ ಪೈ ಆಸ್ಪತ್ರೆ