ಮಂಗಳೂರು : ಮಂಗಳೂರು ಮೂಲದ ಡಾ| ಜಯಪ್ರಕಾಶ್ ಕೆ.ಪಿ. ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿ ವಿಶೇಷ ತುರ್ತು ನಿಗಾ ಕೇಂದ್ರ -ಐಸಿಯು ವಿಭಾಗಕ್ಕೆ ದಾಖಲಾಗುವ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುವ ವೈದ್ಯಕೀಯ ಕೋರ್ಸ್ “ಡಿಎಂ ಕ್ರಿಟಿಕಲ್ ಕೇರ್ ಮೆಡಿಸಿನ್’ ಪದವಿಯನ್ನು ಮುಂಬಯಿಯ ಟಾಟಾ ಮೆಮೋರಿಯಲ್ ಸೆಂಟರ್‌ನಿಂದ ಪಡೆದುಕೊಂಡಿದ್ದಾರೆ.
ಭಾರತದಲ್ಲಿ ಈ ವಿಶೇಷ ಪರಿಣತಿಯ ವೈದ್ಯಕೀಯ ಪದವಿ ಪಡೆದಿರುವ ಕೆಲವೇ ಮಂದಿ ವೈದ್ಯರಲ್ಲಿ ಡಾ| ಜಯಪ್ರಕಾಶ್
ಅವರು ಓರ್ವರಾಗಿದ್ದಾರೆ. ಇತ್ತೀಚೆಗೆ ಮುಂಬಯಿಯಲ್ಲಿ ಜರಗಿದ ಘಟಿಕೋತ್ಸವದಲ್ಲಿ ಅವರು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪದವಿಯನ್ನು ಸ್ವೀಕರಿಸಿದರು.
ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಅವರು ಮುಂಬಯಿಯ ಟಾಟಾ ಮೆಮೋರಿಯಲ್ ಸೆಂಟರ್‌ನಲ್ಲಿ ಮೂರು ವರ್ಷಗಳ ಡಿಎಂ ಕ್ರಿಟಿಕಲ್ ಕೇರ್ ಮೆಡಿಸಿನ್ ಪದವಿ ವ್ಯಾಸಂಗ ಪೂರೈಸಿ ಪ್ರಸ್ತುತ ಅಲ್ಲೆ ಸೇವೆ ಸಲ್ಲಿಸುತ್ತಿದ್ದಾರೆ. ಡಾ| ಜಯಪ್ರಕಾಶ್ ಅವರು ಸಹಕಾರ ಭಾರತಿಯ ರಾಷ್ಟ್ರೀಯ ಪ್ರಮುಖ ಕೊಂಕೋಡಿ ಪದ್ಮನಾಭ ಅವರ ಪುತ್ರ.