ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಸಾಹಿತ್ಯವನ್ನು ಜನರಿಗೆ ಮತ್ತಷ್ಟು ಪರಿಚಯಿಸಲು ಹಾಗೂ ಅವರ ಸಮಗ್ರ
ಸಾಹಿತ್ಯವನ್ನು ಸಂರಕ್ಷಿಸಿಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
Advertisement
ಅವರ ವೈಚಾರಿಕ ನಿಲುವುಗಳನ್ನು ಸಹಿಸದ ಮನಸ್ಥಿತಿಗಳು ಅಂತಃಕರಣ ಕಳೆದುಕೊಂಡು ಹತ್ಯೆ ಮಾಡಿದ ಕ್ರೂರ ಘಟನೆ ಜನರ ಮನಸಿನಿಂದ ಮಾಸುವ ಮುನ್ನವೇ ಕಲಬುರ್ಗಿ ಅವರು ವಚನ ಸಾಹಿತ್ಯ, ಸಂಶೋಧನೆ, ಅಧ್ಯಯನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಒಟ್ಟುಗೂಡಿಸಿ ಸಮಗ್ರ ಸಾಹಿತ್ಯ ರಚನೆ ಮಾಡಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, 1.50 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದೆ.
ನಿರ್ಧಾರ ಕೈಗೊಂಡಿದ್ದು, 35 ಸಂಪುಟಗಳನ್ನು ರಚಿಸಲು ತೀರ್ಮಾನಿಸಿದೆ. ಪ್ರಸ್ತುತ ಕಲಬುರ್ಗಿ ಅವರ 120 ಕೃತಿಗಳಿದ್ದು, ನಾನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳಿವೆ. ಅವೆಲ್ಲವನ್ನೂ ವಿಷಯನುಗುಣವಾಗಿ ವರ್ಗೀಕರಣ ಮಾಡಿ, ಶಾಸOಉ ಸಾಹಿತ್ಯ, ಸಂಶೋಧನಾ ಸಾಹಿತ್ಯ ಸೃಜನಶೀಲ ಸಾಹಿತ್ಯ, ಜನಪದ ಸಾಹಿತ್ಯ, ಪತ್ರಿಕಾ ವರದಿ ಸಂಪುಟ, ಚಿತ್ರ ಸಂಪುಟ, ಆಡಿಯೋ-ವಿಡಿಯೋದ ತಲಾ ಒಂದೊಂದು ಸಂಪುಟಗಳು, ಶಾಸನ ಸಾಹಿತ್ಯ(2 ಸಂಪುಟಗಳು), ಲೇಖನ ಸಾಹಿತ್ಯ (5 ಸಂಪುಟಗಳು), ಆಧುನಿಕ ಗ್ರಂಥ ಸಂಪಾದನ ಸಾಹಿತ್ಯ (8 ಸಂಪುಟಗಳು) ಹಾಗೂ ಪ್ರಾಚೀನ ಗ್ರಂಥ ಸಂಪಾದನಾ ಸಾಹಿತ್ಯ (13 ಸಂಪುಟಗಳು)ದ ಒಟ್ಟು 35 ಸಂಪುಟಗಳು ಪ್ರಕಟಗೊಳ್ಳಲಿವೆ.
Related Articles
Advertisement
ಈ 35 ಸಂಪುಟಗಳಿಗೆ ಡಾ.ವೀರಣ್ಣ ರಾಜೂರ್ ಅವರು ಪ್ರಧಾನ ಸಂಪಾದಕರಾಗಿದ್ದು, ಉಳಿದಂತೆ ತಲಾ 2 ಸಂಪುಟಗಳಿಗೆ ತಜ್ಞ ಸಂಪಾದಕರನ್ನು ನೇಮಕ ಮಾಡಿ ಅವರಿಗ ಇಷ್ಟವಾದ ವಿಷಯದ ಸಂಪುಟಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗುವುದು.
ಕಚೇರಿ ಸ್ಥಾಪನೆಬಿಎಲ್ಡಿಇ ಸಂಸ್ಥೆಗೆ ಸೇರಿದ ಡಾ.ಫಕೀರಪ್ಪ ಗುರುಸಿದ್ದಪ್ಪ ಹಳಕಟ್ಟಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಶೀಘ್ರವೇ
ಕಚೇರಿ ಪ್ರಾರಂಭಗೊಳ್ಳಲಿದ್ದು, ಸಂಪುಟಕ್ಕೆ ಸಂಬಂಧಿಸಿದ ಸಭೆಗಳು ಸೇರಿದಂತೆ ಇತ್ಯಾದಿ ಕಾರ್ಯಗಳು ಇಲ್ಲಿಯೇ ನಡೆಯಲಿವೆ. ಸಲಹಾ ಸಮಿತಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ (ಗೌರವ ಅಧ್ಯಕ್ಷ), ಕಲಬುರುಗಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ.ಜಿ.ಮೂಲಿಮನೆ(ಅಧ್ಯಕ್ಷ), ಡಾ.ಎಂ.ಎಸ್.ಮುದಬಾವಿ (ಕಾರ್ಯದರ್ಶಿ), ಡಾ.ವೀರಣ್ಣ ರಾಜೂರ್ (ಪ್ರಧಾನ ಸಂಪಾದಕ) ಸೇರಿದಂತೆ ಎಂಟು ಮಂದಿ ಸದಸ್ಯರಿದ್ದಾರೆ. ಕಲಬುರ್ಗಿಯವರು ಬೇರೆ ಯಾರಿಗಾದರೂ ತಮ್ಮ ಸಾಹಿತ್ಯ ಪ್ರಕಟಿಸುವ ಹಕ್ಕು ನೀಡಿದ್ದರೆ, ಅವರೊಂದಿಗೆ ಮಾತನಾಡಿ, ಪ್ರಕಟಣೆ ಹಕ್ಕು ಪಡೆಯಬೇಕು. ಪ್ರಸ್ತುತ ಸರ್ಕಾರ ನೀಡಿರುವ ಅನುದಾನದಲ್ಲಿ ಸಂಪುಟಗಳ ಪ್ರಕಟಣೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಲಿದೆ. ಎರಡು ವರ್ಷದೊಳಗೆ ಸಂಪುಟಗಳ ಪ್ರಕಟಣೆಗೆ ಪ್ರಯತ್ನಿಸುತ್ತೇವೆ.
– ಡಾ.ವೀರಣ್ಣ ರಾಜೂರು, ಪ್ರಧಾನ ಸಂಪಾದಕ – ಸಂಪತ್ ತರೀಕೆರೆ