Advertisement

ಕೋವಿಡ್‌-19 ಮಹಾರಾಷ್ಟ್ರ ಉಸ್ತುವಾರಿ ಸಮಿತಿ ಸದಸ್ಯರಾಗಿ ಡಾ|ಶಿವ ಮೂಡಿಗೆರೆ ನೇಮಕ

09:49 AM Jun 18, 2020 | mahesh |

ಮುಂಬಯಿ: ನಗರದ ಉದ್ಯಮಿ, ಸಮಾಜ ಸೇವಕ ಡಾ| ಶಿವ ಮೂಡಿಗೆರೆ ಅವರನ್ನು ಕೇಂದ್ರ ಗೃಹ ಇಲಾಖೆಯ ಮಹಾರಾಷ್ಟ್ರ ಕೋವಿಡ್‌-19 ಉಸ್ತುವಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೋವಿಡ್‌-19ರ ವಿಶೇಷ ಸ್ಥಿತಿ ಸಲಹಾ ಸಮಿತಿಯ ಅನುಮೋದನೆಯಲ್ಲಿ ಅಂಗೀಕರಿಸಲ್ಪಟ್ಟ ಗೌರವಾನ್ವಿತ ಕೇಂದ್ರೀಯ ಗೃಹ ಸಚಿವರ ಅಧಿಕೃತ ಆದೇಶಗಳಿಗೆ ಅನುಸಾರವಾಗಿ, ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕೋವಿಡ್‌-19 ಮಾನಿಟ ರಿಂಗ್‌ ಕಮಿಟಿ ರಚಿಸಲಾಗಿದ್ದು ಎಸ್‌ಒಪಿ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕುಂದುಕೊರತೆಗಳ ಮೇಲ್ವಿಚಾರಣೆ ಮತ್ತು ಪರಿಹಾರ ಹಾಗೂ ಎಸ್‌ಒಪಿ ಬದಲಾವ ಣೆಗಳು, ವಾಸ್ತವಿಕ ಮತದಾನ ನಿಮಿತ್ತ ದೇಶದ ವಿವಿಧ ಭಾಗಗಳಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಗೃಹ ಸಚಿವಾಲಯದ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಮುಂಬಯಿಯಲ್ಲಿ ಸಮಾಜಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಪ್ರತಿವರ್ಷ ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಆರ್ಥಿಕ ನೆರವನ್ನಿತ್ತು ಸಹಕರಿಸುತ್ತಿದ್ದಾರೆ.  ಪ್ರಸ್ತುತ ಮುಂಬಯಿಯ “ಆ್ಯಂಟಿ ಕರೆಪ್ಷನ್‌ ಆ್ಯಂಡ್‌ ಇಂಟೆಲಿಜೆನ್ಸ್‌ ಸಮಿತಿ-39 ಇದರ ಅಧ್ಯಕ್ಷರಾಗಿ, ರಾಯಗಢ ಜಿಲ್ಲೆಯ ಮಾನವಾಕಾರದ ಅಧ್ಯಕ್ಷರಾಗಿ, ನೆರೊಲ್‌ನ ಮಣಿಕಂಠ ಸೇವಾ ಸಮಿತಿ ಮತ್ತು ಧರ್ಮಶಾಸ್ತ ಚಾರಿಟೆಬಲ್‌ ಟ್ರಸ್ಟ್‌ನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಮಾಜ ಸೇವೆಯನ್ನು ಗಮನಿಸಿ ಯುನೈಟೆಡ್‌ ಸ್ಟೇಟ್‌ ಆಫ್‌ ಅಮೇರಿಕಾದ ಕಿಂಗ್ಸ್‌ ಯುನಿ ವರ್ಸಿಟಿ ಮತ್ತು ಎಸ್‌ಎಎಂಎಸ್‌ ಟ್ರಸ್ಟ್‌ ಸಂಯುಕ್ತವಾಗಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿರುವುದಲ್ಲದೆ, ಹಲವಾರು ಸಂಘ- ಸಂಸ್ಥೆಗಳು ಸಮ್ಮಾನ, ಪುರಸ್ಕಾರವನ್ನಿತ್ತು ಅಭಿನಂದಿಸಿವೆ. ಪ್ರಸ್ತುತ ಪತ್ನಿ ಜ್ಯೋತಿ ಮೂಡಿಗೆರೆ ಮತ್ತು ಮಕ್ಕಳು ಮಾ| ಸಿದ್ಧಾರ್ಥ್ ಮತ್ತು ಮಾ| ಶ್ರೀಪಾದ ಅವರೊಂದಿಗೆ ನವಿಮುಂಬಯಿಯ ನೆರೂಳ್‌ನಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next