Advertisement

ಡಾ|ನಾಗೇಂದ್ರ ಮಸೂತಿ ಸಾಹಿತ್ಯ ಸುಗ್ಗಿ ಸಮಿತಿ ಅಧ್ಯಕ್ಷ

02:57 PM Feb 13, 2017 | |

ಕಲಬುರಗಿ: ನಗರದಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನ ಮಾ.4 ಹಾಗೂ 5 ರಂದು ನಗರದ ಶೇಠ ಶಂಕರಲಾಲ ಲಾಹೋಟಿ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಿರುವ ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಭ್ರಮದ ಅಂಗವಾಗಿ ರವಿವಾರ ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ನಡೆದ ಸಾಹಿತಿಗಳ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ| ನಾಗೇಂದ್ರ ಮಸೂತಿ ಅವರನ್ನು ಆಯ್ಕೆ ಮಾಡಿ, ಸನ್ಮಾನಿಸಲಾಯಿತು. 

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಮಸೂತಿ, ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವಿರುವುದರಿಂದಯುವಕರು ಓದಿನಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಅನುಭವವನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಸಮಾಜದಲ್ಲಿ ಮಾನವೀಯತೆ, ಅಂತಃಕರಣ ಮೂಡಿಸುವ ಮಹತ್ತರ ಜವಾಬ್ದಾರಿ ಲೇಖಕನಿಗಿದೆ ಎಂದರು. 

ಈ ನಿಟ್ಟಿನಲ್ಲಿ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ. ಎರಡು ದಿನ ಕಾಲ ನಡೆಯುವ ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಭ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಸಹಕರಿಸುತ್ತೇನೆ ಎಂದು ತಿಳಿಸಿದರು. ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಕಲ್ಯಾಣರಾವ ಭಕ್ಷಿ, ರವಿಂದ್ರಕುಮಾರ ಭಂಟನಳ್ಳಿ,

ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಹಿರಿಯ ನಾಟಕಕಾರ ರಮಾನಂದ ಹಿರೇಜೇವರ್ಗಿ, ಶರಣಪ್ಪ ದೇಸಾಯಿ, ಬಸವರಾಜ ಮೊರಬದ, ಡಾ| ಬಾಬುರಾವ್‌ ಶೇರಿಕಾರ, ಪರಮೇಶ್ವರ ಶಟಕಾರ, ನಾಗೇಂದ್ರಪ್ಪ ಮಾಡ್ಯಾಳೆ, ಲಗುಮಣ್ಣಾ ಕರಗುಪ್ಪಿ, ನೀಲಾಂಬಿಕಾ ಚೌಕಿಮಠ, ಸಂಗಣ್ಣ ಹೊಸ್ಮನಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next