Advertisement

ಡಾ|ಜಿ.ಡಿ.ಜೋಶಿ ಪ್ರತಿಷ್ಠಾನ:ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ

12:12 PM Aug 22, 2017 | Team Udayavani |

ಮುಂಬಯಿ: ಡಾ| ಜಿ. ಡಿ. ಜೋಶಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಆ. 12 ರಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಜಿ. ಡಿ. ಜೋಶಿ ಅವರ ಕುರ್ಲಾದ ಮನೆಯಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ತಾರಾ ಆರ್‌. ಬಂಗೇರ ಅವರ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಸ್ವರಚಿತ ತುಳು ಕವನವನ್ನು ಪ್ರಸ್ತುತಪಡಿಸಿ, ಸಾಹಿತ್ಯ ಪ್ರಕಾರಗಳ ಬಗ್ಗೆ ವಿವರಿಸಿದರು. ನಾವು ನಮ್ಮಲ್ಲಿ ಅಸ್ತಿತ್ವವನ್ನು ಹುಡುಕಿಕೊಳ್ಳುವ ಅವಶ್ಯಕತೆಯಿದೆ ಎಂದು ನುಡಿದರು. ಡಾ| ಜಿ. ಡಿ. ಜೋಶಿ ಅವರು ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ನಡೆದುಕೊಂಡು ಬಂದ ಬಗೆಯನ್ನು ವಿಶ್ಲೇಷಿಸಿದರು.

ತಾರಾ ಬಂಗೇರ ಅವರು ಪ್ರಶ್ನೆ ಕವನವನ್ನು ಮತ್ತು ಲಕ್ಷಿ¾à ಪೂಜಾರಿ ಅವರು ಚಂದ್ರಮ ಕವನವನ್ನು ವಾಚಿಸಿದರು. ಅರವಿಂದ ಮುದ್ಗಲ್‌ ಅವರು ಜೇಷ್ಠ ನಾಗರಿಕರು ಎಂಬ ಹನಿಗವನ, ರಮೇಶ್‌ ಕೆ. ಪುತ್ರನ್‌ ಅವರು ಶಿರಲ್ಲಿನ ಮಹಾದೇವ ಶಿವ ವಚನವನ್ನು ಹಾಗೂ ಶಾರದಾ ಅಂಬೆಸಂಗೆ ಅಮ್ಮ ಕವನ ಹಾಗೂ ಮರುಳ, ಚುನಾವಣೆ ಎಂಬ ಚುಟುಕುಗಳನ್ನು ಪ್ರಸ್ತುತಪಡಿಸಿದರು.

ಪಂಡಿತ್‌ ಜಿ. ಜಿ. ಜೋಶಿ ಅವರು ಹಿಂದೂಸ್ಥಾನಿ ಶಾಸ್ತಿÅàಯ ಸಂಗೀತದಲ್ಲಿ ಕುಮರಿಯ ಸ್ಥಾನದ ಬಗ್ಗೆ ಲೇಖನ ಮಂಡಿಸಿದರು. ಡಾ| ಕರುಣಾಕರ ಶೆಟ್ಟಿ ಅವರು ಹೊರನಾಡ ಕನ್ನಡಿಗರು ಕವನ ಹಾಗೂ ಡಾ| ಕೆ. ಗೋವಿಂದ ಭಟ್‌ ಅವರು ಋಣ ಕವನವನ್ನು ಓದಿದರು. ಪ್ರತಿಷ್ಠಾನದ ಕೋಶಾಧಿಕಾರಿ ಡಾ| ಕರುಣಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next