Advertisement

ಡಾ. ಎಚ್‌ಎನ್‌ ಅವರದ್ದು ಸರಳ ವ್ಯಕ್ತಿತ್ವ

12:44 AM Jul 17, 2019 | Lakshmi GovindaRaj |

ಬೆಂಗಳೂರು: ವೈಚಾರಿಕತೆ, ಸರಳತೆ ಜೊತೆಗೆ ವಾಸ್ತುಶಿಲ್ಪಿ ಕಲ್ಪನೆಗಳನ್ನು ಹೊಂದಿದ್ದ ಡಾ. ಎಚ್‌ ನರಸಿಂಹಯ್ಯ ಅವರದು ಸರಳ ವ್ಯಕ್ತಿತ್ವ ಎಂದು ಲೇಖಕ ಡಾ.ಬಿ.ಆರ್‌.ಮಂಜುನಾಥ ಹೇಳಿದರು.

Advertisement

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಯೋಜಿಸಿದ್ದ ಡಾ.ಎಚ್‌.ಎನ್‌.ಅವರ ವೈಚಾರಿಕ ಚಿಂತನೆಗಳು ಎಂಬ ಚಿಂತನಗೋಷ್ಠಿಯಲ್ಲಿ ಮಾತನಾಡಿದರು.

ನೈತಿಕ ನಾಯಕತ್ವ ಹೊಂದಿದ್ದ ಅವರು ವೈಚಾರಿಕತೆ ಹಾಗೂ ವಿಜ್ಞಾನದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಮೂಡನಂಬಿಕೆ, ಪವಾಡ, ಜ್ಯೋತಿಷ್ಯಗಳನ್ನು ವಿರೋಧಿಸುತ್ತಿದ್ದ, ಅವರು ಅಂತಹ ಪವಾಡ ಪರುಷ ನಿಜ ಬಯಲು ಮಾಡಲು ಸತ್ಯಶೋಧನೆ ಎಂಬ ಸಮಿತಿ ರಚಿಸಿಕೊಂಡಿದ್ದರು ಎಂದರು.

ಧೈರ್ಯ ಹಾಗೂ ನೇರವಂತಿಕೆ ಅವರು ಖ್ಯಾತಿ ಪಡೆದ ನರಸಿಂಹಯ್ಯ, ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಮೂರು ಬಾರಿ ಪತ್ರ ಬರೆದು ಪವಾಡವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕೆಂದು ಕೇಳಿಕೊಂಡರು. ಕೆಲ ವಿಜ್ಞಾನಿಗಳೊಂದಿಗೆ ಪುಟ್ಟಪರ್ತಿ ಆಶ್ರಮಕ್ಕೆ ಹೋಗಿದ್ದರು, ಅಲ್ಲಿ ಪ್ರವೇಶ ನೀಡದಿದ್ದರಿಂದ ವಾಪಸ್ಸಾದರು ಎಂದು ತಿಳಿಸಿದರು.

ಡಾ. ನರಸಿಂಹಯ್ಯ, ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂರವರ ಸಿದ್ಧಾಂತಗಳಿಗೆ ಮನಸೋತಿದ್ದರು. ನೆಹರೂ ಅವರ ಸ್ನೇಹಶೀಲತೆ ವೈಜ್ಞಾನಿಕ ಮನೋಭಾವನೆಯಂತ ಅಂಶಗಳನ್ನು ಮೆಚ್ಚಿಕೊಂಡಿದ್ದರು ಎಂದರು.

Advertisement

ವಿಶ್ವವಿದ್ಯಾಲಯಗಳು ವಿಶ್ವದ ಜ್ಞಾನವನ್ನು ಪ್ರಸರಿಸುವ ಕೆಲಸ ಮಾಡುತ್ತವೆ. ಕಟ್ಟಡದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಉತ್ತಮ ವಿಚಾರ, ಜ್ಞಾನ ನೀಡದೆ, ಇಡೀ ದೇಶ, ರಾಜ್ಯದ ಜನತೆಗೆ ಅದು ತಲುಪಿಸುವ ಕಾರ್ಯವನ್ನು ವಿಶ್ವವಿದ್ಯಾಲಯಗಳು ಮಾಡಬೇಕೆಂದು ಹೇಳುತ್ತಿದ್ದರು ಎಂದರು.

ನರಸಿಂಹಯ್ಯ ಉಪಕುಲಪತಿಯಾದ ಸಂದರ್ಭದಲ್ಲಿ ಜಾತ್ಯಾತೀತವಾಗಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಶಿಕ್ಷಣ ಸಂಸ್ಥೆಗಳಿಗಾಗಿ ಹಗಲಿರುಳೂ ಶ್ರಮಿಸಿ ಶಿಕ್ಷಣ ಕ್ರಾಂತಿ ಮಾಡಿದರು ಎಂದು ಹೇಳಿದರು. ಎಂ.ತಿಮ್ಮಯ್ಯ, ಶ್ರೀಧರ ಆರ್‌.ರಾಮಸ್ವಾಮಿ, ಸಿದ್ದಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next