Advertisement

ಡಾ|ಜಿ. ಶಂಕರ್‌ ಟ್ರಸ್ಟ್‌-ಸಾಮೂಹಿಕ ವಿವಾಹವೀಳ್ಯ ಶಾಸ್ತ್ರ

07:35 AM Apr 03, 2018 | Team Udayavani |

ಉಡುಪಿ: ಉಚಿತ ಸಾಮೂಹಿಕ ವಿವಾಹವಾಗುವ ವಧು-ವರರಿಗೆ ವೀಳ್ಯ ಶಾಸ್ತ್ರ ಕಾರ್ಯಕ್ರಮವು ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಶ್ಯಾಮಿಲಿ ಸಭಾಭವನದಲ್ಲಿ ಸೋಮವಾರ ನಡೆಯಿತು.

Advertisement

ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಅವರು ಮಾತನಾಡಿ, ಕಳೆದ 10 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಅಂಗವಿಕಲರು ಕೂಡ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷದ್ದು ಸೇರಿ 10 ವರ್ಷದಲ್ಲಿ ಇಲ್ಲಿಯರೆಗೆ 267 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. 49 ಮಂದಿಯ ಸಾಮೂಹಿಕ ಉಚಿತ ವಿವಾಹವು ಎ. 19ರಂದು ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಭವಿಷ್ಯದ ದೃಷ್ಟಿಯಿಂದ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

ಶಾಲಿನಿ ಜಿ. ಶಂಕರ್‌, ಯಶಪಾಲ್‌ ಎ. ಸುವರ್ಣ, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ, ಕಾರ್ಯದರ್ಶಿ ಸತೀಶ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.ವಿವಾಹಪೂರ್ವ ಜೋಡಿಗಳಾದ ವಧುವಿಗೆ ಸೀರೆ, ರವಿಕೆ ಕಣ, ಕಾಲುಂಗುರ ಹಾಗೂ ವರನಿಗೆ ಪಂಚೆ, ಧೋತಿ, ಶರ್ಟು, ಪೇಟ ಇನ್ನಿತರ ಮದುವೆ ಸಾಮಗ್ರಿಗಳನ್ನು ಡಾ| ಜಿ. ಶಂಕರ್‌ ಅವರು ವಧು-ವರರ ಕುಟುಂಬಿಕರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ದೊಡ್ಡ ಭಾಗ್ಯ
ಸಾಮೂಹಿಕ ವಿವಾಹ ವೆಂದು ಯಾರೂ ಕೀಳರಿಮೆ ಪಡಬೇಡಿ. ದುಂದು ವೆಚ್ಚವಿಲ್ಲದೆ ಸಾವಿರಾರು ಮಂದಿಯ ಸಮ್ಮುಖ ಮದುವೆ ಮಾಡಿಸ ಲಾಗುತ್ತದೆ. ಇದಕ್ಕಿಂತ ದೊಡ್ಡ ಭಾಗ್ಯವಿಲ್ಲ.

-ಡಾ| ಜಿ. ಶಂಕರ್‌, ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ  

Advertisement

Udayavani is now on Telegram. Click here to join our channel and stay updated with the latest news.

Next