Advertisement

ಮೇಲ್ಮನೆ: ಡಾ.ಸೂರಜ್‌ ರೇವಣ್ಣ ಜೆಡಿಎಸ್‌ ಅಭ್ಯರ್ಥಿ

03:26 PM Nov 17, 2021 | Team Udayavani |

ಹಾಸನ: ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್‌ ರೇವಣ್ಣ ಅವರು ಅಭ್ಯರ್ಥಿಯಾಗುವುದು ಖಚಿತವಾಗಿದೆ.

Advertisement

ಶ್ರುಕವಾರ ( ನ.19) ರಂದು ಸೂರಜ್‌ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆದಿದೆ. ಭವಾನಿ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಬೇಕು ಎಂದು ಪಕ್ಷದ ಮುಖಂಡ ಒತ್ತಡ ಇದ್ದರೂ ದೇವೇಗೌಡರ ಕುಟುಂಬ ದವರು ಭವಾನಿ ಅವರನ್ನು ಸ್ಪರ್ಧೆಗಿಳಿಸಲು ಒಪ್ಪಲಿಲ್ಲವೆಂದು, ಭವಾನಿ ಅವರೂ ಮುಂಬರುವ ವಿಧಾನಸಭಾ ಚುನಾವಣೆ ಸ್ಪರ್ಧಿಸುವ ಅಥವಾ ಜಿಪಂ ಚುನಾವಣೆ ನಂತರ ಹಾಸನ ಜಿಪಂ ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ಅದರತ್ತ ಚಿತ್ತಹರಿಸಿದ್ದಾರೆಂದು, ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಅಂತಿಮವಾಗಿ ರೇವಣ್ಣ – ಭವಾನಿ ಹಿರಿಯ ಪುತ್ರ ಡಾ.ಸೂರಜ್‌ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಲು ದೇವೇಗೌಡರ ಕುಟುಂಬ ನಿರ್ಧಾರ ಕೈಗೊಂಡಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಶಂಕರ್‌: ಕಾಂಗ್ರೆಸ್‌ನಿಂದ ಚನ್ನರಾಯ ಪಟ್ಟಣದ ಎಂ.ಶಂಕರ್‌ ಅವರಿಗೂ ಟಿಕೆಟ್‌ ಖಚಿತವಾಗಿದ್ದು ಅಧಿಕೃತವಾಗಿ ಪಕ್ಷದ ವರಿಷ್ಠ ಮಂಡಳಿ ಘೋಷಣೆ ಮಾಡುವುದು ಬಾಕಿ ಉಳಿದಿದೆ. ಹಾಲಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಎಂ.ಶಂಕರ್‌, ಸಕಲೇಶ ಪುರದ ಬೈರಮುಡಿ ಚಂದ್ರು ಅವರ ಹೆಸರನ್ನು ಕೆಪಿಸಿಸಿ ಔಪಚಾರಿಕವಾಗಿ ವರಿಷ್ಠ ಮಂಡಳಿಗೆ ಕಳುಹಿಸಿ ಕೊಟ್ಟಿದೆ.

ಆದರೆ, ಗೋಪಾಲಸ್ವಾಮಿ ಅವರು 2ನೇ ಬಾರಿ ಮೇಲ್ಮನೆ ಚುನಾವಣೆಯ ಸ್ಪರ್ಧೆಗಿಳಿಯಲು ನಿರಾಕರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಶ್ರವಣ ಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸಲು ಗೋಪಾಲಸ್ವಾಮಿ ಅವರು ಸ್ಪರ್ಧಿಸುವ ಇಚ್ಛೆ ವ್ಯಕ್ತ ಪಡಿಸಿ ಎಂ.ಶಂಕರ್‌ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದಿದ್ದರಿಂದ ಶಂಕರ್‌ ಅವರ ಹೆಸರು ಅಂತಿಮವಾಗಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ:- ಬಿಜೆಪಿಯ ವಿಶ್ವಜಿತ್ ರಾಣೆ ಆಪ್ ಸೇರ್ಪಡೆ : ಗೋವಾ ಮಾಜಿ ಸಿಎಂ ವಿರುದ್ಧ ಕೇಜ್ರಿವಾಲ್ ಕಿಡಿ

Advertisement

ಮೇಲ್ಮನೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಹಾಗಾಗಿ ಟಿಕೆಟ್‌ಗಾಗಿ ಯಾವ ಮುಖಂ ಡರೂ ಗಂಭೀರ ಪ್ರಯತ್ನ ಮಾಡಿಲ್ಲ. ಆದರೂ, ಅಭ್ಯರ್ಥಿ ಸ್ಪರ್ಧೆಗಿಳಿಸುವ ಸಂಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಮಂಗಳವಾರ ಜಿಲ್ಲಾ ಬಿಜೆಪಿ ಮುಖಂಡರೊಂದಿಗೆ ಹಾಸನದಲ್ಲಿ ಸಮಾ ಲೋಚನೆ ನಡೆಸಿದರು. ಆದರೆ, ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next