Advertisement

ಡಾ|ಹರ್ಷಿತಾ ಶೆಟ್ಟಿಗೆ ನೀಟ್‌ –ಪಿಜಿ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್‌

05:35 PM Sep 30, 2021 | Team Udayavani |

ಶಿರ್ವ : ಅಖೀಲಾ ಭಾರತ ನೀಟ್‌-ಪಿಜಿ 2021ರ ಪರೀಕ್ಷೆಯಲ್ಲಿ ಪುಣೆಯ ಹೊಟೇಲ್‌ ಉದ್ಯಮಿ ಶಿರ್ವ ಪಂಜಿಮಾರು ಮಾಣಾಯಿ ದೊಡ್ಡ ಮನೆ ಹರೀಶ್‌ ಎನ್. ಶೆಟ್ಟಿ ಮತ್ತು ವಾರಿಜಾ ಶೆಟ್ಟಿ ದಂಪತಿಯ ಪುತ್ರಿ ಡಾ| ಹರ್ಷಿತಾ ಎಚ್‌.ಶೆಟ್ಟಿ 4ನೇ ರ್‍ಯಾಂಕ್‌ ಗಳಿಸಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

Advertisement

ಪುಣೆಯ ಬಿ.ಜೆ.ಮೆಡಿಕಲ್‌ ಕಾಲೇಜಿನಲ್ಲಿ ಪದವಿ ಗಳಿಸಿದ ಡಾ| ಹರ್ಷಿತಾ ಶೆಟ್ಟಿ ಅಂತಿಮ ವರ್ಷದ ಎಂಬಿಬಿಎಸ್‌ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕ ಪಡೆದಿ️ದ್ದು,3ನೇ ವರ್ಷದ ಎಂಬಿಬಿಎಸ್‌ ಪರೀಕ್ಷೆಯಲ್ಲಿ OPTHALMOLOGY ವಿಭಾಗದಲ್ಲಿಯೂ ಚಿನ್ನದ ಪದಕ ಗಳಿಸಿದ್ದರು. ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ವಿಶಿಷ್ಟ ಶ್ರೇಣಿಯಲ್ಲಿ ಮುಗಿಸಿದ್ದ ಈಕೆ 2015-16 ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಜರ್ಮನ್ ಭಾಷೆಯೊಂದಿ️ಗೆ ವಿಜ್ಞಾನ ವಿಷಯ ಕಲಿತು ಮಹಾರಾಷ್ಟದ ಸಿ.ಇ.ಟಿ. ಪರೀಕ್ಷೆಯಲ್ಲಿ 200ರಲ್ಲಿ 199 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರು.

ಇದನ್ನೂ ಓದಿ :ಸತತ ಮೂರನೇ ದಿನವೂ ಬಾಂಬೆ ಷೇರುಪೇಟೆಯಲ್ಲಿ ಕಾಣದ ಚೇತರಿಕೆ; 286 ಅಂಕ ಇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next