Advertisement
ಇದು ಅನಿವಾಸಿ ಭಾರತೀಯ ಉದ್ಯಮಿ ಡಾ|ಬಿ.ಆರ್.ಶೆಟ್ಟಿಯವರ ವಿಶ್ವಾಸದ ನುಡಿ. ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ 10,000ನೇ ಮಗುವಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
Related Articles
Advertisement
ಇದೊಂದು ನನಗೆ ಗ್ರಹಚಾರ ಬಂದಿದೆ ಏನು ಮಾಡಲು ಸಾಧ್ಯ ? :
ಬಿಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ ಆರ್ ಶೆಟ್ಟಿ ಆರ್ಥಿಕವಾಗಿ ಸಕ್ಷಮವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ ಭಾರತದ ಆಸ್ತಿ ಸುರಕ್ಷಿತವಾಗಿದೆ.ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಡುವ ಜನರು ಇರುವುದು ಸಹಜ ಎಂದರು.
ಪ್ರಶ್ನೆಯೊಂದಕ್ಕೆ ಕಂಟ್ರಿ ಹೆಡ್ ಕುಶಲ ಶೆಟ್ಟಿಯವರು ಆರು ಖಂಡಗಳಲ್ಲಿ 247 ಆಸ್ಪತ್ರೆಗಳಿವೆ ಎಂದಾಗ ಡಾ|ಶೆಟ್ಟಿಯವರು ಈಗ ಇದು ಇಲ್ಲ. ಭಾರತದಲ್ಲಿ ನಾಲ್ಕು ಆಸ್ಪತ್ರೆಗಳಿವೆ ಎಂದರು.
2018ರಲ್ಲಿ 12.8 ಬಿ. ಡಾಲರ್ ಸಂಪತ್ತು ಇತ್ತು. ಲಕ್ಷ್ಮೀ ಚಂಚಲೆ ಆಗ್ತಾಳೆ. 2017ರಲ್ಲಿಯೇ ನ್ಯೂ ಮೆಡಿಕಲ್ ಸೆಂಟರ್‌ನಿಂದ ನಾನು ಹೊರಬಂದಿದ್ದೆ ಎಂದು ಹೇಳಿದ ಡಾ|ಶೆಟ್ಟಿ, ಹಿಂದೆ ಸಾಲ ಕೊಡಲು ಬ್ಯಾಂಕ್‌ನವರು ಕ್ಯೂ ನಿಲ್ಲುತ್ತಿದ್ದರು. ಈಗ ಆ ಕಾಲ ಹೋಯಿತು ಎಂದರು.
ಜೋಗ ಫಾಲ್ಸ್ ಯೋಜನೆ ಏನಾಯಿತು ಎಂದಾಗ, ಜೋಗ ಫಾಲ್ಸ್ ಯೋಜನೆಗೆ ಟೆಂಡರ್ ಹಾಕುವ ದಿನಾಂಕವನ್ನು ಮುಂದೂಡುವಂತೆ ಒಬ್ಬರು ಡಾ|ಶೆಟ್ಟಿಯವರಲ್ಲಿ ತಿಳಿಸಿದರು. ಆಗ ಡಾ|ಶೆಟ್ಟಿಯವರು ನಾವೇ ಹಾಕೋಣ ಎಂದರು. ಈ ಯೋಜನೆ ಬದಲು ವಿಮಾನ ನಿಲ್ದಾಣವೂ ಸೇರಿದಂತೆ ವಿಸ್ತೃತ ಯೋಜನೆಯೊಂದನ್ನು ಪ್ರಸ್ತಾವಿಸಿದೆವು. ಇದು ಆದರೆ ಐದು ವರ್ಷಗಳಲ್ಲಿ ಜಗತ್ತಿನ 10 ಮಹತ್ವದ ಪ್ರವಾಸಿ ತಾಣಗಳಲ್ಲಿ ಇದು ಒಂದಾಗುತ್ತಿತ್ತು. ಸರಕಾರದಿಂದ ಮತ್ತೆ ಪ್ರತಿಕ್ರಿಯೆ ಬರಲಿಲ್ಲ ಎಂದು ಕಂಟ್ರಿ ಹೆಡ್ ಕುಶಲ ಶೆಟ್ಟಿ ಉತ್ತರಿಸಿದರು.
ಇದನ್ನೂ ಓದಿ : ತಾಯಿಯ ಮೇಲೆ ಟಿ ಎಮ್ ಸಿ ಗೂಂಡಾಗಳಿಂದ ಹಲ್ಲೆ : ಬಿಜೆಪಿ ಕಾರ್ಯಕರ್ತನಿಂದ ಆರೋಪ
ಉಡುಪಿಯ ಆಸ್ಪತ್ರೆಯ ಸೇವೆಯನ್ನು ನೋಡಿ ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಒಡಿಶಾದ ಮುಖ್ಯಮಂತ್ರಿಯವರು ತಮ್ಮಲ್ಲಿಯೂ ಇಂತಹುದೇ ಆಸ್ಪತ್ರೆ ನಿರ್ಮಿಸುವಂತೆ ಕೋರಿಕೆ ಸಲ್ಲಿಸಿದ್ದಾರೆಂದು ಕುಶಲ ಶೆಟ್ಟಿ ತಿಳಿಸಿದರು.
ನೀರಾ ಮೋದಿ, ಮಲ್ಯನಂತೆ ನಾನೂ ಆಗಬೇಕೆ? :
ಪ್ರಧಾನಿ ನರೇಂದ್ರ ಮೋದಿಯವರ ಸಂಪರ್ಕ ನಿಮಗೆ ಚೆನ್ನಾಗಿ ಇದೆ. ಅವರನ್ನು ಭೇಟಿ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ “ಇಲ್ಲ. ನಾನು ನರೇಂದ್ರ ಮೋದಿಯವರನ್ನು ಸಂಪರ್ಕಿಸಿಲ್ಲ. ನೀರಾ ಮೋದಿ, ವಿಜಯ ಮಲ್ಯರಂತೆ ನನ್ನ ಹೆಸರೂ ಬರಬೇಕೆಂದಿದ್ದೀರಾ?’ ಎಂದರು.