Advertisement

ಸಾಧಕರ ಪುಸ್ತಕ ಯುವ ಪೀಳಿಗೆಗೆ ಪ್ರೇರಣೆ : ಡಾ|ಮಹೇಶ ಜೋಶಿ ಹೇಳಿಕೆ

05:38 PM Feb 21, 2022 | Team Udayavani |

ಬೀದರ್ : ಸಾಧಕರ ಮತ್ತು ಚಿಂತಕರ ವ್ಯಕ್ತಿತ್ವದ ಕುರಿತು ಪುಸ್ತಕಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ರವಿವಾರ ಸಾಹಿತಿ ವಿದ್ಯಾವತಿ ಬಲ್ಲೂರ ಅವರು ರಚಿತ “ಶಿಕ್ಷಣ ಚಿಂತಕ ಡಾ| ಬಸವರಾಜ ಪಾಟೀಲ ಅಷ್ಟೂರ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ
ವಹಿಸಿ ಮಾತನಾಡಿದ ಅವರು, ಸಮಾಜದ ಹಿತಕ್ಕಾಗಿ ಕಸಾಪ ಇಂಥ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ವಿನಃ ಪ್ರಚಾರಕ್ಕಾಗಿ ಅಲ್ಲ ತಿಳಿಸಿದರು. ಡಾ| ಅಷ್ಟೂರ ಅವರು ಸಾಮಾನ್ಯರಲ್ಲಿ ಸೇರಿಕೊಂಡು ಅಸಾಮಾನ್ಯ ವ್ಯಕ್ತಿಯಾಗಿದ್ದಾರೆ. ಇವರು ಆಯ್ಕೆ ಮಾಡಿಕೊಂಡ ಶಿಕ್ಷಣ ಕ್ಷೇತ್ರ ಪುಣ್ಯದ್ದಾಗಿದೆ. ದೇವಸ್ಥಾನ ಕಟ್ಟುವುದಕ್ಕಿಂತ ಶಾಲೆ ತೆರೆಯುವುದು ಹಾಗೂ ಶಿಕ್ಷಣ ಕ್ಷೇತ್ರ ಆಯ್ಕೆ ಮಾಡಿರುವುದು ಶ್ರೇಷ್ಠದ ಕೆಲಸವಾಗಿದೆ. ಕಳೆದ 40 ವರ್ಷಗಳಿಂದ ಕಾಯಕ ನಿಷ್ಠೆ, ದಾಸೋಹದ ಭಾವನೆ, ಶರಣರ ತತ್ವಗಳನ್ನು ಅಳವಡಿಸಿಕೊಂಡಿರುವ ಅಷ್ಟೂರ್‌, ವ್ಯಕ್ತಿ ಅಲ್ಲ ಒಂದು
ಶಕ್ತಿಯಾಗಿದ್ದಾರೆ. ಇಂದು ಪ್ರಚಾರಕ್ಕಾಗಿ ಹಾತೊರೆಯುವವರೇ ಹೆಚ್ಚು ಜನ. ಆದರೆ ಡಾ| ಅಷ್ಟೂರ ಅವರು ಯಾವುದೇ ಪ್ರಚಾರ ಇಲ್ಲದೆ ಶಿಕ್ಷಣ ಕ್ಷೇತ್ರ ಆರಿಸಿಕೊಂಡು ಬೀದರ ಜಿಲ್ಲೆಯ ಹೆಸರು
ಉತ್ತಂಗಕ್ಕೆ ಒಯ್ದಿದ್ದಾರೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ್‌ ಅವರು ಪುಸ್ತಕ ಬಿಡುಗಡೆ ಮಾಡಿ, ಮಹಾನ್‌ ವ್ಯಕ್ತಿತ್ವ ಹೊಂದಿದ್ದರಿಂದಲೆ ಡಾ| ಅಷ್ಟೂರ ಅವರಿಗೆ ಶಿಕ್ಷಣ ಚಿಂತಕ ಎಂದೆನಿಸಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಿ ಶಿಕ್ಷಣ ಕ್ಷೇತ್ರ ಆರಿಸಿಕೊಂಡು ವಿಶ್ವವಿದ್ಯಾಲಯ ವ್ಯಾಪ್ತಿಯ ಇಲ್ಲಿನ ಕರಾಶಿ ಸಂಸ್ಥೆಗೆ ನ್ಯಾಕ್‌ ಶ್ರೇಣಿ ಪಡೆದ ಏಕೈಕ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಗಳು ನ್ಯಾಕ್‌ ಶ್ರೇಣಿ ಪಡೆದರೆ ವಿಶ್ವವಿದ್ಯಾಲಯಕ್ಕೆ ಉತ್ತಮ ಗ್ರೇಡ್‌ ಸಿಗುತ್ತದೆ ಎಂದು ಹೇಳಿದರು. ಕಸಾಪ ನಿಕಟಪೂರ್ವ ಸಂಘ ಸಂಸ್ಥೆ ಪ್ರತಿನಿಧಿ  ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಅವರು ಪುಸ್ತಕ ಪರಿಚಯ ಮಾಡಿ, ಯಾವುದೇ ವೃತ್ತಿ ನೋಡಿ ಕೃತಿ ಬರುತ್ತದೆ ಎಂಬಂತೆ ಇವರ ವ್ಯಕ್ತಿತ್ವದ ಆಧಾರದ ಮೇಲೆ ಪುಸ್ತಕ ಹೊರಬಂದಿದೆ ಎಂದರು. ಶೀಲಾ ಖೂಬಾ ಕಾರ್ಯಕ್ರಮ ಉದ್ಘಾಟಿಸಿದರು. ಕರಾಶಿ ಸಂಸ್ಥೆ ಉಪಾಧ್ಯಕ್ಷ ಬಿ.ಜಿಶೆಟಕಾರ, ಕಲಬುರಗಿ ವಿವಿಯ ಸಿಂಡಿಕೆಟ್‌ ಸದಸ್ಯೆ ಪ್ರತಿಭಾ ಚಾಮಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶಟ್ಟಿ
ಮಾತನಾಡಿದರು.3

ಇದನ್ನೂ ಓದಿ : ಅಂತರರಾಷ್ಟ್ರೀಯ ಲಾಬಿಯಿಂದ ಹಿಂದೂ ಹರ್ಷಗೆ ಬೆಂಬಲವಿಲ್ಲ: ಬಿ.ಎಲ್.ಸಂತೋಷ್

ಹೈ-ಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ| ರಜನೀಶ ವಾಲಿ, ನಿವೃತ್ತ ಪ್ರಾಚಾರ್ಯ ಡಾ| ಎಸ್‌. ಕೆ. ಸಾತನೂರ, ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ
ಕನಕಟ್ಟೆ, ಲೇಖಕಿ ವಿದ್ಯಾವತಿ ಬಲ್ಲೂರ, ಉಮಾದೇವಿ ಅಷ್ಟೂರ, ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಶಿವಕುಮಾರ ಕಟ್ಟೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next