Advertisement

ಕರ್ನಾಟಕ ಸೇನಾ ಪಡೆಯಿಂದ ರಾಜ್‌ ಕನ್ನಡ ಪ್ರಶಸ್ತಿ ಪ್ರದಾನ

02:43 PM Apr 25, 2021 | Team Udayavani |

ಮೈಸೂರು: ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸೇನಾಪಡೆಯಿಂದ ಡಾ.ರಾಜ್‌ಕುಮಾರ್‌ ಜನ್ಮದಿನಾಚರಣೆ ಅಂಗವಾಗಿ “ಡಾ. ರಾಜ್‌ ಕನ್ನಡ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು.

Advertisement

ವಕೀಲ ಭರತ್‌ ಎಂ.ಗೌಡ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಸಹಕಾರ ಕ್ಷೇತ್ರದ ಬಿ.ಎಚ್‌.ಸತೀಶ್‌ಕುಮಾರ್‌ ಗೌಡ, ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್‌, ಉದ್ಯಮ ಕ್ಷೇತ್ರದಡಾ.ಎಸ್‌.ಎ.ನರಸಿಂಹೇಗೌಡ ಅವರಿಗೆ “ಡಾ.ರಾಜ್‌ ಕನ್ನಡ ಪ್ರಶಸ್ತಿ’ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷಆರ್‌.ರಘು ಕೌಟಿಲ್ಯ, ಕುವೆಂಪುಕಲ್ಪನೆಯ ವಿಶ್ವಮಾನವನಂತೆ ಬದುಕಿತೋರಿಸಿದವರು ಡಾ.ರಾಜಕುಮಾರ್‌.ಎಲ್ಲರನ್ನೂ ಕುಲ, ಜಾತಿಯ ಚೌಕಟ್ಟಿನಲ್ಲಿಗುರುತಿಸಿಕೊಳ್ಳುವವರ ಮಧ್ಯೆಡಾ.ರಾಜ್‌ ಕನ್ನಡದ ನೆಲೆಯಲ್ಲಿಗುರುತಿಸಿಕೊಳ್ಳುತ್ತಾರೆ. ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ರಾಜ್‌ಕುಮಾರ್‌ನಿಜವಾಗಿಯೂ ವಿಶ್ವಮಾನವರು.ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಬೇಕು ಎಂದರು.

ಬಸವಣ್ಣನವರ “ಕಾಯಕವೇಕೈಲಾಸ’ ಎಂಬ ತತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ 21ನೇಶತಮಾನದ ಜನರಿಗೆ ಚಲನಚಿತ್ರಗಳಮೂಲಕ ತಿಳಿಸಿದ ಕೀರ್ತಿ ಅವರದ್ದು.ನಮ್ಮ ರಾಜ್ಯದ ಮುಂದೆ ಈಗ ಸಾಕಷ್ಟುಸವಾಲುಗಳಿವೆ. ಕರ್ನಾಟಕಪುನರುತ್ಥಾನವಾಗಬೇಕಿದೆ. ಗೋಕಾಕ್‌ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರಾಜ್‌ಕುಮಾರ್‌ ಅವರ ಬದುಕಿನ ರೀತಿಈಗ ಕನ್ನಡಿಗರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರಾಜ್‌ ಕುಮಾರ್‌ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ, ಡಾ.ಬಿ.ಆರ್‌.ನಟರಾಜ ಜೋಯಿಸ್‌, ರವಿ ರಾಜಕೀಯ, ಚಾ.ರಂ.ಶ್ರೀನಿವಾಸಗೌಡ, ತೇಜೇಶ್‌ ಲೋಕೇಶ್‌ ಗೌಡ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next