Advertisement

ಡಾ.ಪಾಪುಗೆ ಅನಾರೋಗ್ಯ: ಕಿಮ್ಸ್‌ಗೆ ದಾಖಲು

11:34 PM Feb 14, 2020 | Lakshmi GovindaRaj |

ಹುಬ್ಬಳ್ಳಿ: ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಕಫ‌, ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಕಿಮ್ಸ್‌ ಆಸ್ಪತ್ರೆ ಕಾರ್ಡಿಯಾಲಜಿ ಕ್ಯಾಥ್‌ಲ್ಯಾಬ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಶ್ವಾಸಕೋಶ, ಮೂತ್ರ ಕೋಶ, ರಕ್ತದೊತ್ತಡ ಸಮಸ್ಯೆಯಿಂದ ಬಳಲು ತ್ತಿರುವ ಡಾ.ಪಾಟೀಲ ಪುಟ್ಟಪ್ಪ ಅವರು ಭಾನು ವಾರ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಕಿಮ್ಸ್‌ ನಿರ್ದೇ ಶಕ ಡಾ.ರಾಮಲಿಂಗಪ್ಪ ಅಂಟರತಾನಿ ನೇತೃತ್ವದಲ್ಲಿ ಆಸ್ಪತ್ರೆ ಹಿರಿಯ ವೈದ್ಯರಾದ ಡಾ.ಈಶ್ವರ ಹಸಬಿ, ಡಾ. ದುರ್ಗಾದಾಸ ಕಬಾಡೆ, ಡಾ.ವಿಶ್ವನಾಥ, ಡಾ.ಗುರುಪಾದಪ್ಪ, ಡಾ. ಹಿರೇ ಗೌಡರ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.

ಪಾಟೀಲ ಪುಟ್ಟಪ್ಪ ಅವರ ಶ್ವಾಸಕೋಶದಲ್ಲಿ ಸೋಂಕು ಆಗಿ ಕಫ ಕಟ್ಟಿದೆ. ಮೂತ್ರಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೆದುಳಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಹೆಪ್ಪುಗಟ್ಟಿದೆ. ರಕ್ತದೊತ್ತಡ ಮತ್ತು ಹಿಮೋಗ್ಲೋಬಿನ್‌ ಕಡಿಮೆ ಯಾಗಿ ಆರೋಗ್ಯ ಸ್ಥಿತಿ ಗಂಭೀರ ವಾಗಿತ್ತು. ಸದ್ಯ ಇವೆಲ್ಲವೂ ನಿಯಂ ತ್ರಣಕ್ಕೆ ಬಂದಿದ್ದು, ಆರೋಗ್ಯಸ್ಥಿರ ವಾಗಿದೆ.

ಡಾ.ಪಾಪು ಆರೋಗ್ಯ ಸುಧಾರಣೆ ನೋಡಿಕೊಂಡು ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಬರ್ಲ್ ಹೋಲ್‌ ಮೂಲಕ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗುವುದು ಎಂದು ರಾಮ ಲಿಂಗಪ್ಪ ಅಂಟರತಾನಿ “ಉದಯವಾಣಿ’ಗೆ ತಿಳಿಸಿದರು. ಡಾ.ಪಾಪು ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶನಿವಾರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿನ ಶೀತ ವಾತಾವರಣದಿಂದಾಗಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ರವಿವಾರ ಮಧ್ಯಾಹ್ನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪುತ್ರ ಅಶೋಕ ಪಾಟೀಲ ಮತ್ತು ಕಾರು ಚಾಲಕ ಸಯ್ಯದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next