Advertisement

ಪ್ರಧಾನಿಗೆ ತುಳುವಿನಲ್ಲೇ ಸ್ವಾಗತಿಸಿದ ಡಾ.ಹೆಗ್ಗಡೆ 

12:26 PM Oct 29, 2017 | |

ಬೆಳ್ತಂಗಡಿ: ಇಲ್ಲಿನ ರತ್ನವರ್ಮ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶದಲ್ಲಿ  ಪಾಲ್ಗೊಂಡ  ಪ್ರಧಾನಿ ನರೇಂದ್ರ ಮೋದಿ  ಅವರನ್ನು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ತುಳುವಿನಲ್ಲೇ ಸ್ವಾಗತಿಸಿದರು. 

Advertisement

ಇರೆಗ್‌ ಯಂಕಲ್‌ನ ಸ್ವಾಗತ… ಎಂದ ಡಾ.ಹೆಗ್ಗಡೆ, ತುಳು ಭಾಷೆಗೆ ಇತರ ಪ್ರಾದೇಶಿಕ ಭಾಷೆಗಳ ಸ್ಥಾನಮಾನ ಸಿಕ್ಕಿಲ್ಲ. ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನೆರೆದಿದ್ದ ಲಕ್ಷಕ್ಕೂ ಅಧಿಕ  ಜನರ ಎದುರು ವೇದಿಕೆಯಲ್ಲೇ ಮನವಿ ಮಾಡಿದರು. 

ಈ ವೇಳೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಕಂಬಳದಲ್ಲಿ ಕೋಣಗಳಿಗೆ ಕಟ್ಟುವ ನೊಗದ ಆಕೃತಿಯ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. 

ಡಾ. ಹೆಗ್ಗಡೆ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವರಗಳನ್ನು ನೀಡಿ ನಮ್ಮ ಸಣ್ಣ ಗ್ರಾಮಕ್ಕೆ ಬಂದ ಮೋದಿಗೆ ಧನ್ಯವಾದಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next