Advertisement

ಡಾ|ಆರ್‌.ಎನ್‌. ಶೆಟ್ಟಿಯವರಿಗೆ ನುಡಿನಮನ

03:38 PM Dec 31, 2020 | Team Udayavani |

ಭಟ್ಕಳ: ಡಾ| ಆರ್‌.ಎನ್‌. ಶೆಟ್ಟಿಯವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಮುರ್ಡೇಶ್ವರ ಆರ್‌.ಎನ್‌. ಶೆಟ್ಟಿ ರೂರಲ್‌ ಪಾಲಿಟೆಕ್ನಿಕ್‌ ಆವರಣದಲ್ಲಿ ಅವರ ಮಕ್ಕಳು, ಆಳಿಯಂದಿರು, ಮೊಮ್ಮಕ್ಕಳು ಚಾಲನೆ ನೀಡಿದರು.

Advertisement

ರಾಜ್ಯದ ವಿವಿಧ ಭಾಗಗಳಿಂದ ಬಂದ ನೂರಾರು ಜನರು ಕಂಬನಿ ಮಿಡಿದಿದ್ದು ಸಾವಿರಾರು ಜನರು ಭಾಗವಹಿಸಿ ಗೌರವ ಸಲ್ಲಿಸಿದರು. ಮೂಡಬಿದಿರೆಯ ಆಳ್ವಾಸ್‌ ಎಜ್ಯುಕೇಶನ್‌ ಟ್ರಸ್ಟ್‌ ನ ಅಧ್ಯಕ್ಷ ಮೋಹನ ಆಳ್ವಾ ಮಾತನಾಡಿ ಉದ್ಯಮ ಮತ್ತು ವ್ಯವಹಾರಕ್ಕೆ ಎರಡಕ್ಕೂ ಪ್ರಾಮಾಣಿಕತೆಯಿಂದ ನ್ಯಾಯ ಕೊಡಿಸಿದ ಆರ್‌.ಎನ್‌. ಶೆಟ್ಟಿಯವರು ಸಮಾಜ ಸೇವೆಯಿಂದಲೇ ಎತ್ತರಕ್ಕೇರಿದವರು. ಪ್ರತಿಯೊಂದನ್ನು ಕೂಡಾ ಛಲದಿಂದ ಸಾಧಿಸಿದ ಅವರು ದಾನಧರ್ಮ ಮಾಡುವುದರಲ್ಲಿಯೂ ಯಾರೂ ಊಹಿಸದಷ್ಟು ಸಮಾಜಕ್ಕೆ ನೀಡಿದ್ದಾರೆ. ವಿವಿಧ ಕ್ಷೇತ್ರಗಳ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಕೂಡಾ ಅವರ ಕೊಡುಗೆ ಪರವಾದದ್ದು ಜೊತೆಗೆ ಬಂಟರ ಸಂಘಕ್ಕೆ ಅವರು ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದೂ ಹೇಳಿದರು.

ಶಿಕ್ಷಣ ಕ್ಷೇತ್ರದ ಪ್ರಮುಖ ಹುಬ್ಬಳ್ಳಿಯ ರಾಜಾ ದೇಸಾಯಿ ಮಾತನಾಡಿ, ಹಲವರ ಇತಿಹಾಸ ಬರೆಯುತ್ತಾರೆ. ಅದನ್ನು ಕೆಲವರು ಓದುತ್ತಾರೆ. ಆದರೆ ಆರ್‌.ಎನ್‌. ಶೆಟ್ಟಿಯವರು ಸ್ವಂತ ಪರಿಶ್ರಮದಿಂದ ತಮ್ಮದೇ ಇತಿಹಾಸ ಸೃಷ್ಟಿಸಿದ ಮಹಾನ್‌ ವ್ಯಕ್ತಿಯಾಗಿದ್ದಾರೆ. ಕೋಟಿ ಕೋಟಿ ಗಳಿಸಿದ ಮಹಾನ್‌ ವ್ಯಕ್ತಿಗಳಿದ್ದರು ಕೂಡಾ ತಾವು ಗಳಿಸಿದ್ದನ್ನು ಸಮಾಜಕ್ಕೆ ಕೊಡುವ ಗುಣವುಳ್ಳವರು ವಿರಳಾತಿ ವಿರಳ. ಅಂತವರ ಸಾಲಿನಲ್ಲಿ ನಿಲ್ಲುವ ಶೆಟ್ಟರು ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ವರ್ಷದ ಸಾಧನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಎಂದರು.

ಮಾಜಿ ಶಾಸಕ ಹಾಗೂ ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ಆರ್‌.ಎನ್‌. ಶೆಟ್ಟಿಯವರು ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿದ್ದರು. ವಾರಾಹಿ ಜಲವಿದ್ಯುತ್‌ ಯೋಜನೆ ಕಾಮಗಾರಿಯ ಕುರಿತು ವಿವರಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಾಗಮಂಡಳವನ್ನು ಮಾಡಿ ತಮ್ಮ ಧಾರ್ಮಿಕ ಭಕ್ತಿ-ಶ್ರದ್ಧೆಯನ್ನು ನಾಡಿಗೆ ತೋರಿಸಿದ ಅವರ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ:ಅನಿಷ್ಟ ಪದ್ಧತಿ ಬಿಟ್ಟು ಮಕ್ಕಳಿಗೆ ಶಿಕ್ಷಣ ನೀಡಿ: ನ್ಯಾ| ಹೊನ್ನುಸ್ವಾಮಿ

Advertisement

ಮಾಜಿ ಸಚಿವ ಹಾಗೂ ಹಿಂದುಳಿದ ನಿಗಮದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ, ಆರ್‌. ಎನ್‌. ಶೆಟ್ಟಿಯವರ ಜೀವನದ ಯಶೋಗಾಥೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಮುಡೇìಶ್ವರದ ಡಾ|

ಅಮೀನುದ್ದೀನ್‌ ಗೌಡ ಮಾತನಾಡಿ ಇಂದು ಡಾ| ಆರ್‌. ಎನ್‌. ಶೆಟ್ಟಿಯವರ ನಿಧನಕ್ಕೆ ಕೇವಲ ಅವರ ಕುಟುಂಬ, ಒಡನಾಡಿಗಳು ಮಾತ್ರವಲ್ಲ ಇಡೀ ಮನುಕುಲವೇ ದುಃ ಖೀಸುವಂತಾಗಿದೆ. ಇಡೀ ಜಗತ್ತಿಗೇ ತಮ್ಮ ಉತ್ತಮ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next