Advertisement
1 ಲಕ್ಷ ನಗದು, ಸ್ಮರಣಿಕೆ ಒಳಗೊಂಡ ಈ ಪ್ರಶಸ್ತಿ ಆಯ್ಕೆಗೆ ಡಾ| ಗುರುದೇವಿ ಹುಲೆಪ್ಪನವರಮಠ ಅಧ್ಯಕ್ಷತೆಯಲ್ಲಿ ಡಾ|ವೆಂಕಟಗಿರಿ ದಳವಾಯಿ ಹಾಗೂ ಡಾ|ಎಮ್.ಬಿ. ಹೂಗಾರ ಅವರನ್ನೊಳಗೊಂಡ ಸಮಿತಿಯು ಜ.7 ರಂದು ಸಭೆ ಸೇರಿ ನಿರ್ಣಯ ಕೈಗೊಂಡು ಮುಚ್ಚಿದ ಲಕೋಟೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಶಿಫಾರಸ್ಸು ಮಾಡಿತ್ತು. ಈಗ ಬುಧವಾರ ಟ್ರಸ್ಟ್ ಸದಸ್ಯರು ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಂಡು, ಡಾ|ಇಮ್ರಾಪೂರ ಹೆಸರನ್ನು ಪ್ರಕಟಿಸಿದ್ದಾರೆ.
Related Articles
Advertisement
ಡಾ| ಸೋಮಶೇಖರ್ ಇಮ್ರಾಪುರ ಪರಿಚಯ:ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 1940 ರಲ್ಲಿ ಜನಿಸಿದ್ದಾರೆ. ಸ್ವರ್ಣ ಪದಕದೊಂದಿಗೆ ಎಂ.ಎ. ಕನ್ನಡ ಪದವಿ ಪಡೆದು, ಜಾನಪದ ಒಗಟುಗಳು ಕುರಿತ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿಯನ್ನು ಕವಿವಿಯಿಂದ ಪಡೆದಿದ್ದಾರೆ. ಪ್ರಾಧ್ಯಾಪಕರಾಗಿ, ವಿವಿಧ ಅಽಕಾರ ಸ್ಥಾನಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಕವಿವಿ ಜಾನಪದ ಅಧ್ಯಯನ ವಿಭಾಗದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಸ್ತುವಿನ್ಯಾಸ, ಭಾಷಾ ಪ್ರಯೋಗ, ಶೈಲಿ, ತಂತ್ರ, ಅಚ್ಚಗನ್ನಡ, ಛಂದೋಲಯಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಗಂಡ-ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಎಂಬ ಕವನ ಸಂಕಲನ ಮೂಲಕ ಅಪಾರ ಕೀರ್ತಿ ಗಳಿಸಿದ್ದಾರೆ. ಜನಪದ ಆಲೋಕನ ಗ್ರಂಥ ವಿದ್ವತ್ ವಲಯದಲ್ಲಿ ಮನ್ನಣೆ ಪಡೆದಿದೆ. ಬಿಸಿಲು ಹೂ, ಬೆಳದಿಂಗಳು, ಬೆಳಕಿನ ಬೀಜ, ಭೂತನಿ, ಬಿರುಗಾಳಿ, ಬೆಂಕಿ ಸೇರಿದಂತೆ ಹಲವಾರು ಕವನ ಸಂಕಲನಗಳು, ಸಂಪಾದನೆ, ವಿಮರ್ಶೆ ಕೃತಿಗಳನ್ನು ಪ್ರಕಟಿಸಿದ್ದಾರೆ.