Advertisement

ಡಾ. ರಾಜ್‌ ಸಿನಿ ಸಂಭ್ರಮ

10:35 AM Apr 07, 2020 | Suhan S |

ಡಾ.ರಾಜ್‌ ಕುಮಾರ್‌ ಅವರ ಸಿನಿಮಾಗಳು ಎವರ್‌ ಗ್ರೀನ್‌. ಎಲ್ಲಾ ಜನರೇಶನ್‌ ಮಂದಿ ಕೂಡಾ ಇಷ್ಟಪಡುತ್ತಾರೆ. ಆ ತರಹದ ಮೌಲ್ಯಯುತ ಸಿನಿಮಾಗಳನ್ನು ಅಣ್ಣಾವ್ರು ಮಾಡಿದ್ದಾರೆ. ಈಗ ಯಾಕೆ ಈ ವಿಚಾರೆ ಎಂದರೆ ರಾಜ್‌ ಅಭಿಮಾನಿಗಳು, ಅಪ್ಪಟ ಸಿನಿಮಾ ಪ್ರೇಮಿಗಳು ಈ ಲಾಕ್‌ಡೌನ್‌ ಸಮಯದಲ್ಲಿ ರಾಜ್‌ ಅವರ ಸಿನಿಮಾಗಳನ್ನು ನೋಡಿ ಎಂಜಾಂಯ್‌ ಮಾಡುತ್ತಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾದಲ್ಲಿ ಸಮಾನ ಮನಸ್ಕರ ಗ್ರೂಪ್‌ ಮಾಡಿಕೊಂಡು ತಾವು ನೋಡಿದ, ಮುಂದೆ ನೋಡಲಿರುವ ಡಾ.ರಾಜ್‌ ಅವರ ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಈ ಮೂಲಕ ಡಾ. ರಾಜ್‌ ಸಿನಿಮಾಗಳ ಮೇಲಿನ ಅಭಿಮಾನ ಮೆರೆಯುತ್ತಿದ್ದಾರೆ. ಹುಲಿಯ ಹಾಲಿನ ಮೇವು, ಭಲೇ ಜೋಡಿ, ಕಾಸಿದ್ರೆ ಕೈಲಾಸ, ಬಂಗಾರದ ಪಂಜರ, ಭಕ್ತ ಕುಂಬಾರ, ತ್ರಿಮೂರ್ತಿ, ಶಂಕರ್‌ ಗುರು, ತಾಯಿಗೆ ತಕ್ಕ ಮಗ, ಹಾಲು ಜೇನು, ಶ್ರೀಕೃಷ್ಣದೇವರಾಯ, ಮಯೂರ, ಸಮಯದ ಗೊಂಬೆ, ಕೆರಳಿದ ಸಿಂಹ, ಭಕ್ತ ಅಂಬರೀಶ, ಪ್ರೇಮದ ಕಾಣಿಕೆ, ಹಾಲು ಜೇನು, ಸಂಪತ್ತಿಗೆ ಸವಾಲ್‌, ಜೀವನ ಚೈತ್ರ… ಹೀಗೆ ಡಾ. ರಾಜ್‌ ಅವರ ಸಿನಿಮಾಗಳ ಬಗ್ಗೆ ಸಿನಿಪ್ರೇಮಿಗಳು ಚರ್ಚೆ ಮಾಡುತ್ತಿದ್ದಾರೆ.

ಇನ್ನು ಹೇಳಿಕೇಳಿ ಏಪ್ರಿಲ್‌ ತಿಂಗಳೆಂದರೆ ಅದು ಡಾ.ರಾಜ್‌ ತಿಂಗಳು. ಏಪ್ರಿಲ್‌ 24 ಅವರ ಹುಟ್ಟುಹಬ್ಬವಾದರೆ, ಏಪ್ರಿಲ್‌ 12 ಅವರು ಇಹಲೋಕ ತ್ಯಜಿಸಿದ ದಿನ. ಹೀಗಾಗಿ ಏಪ್ರಿಲ್‌ ತಿಂಗಳೆಂದರೆ ಡಾ.ರಾಜ್‌ ಅಭಿಮಾನಿಗಳಿಗೆ ಅದು ಕೇವಲ ತಿಂಗಳಷ್ಟೇ ಅಲ್ಲ, ಅದೊಂದು ಎಮೋಶನ್‌. ಈಗ ಲಾಕ್‌ ಡೌನ್‌ ಸಮಯ. ಈ ಸಮಯವನ್ನು ಸಾಕಷ್ಟು ಮಂದಿ ಸಿನಿಪ್ರೇಮಿಗಳು ರಾಜ್‌ ಕುಮಾರ್‌ ಸಿನಿಮಾ ನೋಡಿಕೊಂಡು ಕಳೆಯುತ್ತಿರೋದು ಖುಷಿಯ ವಿಚಾರವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next