Advertisement

ಡಾ|ಟಿ.ಎಂ.ಎ. ಪೈ ಸರ್ವರಿಗೂ ಸ್ಫೂರ್ತಿ: ಡಾ|ಶಂಕರ್‌

09:45 AM May 01, 2018 | Team Udayavani |

ಉಡುಪಿ: ಆಧುನಿಕ ಮಣಿಪಾಲದ ಶಿಲ್ಪಿ ಡಾ| ಟಿ.ಎಂ.ಎ. ಪೈ ಅವರು ಸರ್ವರಿಗೂ ಸ್ಫೂರ್ತಿದಾಯಕರು ಎಂದು ಉದ್ಯಮಿ
ಡಾ| ಜಿ. ಶಂಕರ್‌ ಹೇಳಿದರು. ಮಣಿಪಾಲದ ಮಾಹೆ, ಡಾ| ಟಿ.ಎಂ.ಎ. ಪೈ ಫೌಂಡೇಶನ್‌, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ ಆಶ್ರಯದಲ್ಲಿ ಸೋಮವಾರ ಮಣಿಪಾಲದ ವ್ಯಾಲ್ಯೂ ಹೊಟೇಲ್‌ ಸಭಾಂಗಣದಲ್ಲಿ ಡಾ| ಟಿ.ಎಂ.ಎ. ಪೈಯವರ 120ನೆಯ ಜನ್ಮದಿನದ ಪ್ರಯುಕ್ತ ನಡೆದ ಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

Advertisement

ಡಾ| ಪೈ ಅವರನ್ನು ಸ್ಮರಿಸಿದಾಗ “ಬಂಗಾರದ ಮನುಷ್ಯ’ ಚಿತ್ರದ “ಮನಸ್ಸು ಒಂದಿದ್ದರೆ ಮಾರ್ಗ ವುಂಟು’ ಎಂಬ ಉಕ್ತಿ ನೆನಪಾಗುತ್ತದೆ. ಆರೋಗ್ಯ, ತಂತ್ರಜ್ಞಾನ, ಬ್ಯಾಂಕ್‌, ಮುದ್ರಣ, ಉದ್ಯಮ, ವಿಮೆ- ಹೀಗೆ ವಿವಿಧ ರಂಗಗಳಲ್ಲಿ ಅವರ ಸಾಧನೆ ಅಪಾರ ವಾದುದು. ಸಾಮಾನ್ಯ ವರ್ಗದಲ್ಲಿ ಜನಿಸಿದ ಡಾ| ಪೈ ಯವರು ಆ ಕಾಲದಲ್ಲೇ ಜಾಗತಿಕ ಪರಿಕಲ್ಪನೆಯನ್ನು ಹೊಂದಿದ್ದರು. ಜೀವನದ ಪ್ರತಿ ಸಮಸ್ಯೆಯನ್ನು ಅವರು ಸವಾಲಾಗಿ ಸ್ವೀಕರಿಸಿದರು, ಪರಿಹಾರವನ್ನು ಕಂಡು ಕೊಂಡರು ಎಂದು ಶಂಕರ್‌ ಹೇಳಿದರು. 

ಟಿ. ಅಶೋಕ್‌ ಪೈಯವರು ನನಗೆ ಡಾ| ಟಿ. ರಾಮದಾಸ್‌ ಪೈ, ಡಾ| ಎಚ್‌.ಎಸ್‌. ಬಲ್ಲಾಳರ ಸಂಪರ್ಕ ಮಾಡಿ ಕೊಟ್ಟರು. ಅಂದಿನಿಂದ ವಿಶೇಷ ವಾಗಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಲು ಡಾ| ರಾಮದಾಸ್‌ ಪೈ ಅವಕಾಶ ಕಲ್ಪಿಸಿದರು. ಇವರೆಲ್ಲರ ಸಹಕಾರದಿಂದ ನಾನಿಲ್ಲಿ ನಿಂತು ಮಾತನಾಡು ವಂತಾಗಿದೆ ಎಂದು ಶಂಕರ್‌ ಹೇಳಿದರು. 

ಮಣಿಪಾಲ್‌ ಫೈನಾನ್ಸ್‌ ಕಾರ್ಪೊರೇಶನ್‌ ಆಡಳಿತ ನಿರ್ದೇಶಕ ಟಿ. ನಾರಾಯಣ ಪೈ, ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ, ಮಾಹೆ ಪ್ರಥಮ ಮಹಿಳೆ ವಸಂತಿ ಆರ್‌. ಪೈ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಟಿಎಂಎ ಪೈ ಪ್ರತಿಷ್ಠಾನದ ಖಜಾಂಚಿ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು. ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಸ್ವಾಗತಿಸಿ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು. ಕೆಎಂಸಿ ಮೂಳೆಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅನಿಲ್‌ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಮಾಹೆ ಇನ್ನೋವೇಶನ್‌ ಮೊದಲಾದ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಮೌನ ಸಾಧಕ ಡಾ| ಟಿಎಂಎ ಪೈ
ಆಡದೆಯೇ ಮಾಡುವವನು ರೂಢಿಯೊಳ ಗುತ್ತಮನು ಎಂಬಂತೆ ಡಾ| ಪೈ ಅವರು ಛಲದಂಕಮಲ್ಲರು ಮತ್ತು ಸದ್ದಿಲ್ಲದೆ ಸಾಧನೆ ಮಾಡಿ ದವರು. ಅವರ ಸಾಧನೆಗಳು ನಮ ಗೆಲ್ಲರಿಗೂ ಪ್ರೇರಕ. ಜಗತ್ತು ಮತ್ತು ಸರಕಾರ ಗಳು ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯು ತ್ತಿದ್ದು, ಡಾ| ಪೈ ಅವರ ಬಗೆಗೆ ಗೌರವ ಮೂಡುತ್ತದೆ. ಅವರದು ಮಹಾ ಚೇತನ, ಅಮರ ಚೇತನ ಎಂದು ಡಾ| ಶಂಕರ್‌ ಬಣ್ಣಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next