Advertisement
ತಾಲೂಕಿನ ಕಸಬಾ ಹೋಬಳಿ ಹಂಗರಹಳ್ಳಿ ಸರ್ವೆ 46, ಹಂದಲಕುಪ್ಪೆ ಸರ್ವೆ ನಂ 1, ತರೀಕರೆ ಸರ್ವೆ ನಂ 80 ಹಾಗೂ 81 ರಲ್ಲಿ ನಡೆಯುತ್ತಿರುವ ಎಂಟು ಗಣಿಗಾರಿಕೆ ಪ್ರದೇಶಕ್ಕೆ ಮಂಗಳವಾರ ಬೇಟಿ ನೀಡಿ ಪರಿಶೀಲಿಸಿದ ಡಾ.ಸಿ.ಎಸ್.ದ್ವಾರಕಾನಾಥ್ ಇಲ್ಲಿನ ಪರಿಸ್ಥಿಯನ್ನು ನೋಡಿ ಅಧಿಕಾರಿಗಳು ತಾಲೂಕಿನಲ್ಲಿ ಇದ್ದಾರೋ, ಇಲ್ವೋ ಎಂದು ಪ್ರಶ್ನಿಸಿದರು, ಇಷ್ಟೇಲ್ಲಾ ಅಕ್ರಮಗಳು ನಡೆಯುತ್ತಿದ್ದರು ಏಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಕಲ್ಲುಗಣಿಕಾರಿಕೆಗೆ ಭೂಮಿ ಮಟ್ಟದದಿಂದ ಎತ್ತರದಲ್ಲಿ ಇದ್ದ ಬಂಡೆಯನ್ನು ಈಗ 150, 160 ಅಡಿ ಪಾತಾಳ ಮಟ್ಟದ ಅಳಕ್ಕೆ ಕೊರೆದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಡಾ.ಸಿ.ಎಸ್.ದ್ವಾರಕನಾಥ್ ಅವರೇ ಕ್ಷಣಕಾಲ ಅವಕ್ಕಾದರು. ಇದನ್ನು ನೋಡಿಕೊಂಡು ಅಧಿಕಾರಿಗಳು ಸುಮ್ಮನೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
Related Articles
Advertisement
ಅಡಳಿತ ನಡೆಸುವ ವಿಧಾನಸೌದದಿಂದ ಕೇವಲ 80 ಕಿ.ಮೀ ಸಮೀಪದಲ್ಲೇ ಇಷ್ಟೋಂದು ಮಾನವ ಹಕ್ಕು ಉಲ್ಲಂಘನೆಯಾಗಿ ಜನ ಜೀವನ ಅಸ್ಥವ್ಯಸ್ಥವಾಗಿದ್ದರು ಆಡಳಿತ ನಡೆಸುವವರು ಇಲ್ಲವೇ ಅಧಿಕಾರಿ ಶಾಹಿಗಳು ಗಮನ ಹರಿಸದೇ ಇರುವುದು ಇಲ್ಲಿನ ಜನರ ದುರ್ದೇವವಾಗಿದೆ ಎಂದು ತಿಳಿಸಿದರು.
ಇಲ್ಲಿನ ಗಣಿಕಾರಿಗೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಎಲ್ಲಾ ನ್ಯೂನ್ಯತೆಗಳನ್ನು ಪಟ್ಟಿ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದೇನೆ. ನಾನೂ ಅಲ್ಲೇ ಕುಳಿತು ಕೇವಲ ಪೇಪರ್ ನಲ್ಲಿ ಮಾತ್ರ ನೋಡಿದರೇ ಇಲ್ಲಿ ಭೀಕರತೆ ನನಗೆ ಅರ್ಥವಾಗುತ್ತಿರಲಿಲ್ಲ ಈಗ ನನಗೆ ಸಂಪೂರ್ಣ ಅರ್ಥವಾಗಿದೆ. ಮಾನವ ಹಕ್ಕು ಆಯೋಗ ಸೇರಿದಂತೆ ಸರಕಾರದ ಗಮನ ಸೆಳೆಯುವ ಕೆಲಸ ಮಾಡುವ ಜೊತೆಗೆ ಅಲೆಮಾರಿ ಹಾಗೂ ಅದಿವಾಸಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯಾವನ್ನು ಕಾನೂನು ಪ್ರಕಾರ ನ್ಯಾಯಾಲಯದಲ್ಲಿಯೂ ಹೋರಾಟ ನಡೆಸುತ್ತೇನೆ. ಸಾಧ್ಯವಾದರೇ ವಿರೋಧ ಪಕ್ಷದ ನಾಯಕರ ಗಮನಕ್ಕೆ ಪರಿಸ್ಥಿತಿ ವಿವರಿಸಿ ಸದನ ಸಮಿತಿಯಿಂದ ತನಿಖೆ ನಡೆಸುವ ನಿಟ್ಟಿನಲ್ಲಿಯೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಕುರಿಗಾಹಿಯ ಕಷ್ಟ ಕೇಳಿದರು: ಕಲ್ಲುಗಣಿಕಾರಿಕೆ ಸ್ಥಳ ಪರಿಶೀಲನೆ ನಡೆಸಿ ಬರುತ್ತಿದ್ದ ಡಾ.ಸಿ.ಆರ್.ದ್ವಾರಕನಾಥ್ ಅವರಿಗೆ ಕುರಿಗಾಹಿ ಜಯಮ್ಮ ಅಡ್ಡಲಾಗಿ ಸಿಕ್ಕರು. ಎಷ್ಟು ಕುರಿ ಜಯಮ್ಮ ಎಂದು ಕೇಳಿದಾಗ ಸಾರ್ 80 ಕುರಿ ಇದ್ದವು ಈಗ ಕಲ್ಲುಗಣಿಕಾರಿಕೆಯಿಂದ ದೂಳು ಹಾಗೂ ಕಲುಷಿತು ನೀರು ಕುಡಿದ 20 ಕುರಿ ಒಂದು ತಿಂಗಳಲ್ಲಿ ಸತ್ತು ಹೋಗಿವೆ ಎಂದು ಕಷ್ಟ ಹೇಳಿಕೊಂಡ ಮಹಿಳೆಗೆ ಆಯೋಗದ ಮಾಜಿ ಅಧ್ಯಕ್ಷರು ಸಮಾಧಾನ ಹೇಳಿ ಒಳ್ಳೆ ಕಾಲ ಬರುತ್ತದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ಕಾಡುಗೊಲ್ಲ ಆಶ್ಮತೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ, ಗ್ರಾಮದ ಮುಖಂಡ ಧನಂಜಯ್ಯ, ರಾಜಣ್ಣ, ಮಾರೇಗೌಡ, ಜಯಮ್ಮ, ಶಂಕರ್ ನಾಯ್ಕ್, ಶಿವಕುಮಾರ್ ನಾಯ್ಕ್, ನವೀನ, ದೊಡ್ಡಯ್ಯ ಮುಂತಾದವರು.