Advertisement

ವಿಜಯಪುರ ಮೂಲದ ಡಾ.ಎಸ್.ಕೆ.ಕುಲಕರ್ಣಿ ಅವರಿಗೆ ಜಗತ್ತಿನ ಶ್ರೇಷ್ಠ ವಿಜ್ಞಾನಿ ಗೌರವ

05:22 PM Nov 13, 2020 | sudhir |

ವಿಜಯಪುರ : ಔಷಧಿ ಶಾಸ್ತ್ರ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ವಿಜಯಪುರ ಮೂಲದ ಡಾ.ಶ್ರೀನಿವಾಸ ಕುಲಕರ್ಣಿಯವರಿಗೆ ಜಗತ್ತಿನ ಶ್ರೇಷ್ಠ ವಿಜ್ಞಾನಿ ಗೌರವ ದೊರೆತಿದೆ.

Advertisement

ಅಮೇರಿಕದ ಸ್ಟ್ಯಾನ್‍ಪೊರ್ಡ್ ವಿಶ್ವವಿದ್ಯಾಲಯವು ಪ್ರತಿ ವರ್ಷವೂ ಮಾದರಿ ಹಾಗೂ ಸೈಟೇಶನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ, ಗೌರವಿಸುತ್ತದೆ. ಡಾ.ಶ್ರೀನಿವಾಸ ಕುಲಕರ್ಣಿ ಅವರು ಔಷಧೀಯ ಶಾಸ್ತ್ರದ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಗಳನ್ನು ಮನ್ನಿಸಿ, ಈ ಗೌರವ ನೀಡಲಾಗಿದೆ.

ಡಾ. ಕುಲಕರ್ಣಿ ಅವರು : 505 ಸಂಶೋಧನಾ ಪ್ರಕಟಣೆಗಳು, 13 ಸಾವಿರಕ್ಕೂ ಹೆಚ್ಚು ಉಲ್ಲೇಖಗಳು ಮತ್ತು 61ಕ್ಕೂ ಹೆಚ್ಚು ಫಾರ್ಮುಲಾಗಳನ್ನು ಔಷಧೀಯ ಶಾಸ್ತ್ರದಲ್ಲಿ ರಚಿಸಿದ್ದಾರೆ. ಜಗತ್ತಿನ ಶ್ರೇಷ್ಠ ಒಂದು ಲಕ್ಷ ವಿಜ್ಞಾನಿಗಳಲ್ಲಿ 132ನೇ ಕ್ರಮಾಂಕಗಳಿಸಿದ್ದು, ಹಾಗೂ ಭಾರತದ ಪ್ರಥಮರಾಗಿದ್ದಾರೆ.

ಇದನ್ನೂ ಓದಿ:ಜಾತಿ ಓಲೈಕೆಯ ಪಕ್ಷಗಳಿಗೆ ಫಲಿತಾಂಶದಿಂದ ತಕ್ಕ ಉತ್ತರ ಸಿಕ್ಕಿದೆ : ಬಿ.ವೈ ವಿಜಯೇಂದ್ರ

ಫಾರ್ಮಕಾಲಜಿ ಸಂಶೋಧನೆಯಲ್ಲಿ ಇವರು ಜಾಗತಿಕ ಮಾನ್ಯತೆಯುಳ್ಳ ವಿಜ್ಞಾನಿಗಳಾಗಿದ್ದು, ಇವರ ಮಾರ್ಗದರ್ಶನದಲ್ಲಿ 30 ಹೆಚ್ಚು ಸಂಶೋಧಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಐದು ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲಾಗಿದೆ.

Advertisement

ಈ ಹಿಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ. ಡಾ.ಕುಲಕರ್ಣಿಯವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದವರು. ಸದ್ಯ ಬೆಳಗಾವಿಯಲ್ಲಿ ನೆಲೆಸಿರುವ ಇವರು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಹಾಗೂ ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ.

ಡಾ.ಶ್ರೀನಿವಾಸ ಕುಲಕರ್ಣಿ ಅವರಿಗೆ ಮಾಜಿ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next