Advertisement
ಆರೋಗ್ಯ ತಪಾಸಣೆ ನಡೆಸಿರುವ ವೈದ್ಯರ ತಂಡ ಭಾನುವಾರವೂ ಕೆಲವು ತಪಾಸಣೆ ನಡೆಸಿ ವರದಿ ಪಡೆದ ನಂತರ ಸೂಕ್ತ ಚಿಕಿತ್ಸೆ ಮುಂದುವರಿಸಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲೇ ಪೂಜಾ ಕೈಂಕರ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 7.30ಕ್ಕೆ ಸ್ವಾಮೀಜಿ ಪೂಜೆ ನೆರವೇರಿಸಿದರು.
Related Articles
Advertisement
ಅಲ್ಟ್ರಾ ಸೌಂಡ್, ಸಿ.ಟಿ. ಸ್ಕ್ಯಾನ್ ನಡೆಸಲಾಗಿದೆ. ಅವರ ರಕ್ತ ಪರೀಕ್ಷೆ ನಡೆಸಿದಾಗ ರಕ್ತದಲ್ಲಿ ಸೋಂಕಿನ ಅಂಶ ಕಾಣಿಸಿಕೊಂಡಿದ್ದು, ಆ್ಯಂಟಿ ಬಯೋಟಿಕ್ಸ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಿ.ಟಿ. ಸ್ಕ್ಯಾನ್ ಕೂಡ ನಡೆಸಲಾಗಿದ್ದು, ವರದಿ ಪಡೆದ ಬಳಿಕ ಮುಂದಿನ ಚಿಕಿತ್ಸೆ ನೀಡಲಾಗುವುದು. ಪಿತ್ತನಾಳಕ್ಕೆ ಅಳವಡಿಸಿರುವ ಸ್ಟಂಟ್‌ಗಳು ಆರು ತಿಂಗಳಷ್ಟೇ ಕಾರ್ಯ ನಿರ್ವಹಿಸಲಿವೆ.
ಈವರೆಗೆ ಐದು ಬಾರಿ ಎಂಡೋಸ್ಕೋಪಿ ಮೂಲಕ 9 ಸ್ಟಂಟ್ ಅಳವಡಿಸಲಾಗಿದ್ದು, ಏಳು ಕಾರ್ಯ ನಿರ್ವಹಿಸುತ್ತಿವೆ. ಸ್ವಾಮೀಜಿಯವರಿಗೆ ಜಾಂಡೀಸ್ ಕಾಣಿಸಿಕೊಂಡಿಲ್ಲ. ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಗೆ ಬಂದ ಸ್ವಾಮೀಜಿ ನಡೆದುಕೊಂಡೇ ಕೊಠಡಿಗೆ ತೆರಳಿದರು. ಆದರೂ ವಯೋಸಹಜ ಸಮಸ್ಯೆಯಿರುವುದರಿಂದ ಜ್ವರವನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿರುವುದರಿಂದ ಆಸ್ಪತ್ರೆಯಲ್ಲೇ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಶ್ರೀಗಳ ಆರೋಗ್ಯ ತಪಾಸಣೆ ನಡೆಸಿರುವ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಆಸ್ಪತ್ರೆಯಲ್ಲೇ ಸ್ವಾಮೀಜಿಗಳಿಗೆ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ವಿ.ಸೋಮಣ್ಣ, ನಿವೃತ್ತ ಐಪಿಎಸ್ ಅಧಿಕಾರಿ ಎಲ್.ರೇವಣ ಸಿದ್ದಯ್ಯ ಉಪಸ್ಥಿತರಿದ್ದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಪಿತ್ತನಾಳಕ್ಕೂ ಸೋಂಕು: ಸಿದ್ದಗಂಗಾ ಶ್ರೀಗಳಿಗೆ ಸಿ.ಟಿ.ಸ್ಕ್ಯಾನಿಂಗ್ ಇತರೆ ಪರೀಕ್ಷೆ ನಡೆಸಲಾಗಿದ್ದು, ಪಿತ್ತನಾಳಕ್ಕೂ ಸೋಂಕು ತಗುಲಿರುವ ಲಕ್ಷಣ ಕಂಡುಬಂದಿದೆ. ಈಗಾಗಲೇ ಪಿತ್ತನಾಳಕ್ಕೆ ಒಂಬತ್ತು ಸ್ಟಂಟ್ ಅಳವಡಿಸಿರುವುದರಿಂದ ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹಾಗಾಗಿ ಆ್ಯಂಟಿ ಬಯೋಟಿಕ್ಸ್ ನೀಡಲಾಗುತ್ತಿದೆ.
ಸ್ವಾಮೀಜಿಯವರಿಗೆ ಕೊಠಡಿಯಲ್ಲೇ ಪೂಜೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 45 ನಿಮಿಷ ಪೂಜೆ ನೆರವೇರಿಸಿದ್ದಾರೆ. ಬಳಿಕ ಎಳನೀರು, ಗಂಜಿ, ಸ್ವಲ್ಪ ಹಣ್ಣು ಸೇವಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ದೂರವಾಣಿ ಮೂಲಕ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಡಾ.ಬಿ.ಎಸ್.ರವೀಂದ್ರ ತಿಳಿಸಿದ್ದಾರೆ.